ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಟಾಟಾ ಏಸ್‌-ಖಾಸಗಿ ಬಸ್‌ ಡಿಕ್ಕಿ, ಸ್ಥಳದಲ್ಲೇ 12 ಸಾವು

ಚಿಕ್ಕಬಳ್ಳಾಪುರ ಜಿಲ್ಲೆಯ ಮುರುಗಮಲ್ಲ ಬಳಿ ಖಾಸಗಿ ಬಸ್ ಮತ್ತು ಟಾಟಾ ಏಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಟಾಟಾ ಏಸ್‌-ಖಾಸಗಿ ಬಸ್‌ ಡಿಕ್ಕಿ, ಸ್ಥಳದಲ್ಲೇ 12 ಸಾವು
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಟಾಟಾ ಏಸ್‌-ಖಾಸಗಿ ಬಸ್‌ ಡಿಕ್ಕಿ, ಸ್ಥಳದಲ್ಲೇ 12 ಸಾವು
ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರ ಜಿಲ್ಲೆಯ ಮುರುಗಮಲ್ಲ ಬಳಿ ಖಾಸಗಿ ಬಸ್ ಮತ್ತು ಟಾಟಾ ಏಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಇತರ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 
ಗಾಯಾಳುಗಳನ್ನು ಕೋಲಾರ ಮತ್ತು ಚಿಂತಾಮಣಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು  ಪೊಲೀಸರು ತಿಳಿಸಿದ್ದಾರೆ  
ಮುರುಗಮಲ್ಲದಿಂದ ಬಸ್  ಚಿಂತಾಮಣಿಯ ಕಡೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಗಾಯಾಳುಗಳ ಪೈಕಿ ಹಲವರ  ಸ್ಥಿತಿ ಗಂಭೀರವಾಗಿದೆ. ಘಟನೆಗೆ ಖಾಸಗಿ ಬಸ್ ಚಾಲಕನ ಅತಿ ವೇಗವೇ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com