ಜನವರಿ 15 ರಂದು ಎಸ್ ಪಿ ಅಮಿತ್ ಸಿಂಗ್ ನನ್ನನ್ನು ಮತ್ತು ನನ್ನ ಪೋಷಕರ ವಿರುದ್ಧ ತುಚ್ಛ ಮಾತುಗಳಿಂದ ನಿಂದಿಸಿದ್ದಾರೆ. ಇದರಿಂದ ನನ್ನ ಕುಟುಂಬಸ್ಥರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ, ಅವರಿಗೆ ಅವಮಾನವಾಗಿದೆ, ನನ್ನ ತಾಯಿಯ ಭಾವನೆಗಳಿಗೆ ನೋವಾಗಿದೆ, ಇದನ್ನೆಲ್ಲಾ ವಿದ್ಯುನ್ಮಾನ ಮಾಧ್ಯಮಗಳು ಬಿತ್ತರಿಸಿದ್ದು ನನ್ನ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ, ಹೀಗಾಗಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲು ಅನುಮತಿ ಕೋರುತ್ತಿರುವುದಾಗಿ ಇನ್ಸ್ ಪೆಕ್ಟರ್ ರವಿ ದಕ್ಷಮಿ ವಲಯ ಐಜಿ ಕೆ,ವಿ ಶರತ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ.