ಐಎಂಎ ಸಂಸ್ಥಾಪಕರಿಂದ ಲಂಚ ಪಡೆದ ಆರೋಪ: ಬಿಡಿಎ ಎಂಜಿನಿಯರ್ ಅರೆಸ್ಟ್

: ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಮೊಹಮ್ಮದ್ ಮನ್ಸೂರ್ ಖಾನ್ ಗೆ ಎನ್‌ಒಸಿ ನೀಡುವಂತೆ ಐಎಎಸ್ ಅಧಿಕಾರಿಯನ್ನು ಮನವೊಲಿಸಲು 4 ಕೋಟಿ ರೂ. ಪಡೆದಿದ್ದ ಆರೋಪದಡಿ ....
ಪಿ ಡಿ ಕುಮಾರ್
ಪಿ ಡಿ ಕುಮಾರ್
Updated on
ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ  ಮೊಹಮ್ಮದ್ ಮನ್ಸೂರ್ ಖಾನ್ ಗೆ ಎನ್‌ಒಸಿ ನೀಡುವಂತೆ ಐಎಎಸ್ ಅಧಿಕಾರಿಯನ್ನು  ಮನವೊಲಿಸಲು 4 ಕೋಟಿ ರೂ. ಪಡೆದಿದ್ದ ಆರೋಪದಡಿ ಓರ್ವ ವ್ಯಕ್ತಿಯನ್ನು ಬಂಧಿಸಿದೆ.ಮೂಲಗಳ ಪ್ರಕಾರ, ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ 600 ಕೋಟಿ ರೂ.ಗಳ ಸಾಲ ಪಡೆಯಲು ಎನ್‌ಒಸಿಯನ್ನು ಒದಗಿಸುವಂತೆ ಕೇಳಿದ್ದರು.ಇದಕ್ಕಾಗಿ ಐಎಎಸ್ ಅಧಿಕಾರಿಯನ್ನು  ಮನವೊಲಿಸಲು ಲಂಚ ಪಡೆದಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಪಿ ಡಿ ಕುಮಾರ್  ಅವರನ್ನು ಸೋಮವಾರ ಬಂಧಿಸಲಾಗಿದೆ.
ಏತನ್ಮಧ್ಯೆ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದ್ದು ಹಲವಾರು ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. “ನಮ್ಮ ತನಿಖೆಯ ಆಧಾರದ ಮೇಲೆ, ಮನ್ಸೂರ್ ಖಾನ್ ಮತ್ತು ಕುಮಾರ್ ನಡುವೆ 4 ಕೋಟಿ ರೂ.ಗಳ ವ್ಯವಹಾರ ನಡೆದಿದೆ. ನಾವು ಮತ್ತಷ್ಟು ತನಿಖೆ ನಡೆಸುತ್ತಿದ್ದೇವೆ ”ಎಂದು ಎಸ್‌ಐಟಿಯ ತನಿಖಾ ಅಧಿಕಾರಿ ಡಿಸಿಪಿ ಗಿರೀಶ್ ಹೇಳಿದರು. ಖಾನ್‌ನಿಂದ ಹಣವನ್ನು ತೆಗೆದುಕೊಳ್ಳುವಾಗ ಐಎಎಸ್ ಅಧಿಕಾರಿಯನ್ನು ಮನವೊಲಿಸುವುದಾಗಿ ಕುಮಾರ್ ಹೇಳಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರುಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಡೆದ ದಾಳಿಯಲ್ಲಿ ಕಂಪನಿ ಮತ್ತು ಕುಮಾರ್ ನಡುವಿನ ಹಣಕಾಸಿನ ವಹಿವಾಟಿನ ಹಲವಾರು ದಾಖಲೆಗಳು ಪತ್ತೆಯಾಗಿವೆ. ಆದರೆ ಅಧಿಕಾರಿಗಳು ಯಾವ ಐಎಎಸ್ ಅಧಿಕಾರಿಯ ಮನವೊ;ಲಿಕೆಗಾಗಿ ಕುಮಾರ್ ಹಣ ಪಡೆಇದ್ದರೆನ್ನುವುದನ್ನು ಬಹಿರಂಗಪಡಿಸಿಲ್ಲ. ಅಲ್ಲದೆ ಅಧಿಕಾರಿಯು ಕಾನ್ ಗೆ  ಎನ್‌ಒಸಿಯನ್ನು ನೀಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರೆಂದು ಹೇಳಿದ್ದಾರೆ.
