ಮೈಸೂರನ್ನು ಮತ್ತೊಮ್ಮೆ ನಂಬರ್ ಒನ್ ಸ್ವಚ್ಛ ನಗರಿ ಮಾಡಲು ಕೈ ಜೋಡಿಸಿ- ರಾಕಿಂಗ್ ಸ್ಟಾರ್ ಯಶ್

ಮೈಸೂರನ್ನು ಮತ್ತೊಮ್ಮೆ ನಂಬರ್ ಒನ್ ಸ್ವಚ್ಛ ನಗರಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸುವಂತೆ ರಾಕಿಂಗ್ ಸ್ಟಾರ್ ಯಶ್ ಮನವಿ ಮಾಡಿಕೊಂಡಿದ್ದಾರೆ.
ಯಶ್
ಯಶ್
Updated on

ಬೆಂಗಳೂರು:2016 ಹಾಗೂ 2017ರಲ್ಲಿ  ಸತತವಾಗಿ ಎರಡು ಬಾರಿ ದೇಶದ ನಂಬರ್ ಒನ್ ಸ್ವಚ್ಛ ನಗರಿ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೈಸೂರು ಕಳೆದ ಬಾರಿ ಈ ಸ್ಥಾನ ಕಳೆದುಕೊಂಡಿದ್ದರೂ ಮಧ್ಯಮ ನಗರ ವಿಭಾಗದಲ್ಲಿ ದೇಶದ ನಂಬರ್ 1 ಸ್ವಚ್ಛ ನಗರಿ ಪಟ್ಟವನ್ನು ಮುಡಿಗೇರಿಸಿಕೊಂಡಿತ್ತು.

2017ರಲ್ಲಿ ಶೌಚ ಗೃಹ ನಿರ್ಮಾಣ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಯಲ್ಲಿ ಹಿಂದೆ ಬಿದ್ದ ಹಿನ್ನೆಲೆಯಲ್ಲಿ ಮೈಸೂರು ದೇಶದ ನಂಬರ್ 1 ಸ್ವಚ್ಛ ನಗರಿ ಪಟ್ಟ ಕಳೆದುಕೊಂಡಿತ್ತು.

2019ರಲ್ಲಿಯೂ ಮತ್ತೆ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ನಡೆಯುತ್ತಿದ್ದು,ಮೈಸೂರನ್ನು ಮತ್ತೆ ನಂಬರ್ ಒನ್ ಮಾಡುವ ನಿಟ್ಟಿನಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು,ರಾಕಿಂಗ್ ಸ್ಟಾರ್ ಯಶ್ ಕೂಡಾ ಈ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.

ಮೈಸೂರು ಅಂದಾಗ ತಕ್ಷಣ ನೆನಪಾಗುವುದು ದಸರಾ. ಅಲ್ಲದೇ, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ಸೀರೆ ಷರ್ಟ್ ಹೀಗೆ ಎಲ್ಲವೂ ಪ್ರಸಿದ್ಧಿ ಪಡೆದುಕೊಂಡಿವೆ. ನಾನು ಆಡಿ ಬೆಳೆದ ಊರು ಎಂಬ ಹೆಮ್ಮೆ ಇರುವುದಾಗಿ ಯಶ್ ಹೇಳಿದ್ದಾರೆ.

ಈ ಬಾರಿಯೂ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮತ್ತೆ ಮೈಸೂರನ್ನು ನಂಬರ್ ಒನ್ ಮಾಡಲು ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಈ  ಲಿಂಕ್ ಗೆ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com