ಚಿಕ್ಕಬಳ್ಳಾಪುರ: ಭವಿಷ್ಯ ದಾರುಣವಾಗಿದೆ ಎಂಬ ಭಯಕ್ಕೆ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!

ಭವಿಷ್ಯ ಉತ್ತಮವಾಗಿಲ್ಲ, ದಾರುಣವಾಗಿದೆ ಎನ್ನುವ ಹ್ಯೋತಿಷಿಯ ಮಾತನ್ನು ನಂಬಿ ಮಕ್ಕಳಿಗೆ ವಿಷ ಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಭವಿಷ್ಯ ದಾರುಣವಾಗಿದೆ ಎಂಬ ಭಯಕ್ಕೆ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!
ಭವಿಷ್ಯ ದಾರುಣವಾಗಿದೆ ಎಂಬ ಭಯಕ್ಕೆ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!
Updated on: 
ಚಿಕ್ಕಬಳ್ಳಾಪುರ: ಭವಿಷ್ಯ ಉತ್ತಮವಾಗಿಲ್ಲ, ದಾರುಣವಾಗಿದೆ ಎನ್ನುವ ಹ್ಯೋತಿಷಿಯ ಮಾತನ್ನು ನಂಬಿ ಮಕ್ಕಳಿಗೆ ವಿಷ ಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಮುನಿಸಿಪಾಲ್ ಕಾಲೇಜು ಸಮೀಪ ನಡೆದ ಪ್ರಕರಣದಲ್ಲಿ ಉಷಾ‌(28) ಮಕ್ಕಳಾದ  ಶಮಂತ್(8) ಹಾಗೂ ಶಾನವಿ(5) ಸಾವನ್ನಪ್ಪಿದ್ದಾರೆ. 
ಉಷಾ ಅವರ ಪತಿ ಅಶ್ವಥ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು ಕುಟುಂಬ ಸದಸ್ಯರ ಆಕ್ರಂದನ ಹೇಳತೀರದ್ದಾಗಿದೆ.
ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com