ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರ ಗ್ರಾಮದ ಸಹಕಾರ ಸೊಸೈಟಿ ಶಾದಿಭಾಗ್ಯ ಯೋಜನೆಯಡಿ ಬಂಪರ್ ಬಹುಮಾನ ಘೋಷಿಸಿದೆ.
ಆನಗೋಡು ಗ್ರಾಮದ ರೈತನನ್ನು ವಿವಾಹವಾದ ಯಾವುದೇ ಯುವತಿಯ ಅಕೌಂಟ್ ಗೆ 1 ಲಕ್ಷ ರು ಹಣ ಡೆಪಾಸಿಟ್ ಮಾಡಲಾಗುವುದು. ಈ ಆಫರ್ ಆನಗೋಡು ಗ್ರಾಮಸ್ಥರಿಗೆ ಹಾಗೂ ಆನಗೋಡು ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಮಾತ್ರ ಅನ್ವಯಿಸುತ್ತಿದೆ.
ಈ ಯೋಜನೆ 2019ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಸಹಾಯಕರಾಗಿರುವ ಕುಟುಂಬಗಳಿಗೆ ಧನ ಸಹಾಯವಾಗಲಿದೆ, ಭವಿಷ್ಯದಲ್ಲಿ ಅವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎನ್.ಕೆ ಭಟ್ ಹೇಳಿದ್ದಾರೆ.
ಸಮಸ್ಯೆ ಏನು? ಉತ್ತರ ಕನ್ನಡ ಜಿಲ್ಲೆಯ.ಹೆಣ್ಣುಮಕ್ಕಳು ಬೆಂಗಳೂರಿನಲ್ಲಿರುವ ಅದರಲ್ಲೂ ಐಟಿ ವಿಭಾಗದಲ್ಲಿ ಕೆಲಸ ಮಾಡುವ ವರನನ್ನು ಮದುವೆಯಾಗಲು ಹೆಚ್ಚಿನ ಆದ್ಯತೆ ನೀಡುತ್ತಾರೆ, ಹೀಗಾಗಿ ರೈತ ವರನಿಗೆ ವಿವಾಹಕ್ಕೆ ವಧು ಸಿಗುತ್ತಿಲ್ಲ,
ಈ ಯೋಜನೆಗಳಿಗೆ ಕೆಲಸವು ಷರತ್ತುಗಳನ್ನು ವಿಧಿಸಲಾಗಿದೆ, ವಿವಾಹವಾಗುತ್ತಿರುವ ಜೋಡಿಯ ಕುಟುಂಬದ ಒಬ್ಬ ಸದಸ್ಯರು ಸೊಸೈಟಿಯ ಸದಸ್ಯರಾಗಿರಬೇಕು, ವಾರ್ಷಿಕವಾಗಿ ಸುಮಾರು 3 ಲಕ್ಷ ರು.ವಹಿವಾಟು ತೋರಿಸಬೇಕು,
ಈ ಆಫರ್ ಎಲ್ಲಾ ಜಾತಿಯ ಜನರಿಗೂ ಅನ್ವಯವಾಗುತ್ತಿದೆ, ಯಾಲ್ಲಾಪುರ ತಾಲೂಕಿನ 22 ಗ್ರಾಮಗಳಿಗೂ ಈ ಆಫರ್ ಸಿಗಲಿದೆ, ಸೊಸೈಟಿಯಲ್ಲಿ ಸುಮಾರು 2ಸಾವಿರ ಸದಸ್ಯರಿದ್ದಾರೆ,
ಉತ್ತಮ ಕುಟುಂಬದ ರೈತರ ಮಕ್ಕಳಿಗೂ ಕೆಲವೊಂದು ವೇಳೆ ವಧು ಸಿಗುತ್ತಿಲ್ಲ, ಹೀಗಾಗಿ ಈ ಆಫರ್ ನೀಡಲಾಗಿದೆ.