ದೈವೀ ವ್ಯಕ್ತಿತ್ವಕ್ಕೆ ನಿದರ್ಶನ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತಟಸ್ಥ ನಿಲುವು ತಾಳಿದ್ದ ಶ್ರೀಗಳು

ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮಿಗಳ ವ್ಯಕ್ತಿತ್ವ ದೊಡ್ಡದೆನ್ನಲು ಅವರ ಜೀವನದಲ್ಲೇ ಅನೇಕ ಘಟನೆಗಳು ನಿದರ್ಶನವಾಗಿದೆ. ಅಂತಹುದರಲ್ಲಿ ಲಿಂಗಾಯತ ಧರ್ಮದ ಕುರಿತಂತೆ.....
ದೈವೀ ವ್ಯಕ್ತಿತ್ವಕ್ಕೆ ನಿದರ್ಶನ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತಟಸ್ಥ ನಿಲುವು ತಾಳಿದ್ದ ಶ್ರೀಗಳು
ದೈವೀ ವ್ಯಕ್ತಿತ್ವಕ್ಕೆ ನಿದರ್ಶನ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತಟಸ್ಥ ನಿಲುವು ತಾಳಿದ್ದ ಶ್ರೀಗಳು
ಬೆಂಗಳೂರು: ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮಿಗಳ ವ್ಯಕ್ತಿತ್ವ ದೊಡ್ಡದೆನ್ನಲು ಅವರ ಜೀವನದಲ್ಲೇ ಅನೇಕ ಘಟನೆಗಳು ನಿದರ್ಶನವಾಗಿದೆ. ಅಂತಹುದರಲ್ಲಿ ಲಿಂಗಾಯತ ಧರ್ಮದ ಕುರಿತಂತೆ ಅವರು ತಳೆದ ತಟಸ್ಥ ನಿಲುವೂ ಸಹ ಒಂದಾಗಿತ್ತು. ಕಳೆದ ವರ್ಷ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ತಾರಕಕ್ಕೇರಿದ್ದ ಸಮಯದಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಮಠಗಳು, ಸ್ವಾಮೀಝಿಗಳು ಲಿಂಗಾಯತ ಪ್ರತ್ಯೇಕ ಧರ್ಮ ಬೇಕು-ಬೇಡ ಎಂಬ ತಮ್ಮ ನಿಲುವಿನ ಕುರಿತು ವಿಭಿನ್ನ ಹೇಳಿಕೆ ನೀಡಿ ಬೇರೆ ಬೇರೆ ದಾರಿ ಹಿಡಿದಿದ್ದರು. ಆದರೆ ಶತಾಯುಷಿ ಸಿದ್ದಗಂಗೆಯ ಶ್ರೀಗಳು ಮಾತ್ರ ತಾವು ಯಾವೊಂದು ನಿಲುವೂ ತಾಳದೆ ಎರಡೂ ಕಡೆಯವರನ್ನು ಒಂದೇ ಬಗೆಯ ಪ್ರೀತಿಯಿಂದ ಆದರಿಸಿದ್ದರು.
"ಲಿಂಗಾಯತ ಪ್ರತ್ಯೇಕ ಧರ್ಮ ಚಳವಳಿ ಮುನ್ನಲೆಗೆ ಬಂದಿದ್ದ ಕಾಲದಲ್ಲಿ ಪ್ರತ್ಯೇಕ ಧರ್ಮ ಪರ, ವಿರುದ್ಧವಾಗಿದ್ದ ಎಲ್ಲಾ ಮಠ, ಸಮುದಾಯದ ನಾಯಕರು ಸಿದ್ದಗಂಗಾ ಶ್ರೀಗಳ ಭೇಟಿ ಮಾಡಿ ಅವರ ಬೆಂಬಲಕ್ಕಾಗಿ ಮನವಿ ಮಾಡಿದ್ದರು. ಆಗ ಶ್ರೀಗಳು ಎರಡೂ ಕಡೆಯಲ್ಲಿದ್ದ ಯಾರೊಬ್ಬರ ಭಾವನೆಗೆ ಘಾಸಿ ಮಾಡದೆ ಇಬ್ಬರ ಬಳಿಯೂ ಮಾತನಾಡಿದ್ದಲ್ಲದ್ಫ಼ೆ ತಾವು ಈ ಕುರಿತಂತೆ ತಟಸ್ಥ ನಿಲುವನ್ನು ತಾಳಿದರು" ಪತ್ರಿಕೆಯೊಡನೆ ಮಾತನಾಡಿದ ಚಿತ್ರದುರ್ಗ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಹೇಳಿದ್ದಾರೆ.
