ಆರ್ಥಿಕ ದುರ್ಬಲ ವರ್ಗಕ್ಕೆ ಅಂಗಾಂಗ ಕಸಿಗೆ ಸರ್ಕಾರಿ ನೆರವು: ಇಲ್ಲಿದೆ ಮಾಹಿತಿ

ಆರ್ಥಿಕವಾಗಿ ದುರ್ಬಲರಾಗಿರುವ ವರ್ಗದ ಜನರಿಗೆ ಅಂಗಾಂಗ ಕಸಿ ಅಗತ್ಯವಾಗಿದ್ದಾಗ ಅಂತಹಾ ಕಸಿ ಚಿಕಿತ್ಸೆಗಾಗಿ ಸರ್ಕಾರದ ಸೌಲಭ್ಯ ದೊರಕಲಿದೆ.
ಆರ್ಥಿಕ ದುರ್ಬಲ ವರ್ಗಕ್ಕೆ ಅಂಗಾಂಗ ಕಸಿಗೆ ಸರ್ಕಾರಿ ನೆರವು: ಇಲ್ಲಿದೆ ಮಾಹಿತಿ
ಆರ್ಥಿಕ ದುರ್ಬಲ ವರ್ಗಕ್ಕೆ ಅಂಗಾಂಗ ಕಸಿಗೆ ಸರ್ಕಾರಿ ನೆರವು: ಇಲ್ಲಿದೆ ಮಾಹಿತಿ
ಬೆಂಗಳೂರು: ಆರ್ಥಿಕವಾಗಿ ದುರ್ಬಲರಾಗಿರುವ ವರ್ಗದ ಜನರಿಗೆ ಅಂಗಾಂಗ ಕಸಿ ಅಗತ್ಯವಾಗಿದ್ದಾಗ ಅಂತಹಾ ಕಸಿ ಚಿಕಿತ್ಸೆಗಾಗಿ ಸರ್ಕಾರದ ಸೌಲಭ್ಯ ದೊರಕಲಿದೆ.ಈ ವರ್ಷದಿಂದ ರಾಜ್ಯ ಸರ್ಕಾರವು ದುರ್ಬಲ ವರ್ಗದವರಿಗೆ ಅಂಗಾಂಗ ಕಸಿಗಾಗಿ ಆರ್ಥಿಕ ನೆರವು ನೀಡಲು ಪ್ರಾರಂಭಿಸಿದೆ.
ಈ ಯೋಜನೆಯು 2018-19ರಲ್ಲಿ ರಾಜ್ಯ ಬಜೆಟ್ ನಲ್ಲಿ ಘೋಷಣೆಯಾಗಿತ್ತು. ಇದಕ್ಕಾಗಿ ಮುಖ್ಯಮಂತ್ರಿಗಳು 30 ಕೋಟಿ ರೂ. ತೆಗೆದಿರಿಸಿದ್ದು ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಯೋಜನೆ ಜಾರಿಗೆ ಮುಂದಾಗಿದೆ.
ಮೊದಲ ಹಂತದಲ್ಲಿ  ಹೃದಯ, ಮೂತ್ರಪಿಂಡ ಮತ್ತು ಯಕೃತ್ತಿನ ಕಸಿಗಳಿಗೆ ಸರ್ಕಾರವು ಆರ್ಥಿಕ ನೆರವನ್ನು ನೀಡುತ್ತದೆ. ಪತ್ರಿಕೆಯೊಡನೆ ಈ ವಿಚಾರವಾಗಿ ಮಾತನಾಡಿದ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ.ಪ್ರಭಾಕರ್ "ಈ ಯೋಜನೆಯನ್ನು 2018-19ರ ಬಜೆಟ್ ನಲ್ಲಿ ಘೋಷಣೆಯಾಗಿತ್ತು. ಈಗ ಆದೇಶ ಹೊರಬಂದಿದೆ.ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಇಲಾಖೆ ಪ್ರಕ್ರಿಯೆಗೆ ಮುಂಚಿತವಾಗಿ ಹಣವನ್ನು ಬಿಡುಗಡೆ ಮಾಡುತ್ತದೆ, ಆಸ್ಪತ್ರೆಯಲ್ಲಿ ರೋಗಿಗಳನ್ನು ಸೇರಿಸುವಾಗ ಈ ಹಣ ಆಸ್ಪತ್ರೆಗೆ ಸಂದಾಯವಾಗಲಿದೆ.""ಎಂದರು.
