ಪವಾಡ ಪುರುಷನ ಅಂತ್ಯ: ಸಾವಿಗೆ 2 ದಿನ ಮುನ್ನವೇ ಆಹಾರ ಸೇವನೆ ನಿಲ್ಲಿಸಿದ್ದ ಸಿದ್ದಗಂಗೆಯ ಯೋಗಿ!
ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ತಾವು ಕೊನೆಯುಸಿರೆಳೆದಿದ್ದಾರೆ. ವಿಶೇಷವೆಂದರೆ ಶ್ರೀಗಳು ಲಿಂಗೈಕ್ಯರಾಗುವುದಕ್ಕೆ ಎರಡು ದಿನಗಳಿಂದಲೂ ಯಾವುದೇ ಬಗೆಯ......
ಪವಾಡ ಪುರುಷನ ಅಂತ್ಯ: ಸಾವಿಗೆ 2 ದಿನ ಮುನ್ನವೇ ಆಹಾರ ಸೇವನೆ ನಿಲ್ಲಿಸಿದ್ದ ಸಿದ್ದಗಂಗೆಯ ಯೋಗಿ!
ತುಮಕೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ತಾವು ಕೊನೆಯುಸಿರೆಳೆದಿದ್ದಾರೆ. ವಿಶೇಷವೆಂದರೆ ಶ್ರೀಗಳು ಲಿಂಗೈಕ್ಯರಾಗುವುದಕ್ಕೆ ಎರಡು ದಿನಗಳಿಂದಲೂ ಯಾವುದೇ ಬಗೆಯ ದ್ರವ ಅಥವಾ ಗಟ್ಟಿ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿದ್ದರು. ಶ್ವಾಸಕೋಶದ ಸೋಂಕಿನಿಂದಾಗಿ ಅನಾರೋಗ್ಯಕ್ಕೀಡಾಗಿದ್ದ ಶ್ರೀಗಳ ಆರೋಗ್ಯ ಸುಧ್ಗಾರಣೆಗಾಗಿ ವೈದ್ಯರು ಮಾಡಿದ ಪ್ರಯತ್ನಗಳು ಫಲ ನೀಡಲಿಲ್ಲ.
ತುಮಕೂರು ಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಪರಮೇಶ್ ಶಿವಣ್ಣ ಅವರು ಹೇಳಿದಂತೆ "ಡಿಸೆಂಬರ್ 1ರಿಂದಲೂ ಶ್ರೀಗಳು ಅನಾರೋಗ್ಯಪೀಡಿತರಾಗಿದ್ದರು.ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ಸ್ಟಂಟ್ ಅಳವಡಿಕೆಯಿಂದ ತುಸು ಚೇತರಿಕೆ ಕಂಡುವ್ಬಂದಿತ್ತು. ಆದರೆ ಶೀಘ್ರವೇ ಮತ್ತೆ ಖಾಯಿಲೆಗೆ ತುತ್ತಾಗಿದ್ದರು.ಸ್ಟಂಟ್ ಅಳವಡಿಕೆ ಸಮಸ್ಯೆಯಾದ ಬಳಿಕ ಅವರನ್ನು ಚಿಕಿತ್ಸೆಗಾಗಿ ಚೆನ್ನೈಗೆ ಕರೆದೊಯ್ಯಲಾಗಿತ್ತು"