ರಾಜಕೀಯ ಪಕ್ಷಗಳ ಜತೆಗೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಇತರೆ ಮಠ ಮಾನ್ಯಗಳ ಬಗ್ಗೆ ಸಿದ್ದಗಂಗೆ ಶ್ರೀಗಳ ಮನೋಭಾವವೇನು ಎಂಬ ಬಗ್ಗೆ ಬೆಂಗಳೂರಿನ ಪ್ರತಿಷ್ಠಿತ ಮಠದ ಕಿರಿಯ ಶ್ರೀಗಳು ಪತ್ರಿಕೆಯೊಡನೆ ಮಾತನಾಡಿ "ಶ್ರೀಗಳು ಮಾತ್ರ ಎಂದಿಗೂ ರಾಜಕೀಯದಿಂದ ಸಮಾನ ಅಂತರವನ್ನು ಕಾಯ್ದುಕೊಂಡಿದ್ದರು.ರಾಜಕೀಯ ನಾಯಕರು ಮತ್ತು ಇತರರು  ತಮ್ಮ ತಮ್ಮ ಸ್ವಂತ ಕಾರಣಕ್ಕಾಗಿ, ಬೆಂಬಲಕ್ಕಾಗಿ ಶ್ರೀಗಳನ್ನು ಭೇಟಿಯಾಗುತ್ತಿದ್ದರು.ಆದರೆ ತಾವೇನೇ ನಿಲುವನ್ನು ತೆಗೆದುಕೊಂಡದ್ದಾದರೆ ಅದು ವಿರೋಧಿಗಳ ಮತ್ತು ಇವರ ನಡುವಿನ ಅಂತರವನ್ನು ಹೆಚ್ಚಿಸಲಿದೆ ಎಂದು ಸಿದ್ದಗಂಗೆ ಶ್ರೀಗಳಿಗೆ ಅರಿವಿತ್ತು.ಅವರಿಗೆ ತಮ್ಮ ಮಾತಿಗೆ ಇರುವ ಶಕ್ತಿಯ ಬಗ್ಗೆ ಗೊತ್ತಿತ್ತು" ಎಂದಿದ್ದಾರೆ.
ಸೋಮವಾರ ಶ್ರೀಗಳ ದರ್ಶನಕ್ಕೆ ಆಗಮಿಸಿದ್ದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕಸುರೇಶ್ ಕುಮಾರ್ ಮಾತನಾಡಿ "ಸ್ವಾಮೀಜಿ ವೈಯಕ್ತಿಕವಾಗಿ ಲಿಂಗಾಯತ ಹಾಗೂ ವೀರಶೈವ  ಎಂಬ ಬೇಧವನ್ನು ಕಾಣಲು ಬಯಸಿರಲಿಲ್ಲ.ಅದು ಅವರಿಗಿಷ್ಟವಿರಲಿಲ್ಲ.ಆದಾಗ್ಯೂ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಿದ್ದಗಂಗಾ ಶ್ರೀಗಳ ಒಪ್ಪಿಗೆ ಇದೆ ಎಂಬ ಊಹಾಪೋಹದ ವರದಿಗಳು ಹರಿದಾಡಿದ್ದವು. ವಾಸ್ತವದಲ್ಲಿ, ಅದು ನಿಜವಲ್ಲ. ನಂತರ ಮಠವೇ ಈ ಕುರಿತಂತೆ ಸ್ಪಷ್ಟನೆ ನೀಡಿತ್ತು.ಅವರು ತಟಸ್ಥ ನಿಲುವನ್ನುತಾಳಿದ್ದರು" ಎಂದರು.
ತನ್ನ ಜೀವನದುದ್ದಕ್ಕೆ ಹಸಿವು ನೀಗಿಸುವುದು, ವಿದ್ಯಾದಾನವೇ ಅತ್ಯಂತ ಮುಖ್ಯಎಂದು ಭಾವಿಸಿದ್ದ ಶ್ರೀಗಳು ಬಸವಣ್ಣನ ಮತ್ತು ಆತನ ಆದರ್ಶಗಳ ಅನುಯಾಯಿಯಾಗಿದ್ದರು.ಅನೇಕ ಮಂತ್ರಿಗಳು, ಮುಖ್ಯಮಂತ್ರಿಗಳು ಸೇರಿ ಹಲವು ಹಿರಿ ಕಿರಿಯ ನಾಯಕರು  ತಾವು ಅಅಧಿಕಾರ ವಹಿಸಿಕೊಂಡ ಬಳಿಕ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದರು.ಶ್ರೀಗಳು ಯಾವೊಂದು ರಾಜಕೀಯ ಒಲವನ್ನು ಲೆಕ್ಕಿಸದೆಯೇ ಪ್ರತಿಯೊಬ್ಬರಿಗೂ ಸಮಾನವಾಗಿ  ಆದರಿಸಿದ್ದರು.ಅಲ್ಲದೆ ಯಾವುದೇ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com