ಬೆಂಗಳೂರು- ಮೈಸೂರು ಮಾರ್ಗದ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ

ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುವ ಆರು ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಸುರಕ್ಷತಾ ಪಡೆ ' ಶಕ್ತಿ' ತಂಡವನ್ನು ರಚಿಸಿದೆ.
ಮಹಿಳಾ ಪ್ರಯಾಣಿಕರೊಂದಿಗೆ ಶಕ್ತಿ ಸದಸ್ಯರು
ಮಹಿಳಾ ಪ್ರಯಾಣಿಕರೊಂದಿಗೆ ಶಕ್ತಿ ಸದಸ್ಯರು
ಬೆಂಗಳೂರು: ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುವ ಆರು ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ  ನಿಟ್ಟಿನಲ್ಲಿ ರೈಲ್ವೆ ಸುರಕ್ಷತಾ ಪಡೆ  ' ಶಕ್ತಿ' ತಂಡವನ್ನು ರಚಿಸಿದೆ. 
ರೈಲ್ವೆ ಸುರಕ್ಷತಾ ಪಡೆಯ 15 ಕಾನ್ಸ್ ಟೇಬಲ್  ಹಾಗೂ ಮುಖ್ಯ ಕಾನ್ಸ್ ಟೇಬಲ್ ಗಳನ್ನೊಳಗೊಂಡ ಈ ವಿಶೇಷ ತಂಡದಲ್ಲಿ ಎಲ್ಲರೂ ಮಹಿಳೆಯರೇ  ಆಗಿದ್ದಾರೆ.ಶಕ್ತಿ ಸದಸ್ಯರು ಹಾಗೂ ಮಹಿಳಾ ಪ್ರಯಾಣಿಕರ ನಡುವೆ ವಾಟ್ಸಾಪ್ ಗ್ರೂಪ್ ಸೃಷ್ಟಿಸಲಾಗಿದೆ.ಕಡಿಮೆ ಅಂತರದ  ಮಾರ್ಗದ  ರೈಲುಗಳಲ್ಲಿ ಮಹಿಳಾ ಬೋಗಿಗಳಿಗೆ ಇವರು ಸಂಚರಿಸಲಿದ್ದು, ಅನಧಿಕೃತ್ಯ ವ್ಯಕ್ತಿಗಳು ಬೋಗಿಗೆ ಪ್ರವೇಶಿಸದಂತೆ ಮಾಡಲಾಗುತ್ತಿದೆ. 
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಆರ್ ಪಿಎಫ್ ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಸುರಕ್ಷತಾ ಆಯುಕ್ತೆ ದೆಬಾಸ್ಮಿತಾ ಚಟ್ಟೋಪಾಧ್ಯಾಯ ಬ್ಯಾನರ್ಜಿ,ಬೆಂಗಳೂರು- ಮೈಸೂರು ಮಾರ್ಗದಲ್ಲಿ ಅಸಂಖ್ಯಾತ ಮಹಿಳೆಯರು ಪ್ರಯಾಣಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.ಮುಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ಬಂಗಾರಪೇಟೆ ನಡುವೆ ಇಂತಹ ವಿಶೇಷ ಭದ್ರತೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಟಿಪ್ಪು, ಚಾಮುಂಡಿ, ವಿಶ್ವಮಾನವ ಎಕ್ಸ್ ಪ್ರೆಸ್  ಸೇರಿದಂತೆ ಮತ್ತಿತರ ರೈಲುಗಳಲ್ಲಿ ಈ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ. ಕೆಂಗೇರಿ ಬಳಿ  ಮಹಿಳಾ ಬೋಗಿಗೆ ಆಗಮಿಸಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮಹಿಳಾ ಪ್ರಯಾಣಿಕರು ಸಂಕಷ್ಟದ ಸಂದರ್ಭದಲ್ಲಿ  ಕೇವಲ ಒಂದು ಸಂದೇಶ ಕಳುಹಿಸಿದರೆ ಸಾಕು ನಾವು ಅಲ್ಲಿಗೆ ಬರುತ್ತೇವೆ ಎಂದು ಅವರು ಹೇಳಿದರು.
ರೈಲ್ವೆ ಸುರಕ್ಷತಾ ಪಡೆಯ ಈ ಕಾರ್ಯಕ್ಕೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಹಿಳಾ ಬೋಗಿಗಳಿಂದ ಪುರುಷರನ್ನು ಹೊರಗೆ ಕಳುಹಿಸುವಾಗ ಮಹಿಳಾ ಪೊಲೀಸರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಮುಂಬೈಯಲ್ಲೂ ಇಂತಹ ಹೆಜ್ಜೆ ಕೈಗೊಳ್ಳಲಾಗಿದೆ ಎಂದು ಬ್ಯಾನರ್ಜಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com