ಬೆಂಗಳೂರು: ತಾಯಿ-ಮಗು ಸಾವಿನ ಪ್ರಕರಣಕ್ಕೆ ಟ್ವಿಸ್ಟ್, ಗಂಡನೇ ಅವಳು ನನ್ನಿಂದ ದೂರಾಗಲೆಂದು ಬಯಸಿದ್ದ!

ಬೆಂಗಳೂರು ಆರ್‌ಟಿ ನಗರದ ದಿಣ್ಣೂರು ರಸ್ತೆಯಲ್ಲಿರುವ ಶ್ರೀರಾಮ್ ವೈಟ್ ಹೌಸ್ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಬಿದ್ದು ತಾಯಿ, ಮಗು ಸಾವನ್ನಪ್ಪಿರುವ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು....
ಬೆಂಗಳೂರು: ತಾಯಿ-ಮಗು ಸಾವಿನ ಪ್ರಕರಣಕ್ಕೆ ಟ್ವಿಸ್ಟ್, ಗಂಡನೇ ಅವಳು ನನ್ನಿಂದ ದೂರಾಗಲೆಂದು ಬಯಸಿದ್ದ!
ಬೆಂಗಳೂರು: ತಾಯಿ-ಮಗು ಸಾವಿನ ಪ್ರಕರಣಕ್ಕೆ ಟ್ವಿಸ್ಟ್, ಗಂಡನೇ ಅವಳು ನನ್ನಿಂದ ದೂರಾಗಲೆಂದು ಬಯಸಿದ್ದ!
Updated on
ಬೆಂಗಳೂರು: ಬೆಂಗಳೂರು ಆರ್‌ಟಿ ನಗರದ ದಿಣ್ಣೂರು ರಸ್ತೆಯಲ್ಲಿರುವ ಶ್ರೀರಾಮ್ ವೈಟ್ ಹೌಸ್ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಬಿದ್ದು ತಾಯಿ, ಮಗು ಸಾವನ್ನಪ್ಪಿರುವ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಇದು ಆಕಸ್ಮಿಕವಾಗಿರದೆ ಆತ್ಮಹತ್ಯೆಯಾಗಿದೆ ಎಂದು ಪೋಲೀಸರು ಹೇಳಿದ್ದಾರೆ. ಅಲ್ಲದೆ ಮೃತ ಮಹಿಳೆಯ ಪತಿ ಅರಿಹಂತ್ ತನ್ನ ಪತ್ನಿ ನನ್ನ ಬದುಕಿನಿಂದ ದೂರ ಹೋಗಬೇಕೆಂದು ಬಯಸಿದ್ದ, ಅವರಿಬ್ಬರಲ್ಲಿ ಎಲ್ಲವೂ ಸರಿಯಾಗಿರಲಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಮಧ್ಯಾಹ್ನ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಬಿದ್ದು ಇಪ್ಪತ್ತೊಂಬತ್ತು ವರ್ಷದ ಭಾವನಾ ಮತ್ತು ಆಕೆಯ ಮಗ ದೇವಾಂಶ್ಸಾವನ್ನಪ್ಪಿದ್ದರು.ಭಾವನಾ ಪತಿ ಅರಿಹಂತ್ ಕುಮಾರ್ ಪುಲಕೇಶಿನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ವಾಟ್ಸಾಪ್ ಸಂದೇಶವನ್ನು ಓದಿದ ನಂತರ ಅದರಲ್ಲಿ ಕುಮಾರ್ ಅವರು ದಾಂಪತ್ಯ ಜೀವನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ."ನೀನು ನನ್ನ ಜೀವನದಿಂದ ದೂರವಾಗುವುದನ್ನು ನಾನು ಬಯಸುತ್ತೇನೆ." ಎಂಬ ಸಂದೇಶವನ್ನು  ಅರಿಹಂತ್ ಭಾವನಾಗೆ ಕಳಿಸಿದ್ದಾರೆ.ಇದರಿಂದಾಗಿ ದಂಪತಿಗಳ ನಡುವೆ ವೈಮನಸ್ಯವಿದೆಎಂದು ದೃಢಪಟ್ಟಿದೆ "ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಭಾವನಾ ತನ್ನ ಮಗನನ್ನು ಮೊದಲು ಬಾಲ್ಕನಿಯಲ್ಲಿ ಎಸೆದು ನಂತರ ತಾನೂ ಹಾರಿದ್ದರೆಂದು ಪೊಲೀಸರು ಕಂಡುಕೊಂಡಿದ್ದಾರೆ.“ಭಾವನಾ ತನ್ನ ಮಗನನ್ನು ಕೊಂದಿರುವ ಕಾರಣ ಅವರನ್ನು ಕೊಲೆ ಪ್ರಕರಣದಲ್ಲಿ ಬುಕ್ ಮಾಡಲಾಗುತ್ತದೆ. ಇದಲ್ಲದೆ, ಘಟನೆಯನ್ನು ಎಲ್ಲಾ ದೃಷ್ಟಿಕೋನದಿಂದ ನಿಖೆ ಮಾಡಲಾಗುತ್ತದೆ, "ಎಂದು ಅಧಿಕಾರಿ ಹೇಳಿದರು.  ಭಾವನಾ ಅವರ ಗಂಡನನ್ನು ಪೊಲೀಸರು ಇನ್ನೂ ವಿಚಾರಣೆಗೆ ಒಳಪಡಿಸಿಲ್ಲ, ಕುಟುಂಬ ಸದಸ್ಯರು ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಬುಧವಾರ ಮೃತ ತಾಯಿ ಮತ್ತು ಮಗನ ಕೊನೆಯ ವಿಧಿಗಳು ನೆರವೇರಿದೆ.
ಅರಿಹಂತ್ ಕುಮಾರ್ ಅವರ ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ವೈಟ್ ಹೌಸ್ .ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿತ್ತು ಅಪಾರ್ಟ್‌ಮೆಂಟ್‌ನನಿವಾಸಿಗಳ ಪ್ರಕಾರ, ದಂಪತಿಗಳು ಬಹಳ ಮಾತನಾದುತ್ತಿರಲಿಲ್ಲ. ಅಲ್ಲದೆ ಬಾಲ್ಕನಿಯ ರೇಲಿಂಗ್ ಗಳು ಎತ್ತರದಲ್ಲಿರುವ ಕಾರಣ ಅಪಘಾತಗಳಾಗುವ ಸಂಬವವಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com