ಮನ್ಸೂರ್ ತನ್ನ ಮೊದಲ ಆಡಿಯೊದಲ್ಲಿ ಕುಮಾರ್ ಹೆಸರನ್ನು ಸಹ ಉಲ್ಲೇಖಿಸಿದ್ದಾನೆ ಮತ್ತು ಇತ್ತೀಚೆಗೆ ಬಿಡುಗಡೆಯಾದ ವೀಡಿಯೋದಲ್ಲಿ ಆತ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರನ್ನು ಉದ್ದೇಶಿಸಿ ನೀಡಿದ್ದ ಸಂದೇಶದಲ್ಲಿ ಸಹ ತಾನು ಈ ಮೊತ್ತವನ್ನು 'ಬಿಡಿಎ ಕುಮಾರ್'ಗೆ ಪಾವತಿಸಿದ್ದೇನೆ ಎಂದು ಉಲ್ಲೇಖಿಸಿದ್ದರೂ, ಗಿರೀಶ್ ಬಂಧನವು ಕೇವಲ ಎಸ್‌ಐಟಿಯ ತನಿಖೆಯ ಮೇಲೆ ಆಧಾರಿತವಾಗಿದೆ ಮತ್ತು ವೀಡಿಯೊ ಅಥವಾ ಆಡಿಯೊದ ಮೇಲೆ ಅಲ್ಲ ಎಂದು  ಹೇಳಲಾಗಿದೆ.
ಏತನ್ಮಧ್ಯೆ, ಭಾನುವಾರ ಎಸ್‌ಐಟಿಯಿಂದ ಬಂಧಿಸಲ್ಪಟ್ಟ ಬಿಬಿಎಂಪಿಯ ನಾಮನಿರ್ದೇಶಿತ ಕೌನ್ಸಿಲರ್ ಸೈಯದ್ ಮುಜಾಹಿದ್ ಅವರು ಸೋಮವಾರ ತಮ್ಮ ಟ್ವಿಟ್ಟರ್ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ "ಮುಜಾಹಿದ್ ಬಂಧನದ ಬಗ್ಗೆ ಸುಳ್ಳು ಸುದ್ದಿ ಹರಡುವ ಜನರು ದಯವಿಟ್ಟು ಶಾಂತವಾಗಿರಿ ನಾವು ತನಿಖಾ ಪ್ರಕ್ರಿಯೆಯಲ್ಲಿ ಅಡ್ಡಿಯಾಗಲು ಬಯಸುವುದಿಲ್ಲ. ಅಂತಿಮ ತೀರ್ಪಿಗಾಗಿನಿರೀಕ್ಷಿಸಿ" ಎಂದು ಅವರು ಬರೆದುಕೊಂಡಿದ್ದಾರೆ.
ಓರ್ವ ವ್ಯಕ್ತಿ ಅವರು ಕಸ್ಟಡಿಯಲ್ಲಿ ಇರಬೇಕಾದಾಗ ಅವರು ತಮ್ಮ ಖಾತೆಯನ್ನು ಹೇಗೆ ಪ್ರವೇಶಿಸಲು ಸಾಧ್ಯವಾಯಿತು ಎನ್ನುವುದು ಕುತೂಹಲಕಾರಿ ಸಂಗತಿಯಾಗಿದ್ದು 13 ದಿನಗಳ ಕಾಲ ಎಸ್‌ಐಟಿಯ ಬಂಧನದಲ್ಲಿದ್ದ ಆರೋಪಿ ಹೇಗೆ ಆರೋಪಮುಕ್ತನಾಗಿ ಹೊರಬರುತ್ತೇನೆಂದು ಭರವಸೆ ಇತ್ತಿದ್ದಾನೆ?ಹಾಗಾಗಿ ಈ ಪ್ರಕರಣ ಸಿಬಿಐ ತನಿಖೆಯಾಗಬೇಕು ಎಂದು ಅನಾಮಧೇಯ ವಾಟ್ಸ್ ಅಪ್ ಸಂದೇಶವೊಂದು ಸಾರುತ್ತಿದೆ. ಈ ನಡುವೆ ಎಸ್‌ಐಟಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದಂತೆ ಅವರ ಖಾತೆಯನ್ನುಬೇರೊಬ್ಬರು ನಿರ್ವಹಿಸುತ್ತಿದ್ದಾರೆ ಅಲ್ಲದೆ ಮುಜಾಹಿದ್ ಬಂಧನದಲ್ಲಿದ್ದು ಅವರು ಯಾವುದೇ ಸಾಮಾಜಿಕ ಮಾಧ್ಯಮವನ್ನು ಪ್ರವೇಶಿಸಲು ಯಾವುದೇ ಮಾರ್ಗವಿಲ್ಲ  ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com