ಕೃಷ್ಣಾ ನದಿ ಒಳಹರಿವು ಹೆಚ್ಚಳ; 6 ಸೇತುವೆಗಳು ಮುಳುಗಡೆ

ಉತ್ತರ ಕರ್ನಾಟಕ ಜಿಲ್ಲೆಯ ಹಲವು ಕಡೆಗಳಲ್ಲಿ ಬರಗಾಲ ಇರುವಾಗ ಕಳೆದ ಕೆಲ ದಿನಗಳಲ್ಲಿ ಪರಿಸ್ಥಿತಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಳಗಾವಿ: ಉತ್ತರ ಕರ್ನಾಟಕ ಜಿಲ್ಲೆಯ ಹಲವು ಕಡೆಗಳಲ್ಲಿ ಬರಗಾಲ ಇರುವಾಗ ಕಳೆದ ಕೆಲ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಮಹಾರಾಷ್ಟ್ರ ಗಡಿ ಭಾಗದ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ. 
ಗಡಿ ಪ್ರದೇಶದಲ್ಲಿ ಮತ್ತು ಮಹಾರಾಷ್ಟ್ರದ ಪಾಶ್ಚಾತ್ಯ ಭಾಗದಲ್ಲಿ ಹಲವು ಜಲಾಶಯಗಳು ತುಂಬಿರುವುದರಿಂದ ಉತ್ತರ ಕರ್ನಾಟಕದ ಕೃಷ್ಣಾ ನದಿಗೆ ಒಳಹರಿವು ಹೆಚ್ಚಾಗಿದೆ. ಕೃಷ್ಣಾ ನದಿಯ ಹಲವು ಉಪನದಿಗಳಲ್ಲಿ ಸಹ ಕಳೆದ ಕೆಲ ದಿನಗಳಿಂದ ಒಳಹರಿವು ಹೆಚ್ಚಾಗಿದೆ.
ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಗಡಿ ಭಾಗದ ತಗ್ಗು ಪ್ರದೇಶದಲ್ಲಿರುವ ಕನಿಷ್ಠ 6 ಜಲಾಶಯಗಳು ಕೃಷ್ಣಾ ನದಿ ನೀರು ತುಂಬಿ ಹರಿಯುತ್ತಿರುವುದರಿಂದ ಮುಳುಗಿಹೋಗಿವೆ. ಕೃಷ್ಣಾ ನದಿಗೆ ಮಹಾರಾಷ್ಟ್ರದ ರಾಜಪುರ ಅಣೆಕಟ್ಟಿನಿಂದ ನೀರಿನ ಹರಿವು ಹೆಚ್ಚಾಗಿದ್ದು ಅವ್ಯಾಹತ ಮಳೆಯಿಂದ ಸೇತುವೆಗಳು ಮುಳುಗಿ ಅಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಕೃಷ್ಣಾ ನದಿ ತೀರದಲ್ಲಿ ನೆರೆ ಪ್ರವಾಹದ ಸಾಧ್ಯತೆಯ ನಿಗಾವಹಿಸುತ್ತಿರುವ ತಹಶಿಲ್ದಾರ್ ಸಂತೋಷ್ ಬಿರಾದಾರ್, ನದಿಗೆ ಜನರು ಇಳಿಯದಂತೆ ಅಥವಾ ನೀರಿನೊಳಗೆ ಜಾನುವಾರುಗಳನ್ನು ಇಳಿಸದಂತೆ ಎಚ್ಚರಿಕೆ ನೀಡಿದ್ದಾರೆ. ತೀರ ಭಾಗದಲ್ಲಿ ಪ್ರವಾಹ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಉತ್ತರ ಕರ್ನಾಟಕ ಭಾಗದ ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟದಲ್ಲಿನ ಜತ್ರಾಟ-ಭಿವಶಿ, ಮಲಿಕವಾಡ-ದತ್ತವಾಡ ಸೇತುವೆಗಳು ಮುಳುಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com