ಕಾಂಗ್ರೆಸ್-ಜೆಡಿಎಸ್ ಘಟಾನುಘಟಿ ಶಾಸಕರು ಸೇರಿ 11 ಎಂಎಲ್ಎ ರಾಜಿನಾಮೆ: ಸ್ಪೀಕರ್ ಸ್ವಷ್ಟನೆ

ರಾಜ್ಯ ರಾಜಕಾರಣದಲ್ಲಿ ಬಹು ದೊಡ್ಡ ಬೆಳವಣೆಗೆ ನಡೆದಿದ್ದು ಮೈತ್ರಿ ಸರ್ಕಾರಕ್ಕೆ ದೊಡ್ಡ ಆಘಾತ ಎದುರಾಗಿದ್ದು ಬರೋಬ್ಬರಿ 11 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಹು ದೊಡ್ಡ ಬೆಳವಣೆಗೆ ನಡೆದಿದ್ದು ಮೈತ್ರಿ ಸರ್ಕಾರಕ್ಕೆ ದೊಡ್ಡ ಆಘಾತ ಎದುರಾಗಿದ್ದು ಬರೋಬ್ಬರಿ 11 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಶಾಸಕರ ರಾಜಿನಾಮೆ ಕುರಿತಂತೆ ಮಾಧ್ಯಮಗಳಲ್ಲಿ ತರವಾರಿ ವರದಿಗಳು ಬಿತ್ತರವಾಗುತ್ತಿದ್ದು ಸದ್ಯ ರಮೇಶ್ ಕುಮಾರ್ ಅವರು 11 ಶಾಸಕರು ರಾಜಿನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ. 
ಮೊದಲ ಪಟ್ಟಿಯಲ್ಲಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಜೆಡಿಎಸ್ ನ ಎಚ್.ವಿಶ್ವನಾಥ್ ಹಾಗೂ ಗೋಪಾಲಯ್ಯ ಹಾಗೂ ಶಿವರಾಮ್ ಹೆಬ್ಬಾರ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ರಾಜೀನಾಮೆ, ಮಹೇಶ್ ಕುಮಟಳ್ಳಿ ವಿಧಾನಸೌಧದಲ್ಲಿ ಸ್ಪೀಕರ್ ಕಚೇರಿಗೆ ಆಗಮಿಸಿದ್ದಾರೆ. ಇವರೆಲ್ಲರೂ  ಇಂದು ರಾಜಿನಾಮೆ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. 
ಎರಡನೇ ತಂಡದಲ್ಲಿ ಬೆಂಗಳೂರಿನ ಕೆಆರ್ ಪುರಂ ಶಾಸಕ ಭೈರತಿ ಬಸವರಾಜು, ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ರಾಜಿನಾಮೆ ಸಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com