ಯಾದಗಿರಿ: ಆಸ್ತಿಗಾಗಿ ಜಗಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ,, ಪುತ್ರನ ಬರ್ಬರ ಹತ್ಯೆ
ಆಸ್ತಿ ವಿಚಾರಕ್ಕಾಗಿ ಸಂಬಂಧಿಕರಿಂದಲೇ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಮಗನ ಬರ್ಬರ ಹತ್ಯೆ ಮಾಡಿರುವ ಘಟನೆ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಯಾದಗಿರಿ: ಆಸ್ತಿಗಾಗಿ ಜಗಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ,, ಪುತ್ರನ ಬರ್ಬರ ಹತ್ಯೆ
ಯಾದಗಿರಿ: ಆಸ್ತಿ ವಿಚಾರಕ್ಕಾಗಿ ಸಂಬಂಧಿಕರಿಂದಲೇ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಮಗನ ಬರ್ಬರ ಹತ್ಯೆ ಮಾಡಿರುವ ಘಟನೆ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಹತ್ತಿಕುಣಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶರಣಪ್ಪ ಗಡ್ಡಿ ಮೇಲ್ ಪೂಜಾರಿ (60), ಪುತ್ರ ಸಣ್ಣ ಸಾಬಣ್ಣಾ (23) ಕೊಲೆಯಾದ ದುರ್ದೈವಿಗಳು. ಹತ್ತಿಕುಣಿ ಗ್ರಾಮದ ತೋಟದಲ್ಲಿ ಖ್ರುತ್ಯ ನಡೆದಿದೆ.
ಗಡ್ಡೀಮನಿ ಹಾಗೂ ಅವರ ಸಂಬಂಧಿಕರ ನಡುವೆ ಆಸ್ತಿ ವಿಚಾರದಲ್ಲಿ ಜಗಳವಿದ್ದು ಇದೇ ಕಾರಣಕ್ಕೆ ಈ ಜೋಡಿ ಕೊಲೆ ಆಗಿದೆ ಎಂದು ಪೋಲೀಸರು ಶಂಕಿಸಿದ್ದಾರೆ.
ಘಟನೆ ಮಾಹಿತಿ ಪಡೆದ ಯಾದಗಿರಿ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.