ಸಂಗ್ರಹ ಚಿತ್ರ
ರಾಜ್ಯ
ಚಿಂತಾಮಣಿ ಗಂಗಮ್ಮನ ಗುಡಿ ವಿಷ ಪ್ರಸಾದ ದುರಂತ: ಪ್ರಸಾದ ವಿಷವಾಗಲು ಹಳೇ ತುಪ್ಪ, ಕೊಬ್ಬರಿ ಬಳಕೆಯೇ ಕಾರಣ?
ಚಿಂತಾಮಣಿ ನಗರದ ನಾರಸಿಂಹಪೇಟೆಯ ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ...
ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ನಾರಸಿಂಹಪೇಟೆಯ ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ಪ್ರಸಾದ ತಯಾರಿಯಲ್ಲಿ ಹಳೇ ತುಪ್ಪ ಮತ್ತು ಹಳೇ ಕೊಬ್ಬರಿಯನ್ನು ಬಳಸಿದ್ದೇ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ಬಂಧಿತ ಆರೋಪಿಗಳಿಬ್ಬರು ತಿಳಿಸಿರುವ ಮಾಹಿತಿ ಲಭ್ಯವಾಗಿದೆ.
ಪ್ರಸಾದ ಸೇವಿಸಿ ಕವಿತಾ ಮತ್ತು ಸರಸ್ವತಿ ಸಾವಿಗೀಡಾಗಿದ್ದರೆ, 5 ಜನ ಈಗಾಗಲೇ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ವಿಚಾರಣೆಯ ವೇಳೆ ಈ ರೀತಿಯಾಗಿ ಪ್ರಸಾದ ತಯಾರಿಯಲ್ಲಿ ಹಳೇ ತುಪ್ಪ ಮತ್ತು ಕೊಬ್ಬರಿ ಬಳಕೆಯ ವಿಷಯ ಹೊರಬಿದ್ದಿರುವುದಾಗಿ ತಿಳಿದುಬಂದಿದೆ.

