ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ; ಪೊಲೀಸ್ ಆಯುಕ್ತ ಅಲೋಕ್ ಕುಮಾರ್

ಸಂಚಾರಿ ಪೊಲೀಸ್ ವಿಭಾಗದಲ್ಲಿ ಹೆಲ್ಮೆಟ್ ರಹಿತ ಚಾಲನೆಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಕಡ್ಡಾಯ ನಿಯಮ ಪಾಲನೆಗೆ 15 ದಿನಗಳ ಗಡುವು ನೀಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ
ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ;  ಪೊಲೀಸ್ ಆಯುಕ್ತ ಅಲೋಕ್ ಕುಮಾರ್
ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ; ಪೊಲೀಸ್ ಆಯುಕ್ತ ಅಲೋಕ್ ಕುಮಾರ್
ಬೆಂಗಳೂರು: ಸಂಚಾರಿ ಪೊಲೀಸ್ ವಿಭಾಗದಲ್ಲಿ ಹೆಲ್ಮೆಟ್ ರಹಿತ ಚಾಲನೆಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಕಡ್ಡಾಯ ನಿಯಮ ಪಾಲನೆಗೆ 15 ದಿನಗಳ ಗಡುವು ನೀಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಲ್ಮೆಟ್ ಕಡ್ಡಾಯ ನಿಯಮವನ್ನು ಜಾರಿಗೆ ತಂದಿರುವುದು ಜನರ ಜೀವ ರಕ್ಷಣೆಗಾಗಿ, ಪೊಲೀಸರ ಮಾತುಗಳನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಪೊಲೀಸರ ಉದ್ದೇಶ ಪ್ರಕರಣ ದಾಖಲಿಸುವುದಲ್ಲ ಬದಲಿಗೆ ನಿಯಮ ಉಲ್ಲಂಘನೆ ಮಾಡುವುದನ್ನು ನಿಲ್ಲಿಸಿದರೆ ಜನರ ಸಾವಿನ ಪ್ರಕರಣ ಕಡಿಮೆಯಾಗಬಹುದು ಎಂಬ ಧ್ಯೇಯದಿಂದ ಎಂದರು.  
ಯುವಕರು ಮೋಜು ಮಸ್ತಿಗೆಂದು ದ್ವಿಚಕ್ರ ವಾಹನಗಳಲ್ಲಿ 3 ಜನ ಹೋಗುತ್ತಾರೆ (ತ್ರಿಬಲ್ ರೈಡಿಂಗ್), ಇಂತಹವರಿಗೆ ಅವರ ತಂದೆ, ತಾಯಿ, ಸ್ನೇಹಿತರು ಬುದ್ಧಿವಾದ ಹೇಳಬೇಕು. ನಾಗರೀಕರು ಕಾನೂನು ಉಲ್ಲಂಘನೆ ಮಾಡದೆ ಪೊಲೀಸರೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ನಗರದಲ್ಲಿ ಜನ ಸಂಪರ್ಕ ಸಭೆ ನಡೆಸಲು ಗೃಹ ಸಚಿವರು ಆದೇಶ ಜಾರಿ ಮಾಡಿದ್ದು, ಒಂದೊಂದು ವಿಭಾಗದಲ್ಲಿ ಮಾದರಿ ಜನ ಸ್ನೇಹಿ ಪೊಲೀಸ್ ಠಾಣೆ  ಸ್ಥಾಪಿಸಲು ನಿರ್ಧರಿಸಲಾಗಿದೆ. ಇದು ಕೇವಲ ದೂರು ದಾಖಲಿಸುವ ಠಾಣೆಯಾಗಿರದೆ, ಬದಲಿಗೆ  ಇಲ್ಲಿ ಜನರಿಗೆ ಪೊಲೀಸರ ಬಗೆಗೆ ಭಯ ಹೋಗಿಸಲು ಉದ್ಯಾನ, ಕುಳಿತುಕೊಳ್ಳಲು ಬೇಂಚ್, ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ಜನರು ಪೊಲೀಸರಿಗೆ ಭಯ ಪಡುವ ಅಗತ್ಯವಿಲ್ಲ. ಸಮಸ್ಯೆಗಳಿದ್ದಲ್ಲಿ ಪೊಲೀಸ್ ಠಾಣೆಗೆ ಬಂದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಬಳಿ ನೇರವಾಗಿ ಬಂದು ಬಗೆಹರಿಸಿಕೊಳ್ಳಬಹುದು. ಈ ಕುರಿತು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಭರವಸೆ ನೀಡಿದರು.
ಮಹಿಳಾ ಪೊಲೀಸ್ ಠಾಣೆ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಂದೆ ಮಹಿಳಾ ಠಾಣೆ ಆಗಬಹುದು ಆದರೆ, ಮಹಿಳಾ ಪೊಲೀಸ್ ಠಾಣೆ ಆಗಲಿ ಬಿಡಲಿ, ಮಹಿಳೆಯರ ಸಮಸ್ಯೆಗಳಿಗೆ ಆಧ್ಯತೆ ನೀಡುವುದು ನಮ್ಮ ಜವಾಬ್ದಾರಿ. ಪಿಂಕ್ ಹೊಯ್ಸಳ ಮಹಿಳೆಯರಿಗೆಂದೇ ಇದೆ. ಈಗಾಗಲೇ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಮಹಿಳೆಯರ ಸಮಸ್ಯೆಗಳನ್ನು ಗಂಭೀರವಾಗಿ ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಮೊದಲು ಆಧ್ಯತೆಯಾಗಿದೆ ಎಂದು ಹೇಳಿದರು.
ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ನೊಂದವರಿರುತ್ತಾರೆ. ಅವರಿಗೆ ಅನೇಕರಿಂದ ಪ್ರಕರಣ ಹಿಂತೆಗೆದುಕೊಳ್ಳುವಂತೆ ಒತ್ತಾಯವಿರುತ್ತದೆ. ನೊಂದವರಿಗೆ ರಕ್ಷಣೆ ನೀಡಿ, ಅವರ ಪರವಾಗಿ ನಿಲ್ಲವುದು ನಮ್ಮ ಗುರಿಯಾಗಿದ್ದು, ಈ ತಿಂಗಳಲ್ಲಿ ಕೊನೆಯಲ್ಲಿ ನೊಂದವರ ದಿನಾಚರಣೆಯನ್ನು ಆಚರಿಸಲಿದ್ದೇವೆ. ಹಿಂದಿನಿಂದ ಜನಸಂಪರ್ಕ ಸಭೆ ಹಾಗೂ ಬೀಟ್ ವ್ಯವಸ್ಥೆ ಇದೆ. ಈ ಕುರಿತು ತಿಂಗಳ ಕೊನೆ ಒಳಗೆ ಚರ್ಚಿಸಲಾಗುವುದು ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com