ಭಟ್ಕಳ: ಮುರುಡೇಶ್ವರದಲ್ಲಿ ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಯುವಕರ ರಕ್ಷಣೆ

ಮುರುಡೇಶ್ವರಕ್ಕೆ ವಾರಾಂತ್ಯ ಪ್ರವಾಸಕ್ಕಾಗಿ ತೆರಳಿದ್ದ ಬೆಂಗಳೂರಿನ ಮೂವರು ಟೆಕ್ಕಿಗಳು ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಮುರುಡೇಶ್ವರದಲ್ಲಿ ಸಮುದ್ರಪಾಲಾಗುತ್ತಿದ್ದ  ಬೆಂಗಳೂರು ಯುವಕರ ರಕ್ಷಣೆ
ಮುರುಡೇಶ್ವರದಲ್ಲಿ ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಯುವಕರ ರಕ್ಷಣೆ
ಭಟ್ಕಳ: ಮುರುಡೇಶ್ವರಕ್ಕೆ ವಾರಾಂತ್ಯ ಪ್ರವಾಸಕ್ಕಾಗಿ ತೆರಳಿದ್ದ ಬೆಂಗಳೂರಿನ ಮೂವರು ಟೆಕ್ಕಿಗಳು ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸಮುದ್ರಪಾಲಾಗುತ್ತಿದ್ದ ಪ್ರವಾಸಿ ಯುವಕರನ್ನು ಅಲ್ಲಿನ ಸ್ಥಳೀಯ ಜನರ ಗುಂಪು ರಕ್ಷಿಸಿದೆ.
ಈಜಲೆಂದು ಸಮುದ್ರಕ್ಕೆ ಇಳಿದಿದ್ದ ಮೂವರೂ ಅಲೆಯ ಹೊಡೆತಕ್ಕೆ ಕೊಚ್ಚಿ ಹೋಗಿದ್ದಾರೆ. ಆಗ ಅವರ ಗುಂಪಿನ ಇತರರು ಸಹಾಯಕ್ಕಾಗಿ ಮೊರೆ ಇಟ್ತಾಗ ಸ್ಥಳೀಯರು ಅವರಿಗೆ ರಕ್ಷಣೆ ನಿಡಿದ್ದಾರೆ. ಹೀಗೆ ರಕ್ಷಿಸಲ್ಪಟ್ಟವರನ್ನು ಆನಂದ್, ಸುರೇಶ್ ಮತ್ತು ಹರೀಶ್ ಎಸ್ ಸಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ದೊಡ್ಡಬಳ್ಳಾಪುರದವರೆಂದು ತಿಳಿದುಬಂದಿದೆ.
ಈ ಮೂವರೂ ನಗರದ ಸಿವಿಲ್ ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಪ್ರಾಥಮಿಕ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.ಮಳೆಗಾಲದಲ್ಲಿ ಸಮುದ್ರವು ಉಕ್ಕಿ ಬರುವುದರಿಂದ ಮೀನುಗಾರರು ಸಹ ಸಮುದ್ರಕ್ಕೆ ಹೋಗುವುದಿಲ್ಲ ಹಾಗಾಗಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆಯಾದರೂ ಹೆಚ್ಚಿನ ಯುವಕರು ಸಮುದ್ರದಲ್ಲಿ ಈಜಲು ಮುಂದಾಗಿ ಪ್ರಾಣಕ್ಕೆ ಕಂಟಕ ತರಿಸಿಕೊಳ್ಳುತ್ತಿದ್ದಾರೆ.
ಇನ್ನು ಇದೇ ಮುರುಡೇಶ್ವರದಲ್ಲಿ ಕಳೆಅ ವಾರ ಧಾರವಾಡದ ಇಬ್ಬರು ಯುವಕರು ನೀರುಪಾಲಾಗಿದ್ದರೆನ್ನುವುದನ್ನು ನಾವಿಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com