ಸಿಎಂ ಅಮೆರಿಕ ಪ್ರವಾಸ: ಕರ್ನಾಟಕದಲ್ಲಿ ಹೂಡಿಕೆಗೆ ಕುಮಾರಸ್ವಾಮಿ ಆಹ್ವಾನ

ಭಾರತದಲ್ಲಿ ಹೂಡಿಕೆದಾರರನ್ನು ಆಕರ್ಷಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲನೇಯದಾಗಿದ್ದು, ಉದ್ಯಮ ಸ್ಥಾಪನೆಗೆ ಉತ್ತಮ ಅವಕಾಶವಿದೆ. ಜಾಗತಿಕ ಸಮುದಾಯ ಇದನ್ನು ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
Updated on
ಬೆಂಗಳೂರು: ಭಾರತದಲ್ಲಿ ಹೂಡಿಕೆದಾರರನ್ನು ಆಕರ್ಷಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲನೇಯದಾಗಿದ್ದು, ಉದ್ಯಮ ಸ್ಥಾಪನೆಗೆ ಉತ್ತಮ ಅವಕಾಶವಿದೆ. ಜಾಗತಿಕ ಸಮುದಾಯ ಇದನ್ನು ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅಮೆರಿಕದ ಪ್ರವಾಸದಲ್ಲಿರುವ ಅವರ ವಾಷಿಂಗ್ಟನ್ ಡಿಸಿ ಸಮೀಪ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿ,ಇತ್ತೀಚಿಗೆ ಬೆಂಗಳೂರು ಡೈನಾಮಿಕ್ ಸಿಟಿ ಎಂಬ ಜಾಗತಿಕ ಮನ್ನಣೆಗೆ ಪಾತ್ರವಾಗಿದೆ. ಉದ್ಯಮ ಸ್ನೇಹಿ ಕೈಗಾರಿಕಾ ನೀತಿ, ಮೂಲಸೌಕರ್ಯ ಅಭಿವೃದ್ಧಿ, ಕೌಶಲ್ಯಾಭರಿತ ಮಾನವ ಸಂಪನ್ಮೂಲ ಹಾಗೂ ನೈಸರ್ಗಿಕ ಅನ್ವೇಷಣೆಯಿಂದಾಗಿ ಕರ್ನಾಟಕ ಅಭಿವೃದ್ಧಿಯಾಗಿರುವುದಾಗಿ ತಿಳಿಸಿದರು.
ದೇಶದಲ್ಲಿ ಜೆಡಿಪಿ  ಪ್ರಗತಿ ಶೇ, 7.2 ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ, 10 ರಷ್ಟಿದೆ. ರಾಜ್ಯದಲ್ಲಿ ಕೌಶಲಾಭಿವೃದ್ಧಿಗೂ ವಿಪುಲ ಅವಕಾಶವಿದೆ. ಭಾರತದ ಒಟ್ಟು ಯಂತ್ರ ಬಿಡಿಭಾಗಗಳ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ, 60 ರಷ್ಟಿದೆ. ಐಟಿ ರಪ್ತು ಶೇ. 39 ರಷ್ಟಿದೆ. ಶೇ. 33 ರಷ್ಟು ಬಯೊಟೆಕ್ ರಪ್ತು ಇದೆ. ಮೂಲಸೌಲಭ್ಯ ಅಭಿವೃದ್ಧಿಗೂ ವಿಶೇಷ ಗಮನ ಹರಿಸಲಾಗಿದೆ. ರಾಜ್ಯದಲ್ಲಿ 9 ಕಡೆ ಉತ್ಪದನಾ ಉದ್ದೇಶಿತ ಕ್ಲಸ್ಟರ್ ಗಳನ್ನು ರಚಿಸಲಾಗಿದೆ ಎಂದರು.
ಹೂಡಿಕೆದಾರರ ಆಕರ್ಷಿಸಲು , ಉದ್ಯೋಗ ಸೃಷ್ಟಿ ಹಿನ್ನೆಲೆಯಲ್ಲಿ ಮುಂದಿನ ವರ್ಷ ಜನವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗುವುದು. ನೀವು ಪಾಲ್ಗೊಳ್ಳುವ ಮೂಲಕ ಅದನ್ನು ಯಶಸ್ವಿಗೊಳಿಸಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com