ಸಚಿವ ರೇವಣ್ಣಗೆ ಶಾಕ್: ವಿಧಾನಸೌಧದಲ್ಲಿ ನಿಂಬೆಹಣ್ಣಿಗೆ ನೋ ಎಂಟ್ರಿ!

ವಿಧಾನಸೌಧದೊಳಗೆ ನಿಂಬೆಹಣ್ಣನ್ನು ಕೊಂಡೊಯ್ಯೊದಂತೆ ಭದ್ರತಾ ಸಿಬ್ಬಂದಿ ತಡೆ ಹಿಡಿಯುತ್ತಿದ್ದಾರೆ, ಇಷ್ಟು ದಿನ ಕೇವಲ ಬಾಯಿ ಮೂಲಕ ಹೇಳುತ್ತಿದ್ದರು, ಆದರೆ ...
ವಿಧಾನಸೌಧದಲ್ಲಿ ಪರಿಶೀಲನೆ ನಡೆಸುತ್ತಿರುವ ಭದ್ರತಾ ಸಿಬ್ಬಂದಿ
ವಿಧಾನಸೌಧದಲ್ಲಿ ಪರಿಶೀಲನೆ ನಡೆಸುತ್ತಿರುವ ಭದ್ರತಾ ಸಿಬ್ಬಂದಿ
ಬೆಂಗಳೂರು: ವಿಧಾನಸೌಧದೊಳಗೆ ನಿಂಬೆಹಣ್ಣನ್ನು ಕೊಂಡೊಯ್ಯೊದಂತೆ  ಭದ್ರತಾ ಸಿಬ್ಬಂದಿ ತಡೆ ಹಿಡಿಯುತ್ತಿದ್ದಾರೆ, ಇಷ್ಟು ದಿನ ಕೇವಲ ಬಾಯಿ ಮೂಲಕ ಹೇಳುತ್ತಿದ್ದರು, ಆದರೆ ನಿನ್ನೆಯಿಂದ ಕಟ್ಟುನಿಟ್ಟಾಗಿ ವಿಧಾನಸೌಧ ಭದ್ರತಾ ಸಿಬ್ಭಂದಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ.
ನಿಂಬೆ ಹಣ್ಣು ತೆಗೆದುಕೊಂಡು ಹೋದವರನ್ನು ಮೆಟಲ್ ಡಿಟೆಕ್ಟರ್ ಒಳಗೆ ಬಿಡುವುದಿಲ್ಲ, ವಿಧಾನಸೌಧದಲ್ಲಿ ಮಾಟ-ಮಂತ್ರ ಶಂಕೆಯಿಂದಾಗಿ ನಿಂಬೆಹಣ್ಣನ್ನು ಒಳಗೆ ಬಿಡದಿರಲು ನಿರ್ಧರಿಸಿದ್ದಾರೆ. ನಿಂಬೆ ಹಣ್ಣು ಹಿಡಿದುಕೊಂಡು ಹೋಗುವುದು ಶುಭ ಶಕುನ, ನಿಂಬೆ ಹಣ್ಣು ಹಿಡಿದುಕೊಂಡು ಹೋದರೆ ಕೆಲಸಗಳು ಆಗುತ್ತವೆ ಎಂದು ಕೆಲವು ಜನ ನಂಬಿದ್ದಾರೆ. 
ನಿಂಬೆಹಣ್ಣುಗಳು ಭಯ ಹೆಚ್ಚು ಮಾಡುತ್ತಿರುವ ಕಾರಣ ವಿಧೌನಸೌಧದಲ್ಲಿ ನಿಂಬೆಹಣ್ಣಿಗೆ ನೋ ಎಂಟ್ರಿ. ಹೀಗಾಗಿ ಒಳಬರುವ ಎಲ್ಲರನ್ನು ಚೆಕ್ ಮಾಡಿ ಅವರ ಬಳಿ ನಿಂಬೆ ಹಣ್ಣು ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ,.ಇದಕ್ಕೂ ಮೊದಲು ಭದ್ರತಾ ಸಿಬ್ಬಂದಿಗೆ ವಿಧಾನಸೌಧದಲ್ಲಿ  ಪ್ರತಿದಿನ ಸುಮಾರು 20 ರಿಂದ 25 ನಿಂಬೆಹಣ್ಣು ದೊರಕುತ್ತಿದ್ದವು, ಅವುದಳನ್ನು ಕಸದ ಜೊತೆಗೆ ಹಾಕುತ್ತಿದ್ದರು.
ಇದೇ ತಿಂಗಳು ವಿಧಾನಸಭೆ ಕಲಾಪ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ, ಹೀಗಾಗಿ ನಿಂಬೆಹಣ್ಣುಗಳ ಸಂಖ್ಯೆ ಕೂಡ ಹೆಚ್ಚುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ನಿಂಬೆ ಹಣ್ಣು ಪ್ರವೇಶ ನಿಷಿದ್ಧ ಸಂಬಂಧ ಅಧಿಕೃತ ಆದೇಶ ಇನ್ನೂ ಹೊರಟಿಲ್ಲ, 
ನಿಂಬೆಹಣ್ಣನ್ನು ಒಳಗಡೆ ತೆಗೆದುಕೊಂಡು ಹೋಗುವುದರಿಂದ ಕೆಲ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಇರಿಸು ಮುರಿಸು ಉಂಟಾಗುತ್ತಿದೆ, ನಿಂಬೆಹಣ್ಣಿನ ಜೊತೆಗೆ ಮೆಣಸಿನಕಾಯಿ ತರುವುದು ಕಂಡು ಬಂದಿತ್ತು, ಇದರಿಂದ ಹಲವು ಜನ ಪ್ರತಿನಿಧಿಗಳು ಆತಂಕಗೊಂಡಿದ್ದರು,. ಹೀಗಾಗಿ ಒಳತರದಂತೆ ತಡೆದು ಚೆಕ್ ಮಾಡುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಆದರೆ  ನಿಯಮ ಮುಖ್ಯಮಂತ್ರಿ ಸಹೋದರ ಹಾಗೂ ಸಚಿವ ಎಚ್.ಡಿ ರೇವಣ್ಣ ಗೆ ಅನ್ವಯಿಸುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com