ಬೆಂಗಳೂರು: ಮದ್ಯಪಾನ ಮಾಡಿದ್ದ ಏರ್ ಇಂಡಿಯಾ ಪೈಲಟ್ ಅಮಾನತು

ವಿಮಾನ ಚಾಲನೆ ಮಾಡದಿದ್ದರೂ ಮದ್ಯಪಾನ ಮಾಡಿ ಕಾಕ್ ಪಿಟ್ ನಲ್ಲಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ನನ್ನು ಮೂರು ತಿಂಗಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಮಾನ ಚಾಲನೆ ಮಾಡದಿದ್ದರೂ ಮದ್ಯಪಾನ ಮಾಡಿ ಕಾಕ್ ಪಿಟ್ ನಲ್ಲಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ನನ್ನು ಮೂರು ತಿಂಗಳ ಕಾಲ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಜುಲೈ 13ರಂದು ರಜೆಯಲ್ಲಿದ್ದ ಪೈಲಟ್ ಜಿತೇಂದ್ರ ಸಿಂಗ್ ಅವರು ಕಾಕ್ ಪಿಟ್ ನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅವರನ್ನು ಆಲ್ಕೋಹಾಲ್ ಪರೀಕ್ಷೆಗೆ ಒಳಪಡಿಸಾಗಿದ್ದು, ಪರೀಕ್ಷೆಯಲ್ಲಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.
ವಿಮಾನದಲ್ಲಿ ಒಂದೇ ಒಂದು ಆಸನ ಕೂಡ ಖಾಲಿ ಇಲ್ಲದ ಕಾರಣ ಪೈಲಟ್ ಜಿತೇಂದ್ರ ಸಿಂಗ್ ಅವರಿಗೆ ಸಹಾಯಕ ಪೈಲಟ್ ಆಗಿ ಕಾಕ್ ಪಿಟ್ ನಲ್ಲಿ ಪ್ರಯಾಣಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ದ ನಿಯಮಗಳಡಿ ಅನುಮತಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಕಾಕ್ ಪಿಟ್ ಪ್ರವೇಶಿಸುವ ಪ್ರತಿಯೊಬ್ಬರು ಪ್ರಯಾಣಕ್ಕು ಮುನ್ನ ಮತ್ತು ನಂತರ ಆಲ್ಕೋಹಾಲ್ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿದೆ ಮತ್ತು ಮದ್ಯಪಾನ ಮಾಡಿ ಕಾಕ್ ಪಿಟ್ ನಲ್ಲಿ ಪ್ರಯಾಣಿಸುವಂತಿಲ್ಲ ಎಂಬ ನಿಯಮವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com