"ಅವರಿಗೆ ಉಸಿರಾಟದ ತೊಂದರೆ ಇದ್ದು ಇದಕ್ಕಾಗಿ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗುವ ಮುನ್ನ ಅವರಿಗೆ 15 ದಿನ ಚಿಕಿತ್ಸೆ ನೀಡಲಾಗಿತ್ತು. ಆ ವೇಳೆ ಸಮಸ್ಯೆಯಿಂದ ಶ್ರೀಗಳು ಶೀಘ್ರ ಚೇತರಿಸಿಕೊಂಡಿದ್ದರು.ಮತ್ತೆ ಸಮಸ್ಯೆ ತಲೆದೋರಿದ್ದಾಗ ಸಿದ್ದಗಂಗಾ ಆಸ್ಪತ್ರೆಯಲ್ಲಿ 12 ದಿಮ್ನ ಚಿಕಿತ್ಸೆ ನೀಡಲಾಗಿತ್ತು.. ಶ್ವಾಸಕೋಶದ ಉರಿಯೂತದ ಹೊರತಾಗಿ - ಶ್ವಾಸಕೋಶದ ಒಳಗೆ ದ್ರವ (ನೀರು) ತುಂಬಿಕೊಂಡಿತ್ತು. ಇದರಿಂದ ಅವರ ಅಲ್ಬಿನ್ ಸ್ಟೆಪ್ ಗಳು ಕಡಿಮೆಯಾಗಿದ್ದವು. ಇದೇ ಉಸಿರಾಟದ ಸಮಸ್ಯೆಗೆ ಮೂಲ ಕಾರಣ.ದಿನದ ೨೪ ಗಂಟೆ ಕಾಲ ವೈದ್ಯರ ತಂಡ ಹಾಜರಿರುತ್ತಿದ್ದರೂ ಚಳಿಗಾಲವಾಗಿರುವ ಕಾರಣ ಸಮಸ್ಯೆ ಇನ್ನಷ್ಟು ಜಟಿಲವಾಗಿತ್ತು.ನಿಧನಕ್ಕೆ ಕೆಲ ದಿನಗಳ ಮುನ್ನವೇ ಶ್ರೀಗಳು ತಮ್ಮನ್ನು ಮಠಕ್ಕೆ ಕರೆದೊಯ್ಯುವಂತೆ ಒತ್ತಾಯಿಸಿದ್ದರು" ವೈದ್ಯರಾದ ಶಿವಣ್ಣ ಹೇಳಿದ್ದಾರೆ.
ವೈದ್ಯಕೀಯ ಅದ್ಭುತ
ತುಮಕೂರು, ಬೆಂಗಳೂರು ಮತ್ತು ಚೆನ್ನೈನಲ್ಲಿ ಹಲವಾರು ಸಂದರ್ಭಗಳಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಶ್ರೀಗಳ ಶೀಘ್ರ ಗುಣಮುಖತೆಯನ್ನು ವೈದ್ಯಲೋಕದ ಅದ್ಭುತವೆಂದೇ ಭಾವಿಸಿದ್ದಾರೆ. ಅವರು ಅನೇಕ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಪಡೆದ ಬಳಿಕ ಸಹ ದೇಹದಲ್ಲಿ ಶಕ್ತಿ ಸಂಚಯ ಅಧಿಕವಾಗುತ್ತಲೇ ಇತ್ತು.
ಕಳೆದ ಎರಡು ವರ್ಷಗಳಲ್ಲಿ ತನ್ನ ಯಕೃತ್ತಿನಭಾಗದಲ್ಲಿ 8 ಸ್ಟೆಂಟ್ ಗಳನ್ನು ಅಳವಡಿಸಿಕೊಂಡಿದ್ದರೂ ಶ್ರೀಗಳು ನಿತ್ಯದಲ್ಲಿ ಚಟುವಟಿಕೆಯಿಂಡಲೇ ಇರುತ್ತಿದ್ದದ್ದು ಅವರ ಜೀವನೋತ್ಸಾಹಕ್ಕೊಂದು ಸಾಕ್ಷಿ.ಡಿಸೆಂಬರ್ 2018 ರಲ್ಲಿ ಆಸ್ಪತ್ರೆಯ ಇದ್ದಾಗ ಸಹ ಅವರು ತಮ್ಮ ನಿತ್ಯದ ಶಿವಪೂಜೆಯನ್ನು ಬಿಟ್ಟಿರಲಿಲ್ಲ.ಇದರಿಂದಾಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಹ ಸ್ವಾಮಿಗಳ ಅಪಾರ ಧೀಶಕ್ತಿ ಬಗ್ಗೆ ಗೌರವ ಮೂಡುವಂತಾಗಿತ್ತು.