ಇದಪ್ಪಾ ವರಸೆ! ನಾನು ಹೇಳಿದ್ದರಿಂದಲೇ ಸೂರ್ಯ 40 ನಿಮಿಷ ತಡವಾಗಿ ಉದಯಸಿದ; ಬುರುಡೆ ಬಿಟ್ಟ ನಿತ್ಯಾನಂದಸ್ವಾಮಿ

ನಾನು ಹೇಳಿದ್ದರಿಂದಲೇ ಸೂರ್ಯ ಇಂದು 40 ನಿಮಿಷ ತಡವಾಗಿ ಉದಯಿಸಿದ್ದಾನೆ, ಸೂರ್ಯ ನನ್ನ ಮಾತಿನಂತೆ ನಡೆದುಕೊಳ್ಳುತ್ತಾನೆ ಎಂದು ಬಿಡದಿಯ ನಿತ್ಯಾನಂದ ಸ್ವಾಮಿ ...
ನಿತ್ಯಾನಂದ ಸ್ವಾಮಿ
ನಿತ್ಯಾನಂದ ಸ್ವಾಮಿ
Updated on
ಬಿಡದಿ: ನಾನು ಹೇಳಿದ್ದರಿಂದಲೇ ಸೂರ್ಯ ಇಂದು 40 ನಿಮಿಷ ತಡವಾಗಿ ಉದಯಿಸಿದ್ದಾನೆ, ಸೂರ್ಯ ನನ್ನ ಮಾತಿನಂತೆ ನಡೆದುಕೊಳ್ಳುತ್ತಾನೆ ಎಂದು ಬಿಡದಿಯ ನಿತ್ಯಾನಂದ ಸ್ವಾಮಿ ತನ್ನ ಅನುಯಾಯಿಗಳ ಮುಂದೆ ಬುರುಡೆ ಬಿಟ್ಟಿದ್ದಾನೆ.
ಬಿಡದಿಯ ತನ್ನ ಆಶ್ರಮದಲ್ಲಿ ಅನುಯಾಯಿಗಳಿಗೆ ಇತ್ತೀಚೆಗೆ ಪ್ರವಚನ ನೀಡುವಾಗ ಬೆಳಗ್ಗೆ ಧ್ವಜಾರೋಹಣ 6.40 ರಿಂದ 7 ಗಂಟೆಯೊಳಗೆ ಮುಗಿಯಬೇಕು. ಆದರೆ, ಇಂದು ನಾನು ಧ್ವಜಾರೋಹಣಕ್ಕೆ ಬರುವುದು ಸ್ವಲ್ಪ ತಡವಾಯಿತು. ಹಾಗಾಗಿ ನಾನು ದ್ವಜಾರೋಹಣ ಮುಗಿಸುವವರೆಗೂ ಉದಯಿಸದಂತೆ ಸೂರ್ಯನಿಗೆ ತಿಳಿಸಿದ್ದೆ. ಅದರಂತೆ ಇಂದು ಸೂರ್ಯ 40 ನಿಮಿಷ ತಡವಾಗಿ ಉದಯಿಸಿದ್ದಾನೆ.ನನಗೆ ಸೂರ್ಯನನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯ ನನಗಿದೆ ಎಂದು ಹೇಳಿಕೊಂಡಿದ್ದಾನೆ.
ನನ್ನ ಮಾತಿನ ಮೇಲೆ ನಂಬಿಕೆ ಇಲ್ಲದಿದ್ದರೆ ಗೂಗಲ್​ನಲ್ಲಿ ಇಂದು ಬಿಡದಿಯಲ್ಲಿ ಸೂರ್ಯೋದಯವಾಗಬೇಕಿದ್ದ ಸಮಯ ಮತ್ತು ಸೂರ್ಯೋದಯವಾದ ಸಮಯವನ್ನು ಪರೀಕ್ಷಿಸಿ. ನಾನು ಧ್ವಜಾರೋಹಣ ಮುಗಿಸಿ ಹೊರಬಂದಾಗ ಸೂರ್ಯ ಪೂರ್ವದಲ್ಲಿ ಉದಯಿಸುತ್ತಿದ್ದ. ಮೋಡಗಳಿಂದಾಗಿ ಸೂರ್ಯೋದಯ ತಡವಾಗಲಿಲ್ಲ ಎಂಬುದನ್ನು ನೀವು ಗಮನಿಸಬಹುದು ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾನೆ.ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com