ನ್ಯಾಯ ಕೇಳಿ ಪೊಲೀಸ್ ಠಾಣೆಗೆ ಬಂದ ಮಹಿಳೆ ಮೇಲೆ ಎಎಸ್ಐ ಹಲ್ಲೆ, ಸೇವೆಯಿಂದ ಅಮಾನತು

ನ್ಯಾಯ ಕೇಳಲು ಬಂದ ಮಹಿಳೆಯ ಕುತ್ತಿಗೆ ಹಿಡಿದು ಹೊರದಬ್ಬಿ ಹಲ್ಲೆ ಮಾಡಿದ ಸಹಾಯಕ ಪೊಲೀಸ್ ....
ಡಿಸಿಪಿ ಅಣ್ಣಾಮಲೈ
ಡಿಸಿಪಿ ಅಣ್ಣಾಮಲೈ

ಬೆಂಗಳೂರು: ನ್ಯಾಯ ಕೇಳಲು ಬಂದ ಮಹಿಳೆಯ ಕುತ್ತಿಗೆ ಹಿಡಿದು ಹೊರದಬ್ಬಿ ಹಲ್ಲೆ ಮಾಡಿದ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ನ ಪೊಲೀಸ್ ಠಾಣೆಗೆ ಇಂದು ಬೆಳಗ್ಗೆ ತನ್ನ ಕುಟುಂಬ ಸಮಸ್ಯೆಯನ್ನು ಹೇಳಿಕೊಂಡು ಮಹಿಳೆಯೊಬ್ಬರು ದೂರು ನೀಡಲು ಬಂದಿದ್ದರು. ಮಹಿಳೆಯ ಅಹವಾಲನ್ನು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುವ ಬದಲು ಎಎಸ್ಐ ರೇಣುಕಯ್ಯ, ಮಹಿಳೆಯ ಮೇಲೆ ಕೈ ಮಾಡಿ ಕುತ್ತಿಗೆ ಹಿಡಿದು ದರ್ಪ ಮೆರೆದಿದ್ದರು. ಈ ಪೊಲೀಸ್ ಠಾಣೆ ದಕ್ಷ ಅಧಿಕಾರಿ ಎಂದು ಹೆಸರಾಗಿರುವ ಅಣ್ಣಾಮಲೈ ಅವರ ಸುಪರ್ದಿಗೆ ಬರುತ್ತದೆ.

ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ತಕ್ಷಣ ಕ್ರಮ ಕೈಗೊಂಡ ದಕ್ಷಿಣ ವಿಭಾಗ ಡಿಸಿಪಿ ಕೆ.ಅಣ್ಣಾಮಲೈ, ತಕ್ಷಣದಿಂದಲೇ ಜಾರಿಗೆ ಬರುವಂತೆ ಎಎಸ್​ಐ ರೇಣುಕಯ್ಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com