ರಾಜ್ಯದಾದ್ಯಂತ ಇರುವ ಎಲ್ಲ ಖಾಸಗಿ ಆಸ್ಪತ್ರೆಗಳು ರಾಜ್ಯ ಸರಕಾರವು ಒದಗಿಸಿದ ಹಣವನ್ನು ಬಳಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಲು ಅರ್ಹರಾಗಿರುತ್ತಾರೆ. ಆದರೆ ಈ ಆಸ್ಪತ್ರೆಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸೇರಿಸಿಕೊಳ್ಳಬೇಕಿದೆ.
ಸರ್ಕಾರ ನಿಗದಿಪಡಿಸಿದ ದರ
ಕರ್ನಾಟಕ ಮೆಡಿಕಲ್ ಅಟೆಂಡೆನ್ಸ್ ರಿಜಿಸ್ಟರ್ ಅನುಸಾರ ಈ ಕಸಿ ಪ್ರಕ್ರಿಯೆಗೆ ಹಣ ನಿಗದಿಯಾಗಿರಲಿದೆ.ಈಗಾಗಲೇ ಅಂಗಾಂಗ ಕಸಿ ಮಾಡುವ ಮೂರು ಸರ್ಕಾರಿ ಆಸ್ಪತ್ರೆಗಳಿವೆ. ಅವುಗಳು ಹಾಗೂ ಇತರೆಡೆಗಳಲ್ಲಿ ಕರ್ನಾಟಕ ಮೆಡಿಕಲ್ ಅಟೆಂಡೆನ್ಸ್ ರಿಜಿಸ್ಟರ್ ಅನುಸಾರ ದರ ನಿಗದಿಯಾಗಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಾವು ಪ್ರಸ್ತುತ ಏನು ದರ ನೀಡಲಿದ್ದೇವೆಯೋ ಇದು ಅದಕ್ಕಿಂತ ತುಸು ಹೆಚ್ಚಾಗಿರಲಿದೆ ಎಂದು ಪ್ರಭಾಕರ್ ವಿವರಿಸಿದ್ದಾರೆ.
ಪ್ರಸ್ತುತ ಪಿಎಂಎಸ್ ಎಸ್ ವೈ ಆಸ್ಪತ್ರೆ, ಮೆಫೊ ಯುರೋಲೊಜಿ ಹಾಗೂ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋ ವಸಾಕ್ಯುಲರ್ ಸೈನ್ಸ್ರಾಜ್ಯದಲ್ಲಿ ಅಂಗಾಂಗ ಕಸಿ ಮಾಡುವ ಸರಕಾರಿ ಸಂಸ್ಥೆಗಳಾಗಿದೆ.ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಅದೇ ಕಸಿ ಮಾಡಿದರೆ, ಮೂತ್ರಪಿಂಡದ ಕಸಿಗೆ 2 ಲಕ್ಷ ರೂ., ಹೃದಯ ಕಸಿಗೆ 10 ಲಕ್ಷ ರೂ. ಮತ್ತು ಯಕೃತ್ತಿನ ಕಸಿಗೆ 12 ಲಕ್ಷ ರೂ.  ಇದ್ದು ಔಷಧಿಗಳಿಗೆ ಹೆಚ್ಚುವರಿ ರೂ. 1 ಲಕ್ಷವನ್ನು ಪಾವತಿಸಲಾಗುತ್ತದೆ.ಇದು ಸರ್ಕಾರಿ ಆಸ್ಪತ್ರೆಗೆ ಹೋಲಿಸಿದಾಗ ಕನಿಷ್ಹ್ಟ 2 ಲಕ್ಷ ರೂ.ಹೆಚ್ಚಳವಾಗಿದೆ.
ಮೂತ್ರಪಿಂಡ, ಹೃದಯ ಮತ್ತು ಯಕೃತ್ತಿನ ಹೊರತಾಗಿ ಇನ್ನುಳಿದ ಅಂಗಾಂಗ ಕಸಿಗಳು ಇಲಾಖೆಯಿಂದ ಪ್ರತ್ಯೇಕವಾಗಿ ಪರಿಗಣಿತವಾಗಲಿದೆ.ಏಕೆಂದರೆ ಇತರ ಕಸಿಗಳು ರಾಜ್ಯದಲ್ಲಿ ಅಪರೂಪವಾಗಿವೆ. ಸರ್ಕಾರ ಈ ಕ್ರಮಕ್ಕೆ ವೈದ್ಯಕೀಯ ವಲಯ ಮೆಚ್ಚುಗೆ ಸೂಚಿಸಿದೆ.ಇನ್ನು ಯಾರು ಅಂಗಾಂಗ ಕಸಿ ಮಾಡಿಸಿಕೊಳ್ಳಬೇಕೋ ಅವರು ಬೆಂಗಳೂರಿಗೇ ಬರಬೇಕಾಗಿಲ್ಲ. ತಮ್ಮದೇ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಸಹ ಈ ಸೌಲಭ್ಯ ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com