ವಿಜಯಪುರ: 60 ಸಾವಿರ ಬೆಲೆಯ ಚಿನ್ನದ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ

ಬಸ್ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ಬಸ್ ನಲ್ಲೇ ಬಿಟ್ಟು ಹೋಗಿದ್ದ ಚಿನ್ನಾಭರಣಗಳನ್ನು ಕ್ಷೇಮವಾಗಿ ಪ್ರಯಾಣಿಕರಿಗೆ ಹಿಂತಿರುಗಿಸುವ ಮೂಲಕ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ವಿಜಯಪುರ: ಬಸ್ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ಬಸ್ ನಲ್ಲೇ ಬಿಟ್ಟು ಹೋಗಿದ್ದ ಚಿನ್ನಾಭರಣಗಳನ್ನು ಕ್ಷೇಮವಾಗಿ ಪ್ರಯಾಣಿಕರಿಗೆ ಹಿಂತಿರುಗಿಸುವ ಮೂಲಕ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕನೊಬ್ಬ ಜನರ ಹೃದಯಗಳನ್ನು ಗೆದ್ದಿದ್ದಾನೆ.
ವಿಜಯಪುರ-ಹೈದರಾಬಾದ್ ಮಾರ್ಗದ ಬಸ್ ನಿರ್ವಾಹಕನಾಗಿರುವ ಶ್ರೀಧರ್ ವಿನಾಯಕ ಪವಾರ್ ಎಂಬುವವರೇ ಈ ಪ್ರಾಮಾಣಿಕ ಬಸ್ ನಿರ್ವಾಹಕ. ಬಸ್ ಸ್ವಚ್ಚಗೊಳಿಸುವಾಗ ಬಸ್ ನಲ್ಲಿ ಸುಮಾರು 60,000 ರು. ಬೆಲೆ ಬಾಳುವ ಚಿನ್ನದ ಸರವೊಂದು ಕಂಡಿದೆ. ತಕ್ಷಣ ಎಚ್ಚೆತ್ತ ನಿರ್ವಾಹಕ ಶ್ರೀಧರ್ ತನ್ನ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಸರದ ಮಾಲೀಕರನ್ನು ಹುಡುಕಿಸಿ ಸರವನ್ನು ಹಿಂತಿರುಗಿಸಿದ್ದಾರೆ.
ಹರೀಶ್ ಜಕ್ಕಪ್ಪನವರ್ ಹಾಗೂ ಸುಮಾ ದಂಪತಿಗಳು ಈ ಸರದ ಮಾಲೀಕರಾಗಿದ್ದರು. ಇವರು ಹೈದರಾಬಾದ್ ನಿಂದ ವಿಜಯಪುರಕ್ಕೆ ಹಿಂತಿರುಗುವ ವೇಳೆ ಸುಮಾ ಧರಿಸಿದ್ದ ಸರ ಆಕೆ ಬಸ್ ಇಳಿಯುವ ಮುನ್ನ ಆಕಸ್ಮಿಕವಾಗಿ ಬಸ್ ನಲ್ಲೇ ಬಿದ್ದು ಹೋಗಿದೆ. ಮನೆಗೆ ತೆರಳಿದಾಗ ಸರ ಕಳೆದು ಹೋಗಿರುವುದು ಅರಿವಾಗಿದ್ದು ಅವರು ಗಾಬರಿಗೊಂಡಿದ್ದಾರೆ. ಹರೀಶ್ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಈ ಬಗ್ಗೆ ವಿಚಾರೈಸಿದ್ದಾರೆ. ಆಗ ನಿರ್ವಾಹಕ ಶ್ರೀಧರ್ ದಂಪರ್ತಿಗಳಿಗೆ ಬಸ್ ನಿಲ್ದಾಣಕ್ಕೆ ಬಂದು ಸರ ಪಡೆದುಕೊಳ್ಲಲು ಹೇಳಿದ್ದಾರೆ.
ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಜಾಧವ್ ತರುವಾಯ ಸರವನ್ನು ದಂಪತಿಗಳಿಗೆ ಹಸ್ತಾಂತರಿಸಿದ್ದಾರೆ.
"ಎನ್ಇಕೆಎಸ್ಆರ್ಟಿಸಿ ಇಂತಹಾ ಉದ್ಯೋಗಿಗಳನ್ನು ಹೊಂದಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ.ಉದ್ಯೋಗದಾತರು ಅವರೊಂದಿಗೆ ಕೆಲಸ ಮಾಡುವ ಸಹೋದ್ಯೋಗಿಗಳು ಸಹ ಈ ವಿಚಾರಕ್ಕೆ ಹೆಮ್ಮೆ ಪಡಬೇಕು. ಸರವನ್ನು ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಶ್ರೀಧರ್ ಗೆ ನಾನು ಹಾಗೂ ನಮ್ಮ  ಇಡೀ ಕುಟುಂಬವು ಕೃತಜ್ಞತೆ  ಸಲ್ಲಿಸುತ್ತದೆ: ಹರೀಶ್ ಹೇಳಿದ್ದಾರೆ.
ಶ್ರೀಧರ್ ಹೇಳುವಂತೆ" "ಬಸ್ ಅನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನಾನು ಆಭರಣವನ್ನು ಕಂಡುಕೊಂಡೆ. ಮಾಲೀಕರಿಗೆ ಅದನ್ನು ಒಪ್ಪಿಸುವುದು ನನ್ನ ಜವಾಬ್ದಾರಿಯಾಗಿತ್ತು.ಹಾಗಲ್ಲದೆ ಅದನ್ನು ನಾನು ಇರಿಸಿಕೊಳ್ಳುವುದು ಸರಿಯಲ್ಲ.ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಸರ ತಮ್ಮ ಮಾಲೀಕರಿಗೆ ಸೇರಿದ್ದು ನನಗೆ ಖುಷಿ ತಂದಿದೆ."

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com