ರಾಜಕೀಯ ಹೊರತುಪಡಿಸಿ ಮೈಸೂರಿನ ಜೊತೆಗೆ ಜಾರ್ಜ್ ಫರ್ನಾಂಡಿಸ್ ವಿಶೇಷ ಬಾಂಧವ್ಯವಿತ್ತು!

ಕೇಂದ್ರದ ಮಾಜಿ ರಕ್ಷಣಾ ಸಚಿವ ದಿವಂಗತ ಜಾರ್ಜ್ ಫರ್ನಾಂಡಿಸ್ ಅವರಿಗೆ ಮೈಸೂರಿನ ಮೇಲೆ ವಿಶೇಷ ಆಸಕ್ತಿಯಿತ್ತು, ರಾಜಕೀಯ ಹೊರತುಪಡಿಸಿ ಸಾಂಸ್ಕ್ರತಿಕ ನಗರಿ ...
ಜಾರ್ಜ್ ಫರ್ನಾಂಡಿಸ್
ಜಾರ್ಜ್ ಫರ್ನಾಂಡಿಸ್
ಮೈಸೂರು: ಕೇಂದ್ರದ ಮಾಜಿ ರಕ್ಷಣಾ ಸಚಿವ ದಿವಂಗತ ಜಾರ್ಜ್ ಫರ್ನಾಂಡಿಸ್ ಅವರಿಗೆ ಮೈಸೂರಿನ ಮೇಲೆ ವಿಶೇಷ ಆಸಕ್ತಿಯಿತ್ತು, ರಾಜಕೀಯ ಹೊರತುಪಡಿಸಿ ಸಾಂಸ್ಕ್ರತಿಕ ನಗರಿ ಮೈಸೂರಿನ ಜೊತೆ ಬಾಂಧವ್ಯ ಹೊಂದಿದ್ದರು, ಮೈಸೂರಿನಲ್ಲಿ ಹೊಲಿಯುತ್ತಿದ್ದ ಕುರ್ತಾ ಜಾರ್ಜ್ ಗೆ ಬಾರಿ ಇಷ್ಟವಾಗಿತ್ತು.
ಒಂದು ದಿನ ಮೈಸೂರಿಗೆ ಆಗಮಿಸಿದ್ದ ಜಾರ್ಜ್ ಕೇವಲ ಒಂದೇ ಜೊತೆ ಬಟ್ಟೆಯಲ್ಲಿ ಬಂದಿದ್ದರು, ಅಲ್ಲಿನ ಅಜೀಜ್ ಖಾನ್ ಎಂಬ ದರ್ಜಿಯ ಬಳಿ ಕುರ್ತಾ ಹೊಲಿಸಿಕೊಂಡಿದ್ದರು, ಆತ ಹೊಲಿದ ಕುರ್ತಾ ಮೆಚ್ಚಿಕೊಂಡ ಜಾರ್ಜ್ 3ರಿಂದ 4 ಕುರ್ತಾ ಖರೀದಿಸಿದ್ದರು.
ಮೈಸೂರಿನಿಂದ ಜಾರ್ಜ್ ಎಂದಿಗೂ ಸ್ಪರ್ಧಿಸಿರಲಿಲ್ಲ,  1983 ರಲ್ಲಿ  ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರಿಗೆ ತಮ್ಮ ಬೆಂಬಲ ನೀಡಿದ್ದರು. ಅದಾದ ನಂತರ ಅದೇ ಕ್ಷೇತ್ರದಲ್ಲಿ ಸ್ಪರ್ದಿಸಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು..
ಕೇವಲ ಮೈಸೂರು ಮಾತ್ರವಲ್ಲದೇ ಜೆಎಸ್ ಎಸ್ ಮಠದ ಜೊತೆಗೆ ವಿಶೇಷ ನಂಟು ಹೊಂದಿದ್ದರು, ಮೈಸೂರಿಗೆ ಬರುತ್ತಿದ್ದ ವೇಳೆ ಜೆಎಸ್ಎಸ್ ಮಠದಲ್ಲಿ ಉಳಿದುಕೊಳ್ಳಲು ಬಯಸುತ್ತಿದ್ದರು. ಅವರು ರಕ್ಷಣಾ ಸಚಿವರಾಗಿದ್ದ ವೇಳೆ ಹಲವು ಬಾರಿ ಮೈಸೂರಿಗೆ ಭೇಟಿ ನೀಡುತ್ತಿದ್ದರು. ಕಾರು ನಿಲ್ಲಿಸಿ ರಸ್ತೆ ಬದಿಯ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು, ಅಲ್ಲಿ ಟೀ ರೆಡಿ ಇಲ್ಲದಿದ್ದರೇ ಸ್ಥಳೀಯ ರೆಸ್ಟೋರೆಂಟ್ ಗೆ ತೆರಳಿ ಮೈಸೂರಿನ ಕಾಫಿ ರುಚಿ ಸವಿಯುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com