ಮಧ್ಯಾಹ್ನ 3.45 ಕ್ಕೆ ದೇವಾಂಶ್ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಭಾವನಾ ತನ್ನ ಮೊಬೈಲ್ ನಲ್ಲಿ ಯಾರೊಡನೆಯೋ ಮಾತನಾಡುತ್ತಿದ್ದರು. ಆ ವೇಳೆ ಆಕಸ್ಮಿಕವಾಗಿ ಇಬ್ಬರೂ ಏಲನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರಂತ ಸಂಭವಿಸಿದಾಗ, ಭಾವನಾ ಅವರ ಅತ್ತೆ ತಮ್ಮ ಮಲಗುವ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಶವಗಳನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸ್ಥಳಾಂತರಿಸುವವರೆಗೂ ಅವರಿಗೆ ಈ ಘಟನೆ ಬಗೆಗೆ ಗೊತ್ತಿರಲಿಲ್ಲ. ನೆರೆಹೊರೆಯವರು ತಿಳಿಸಿದ ನಂತರ ಅರಿಹಂತ್ ತಮ್ಮ ಕಚೇರಿಯಿಂದ ಆಸ್ಪತ್ರೆಗೆ ಆಗಮಿಸಿದ್ದಾರೆ. ಅವರ ಕುಟುಂಬ ಒಟ್ಟು ಎಂಟು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡದ ಏಳನೇ ಮಹಡಿಯಲ್ಲಿ ವಾಸವಿತ್ತು.