ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯೇ ಎಂಎಂ ಕಲ್ಬುರ್ಗಿ ಹಂತಕ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೇ ಹಿರಿಯ ಸಂಶೋಧಕ, ಪ್ರಗತಿಪರ ಚಿಂತಕ ಎಂಎಂ ಕಲ್ಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದವನು ಎಂಬುದು ಪತ್ತೆಯಾಗಿದೆ.
ಗೌರಿ ಲಂಕೇಶ್
ಗೌರಿ ಲಂಕೇಶ್
Updated on
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೇ ಹಿರಿಯ ಸಂಶೋಧಕ, ಪ್ರಗತಿಪರ ಚಿಂತಕ  ಎಂಎಂ ಕಲ್ಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದವನು ಎಂಬುದು ಪತ್ತೆಯಾಗಿದೆ.
ಹುಬ್ಬಳ್ಳಿಯ ಗಂಧದ ಕಡ್ಡಿ ವ್ಯಾಪಾರಿ ಗಣೇಶ್ ಮಿಸ್ಕಿನ್,  ಕೆಲ ಹಿಂದೂ ಮೂಲಭೂತ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದು, ಧಾರವಾಡದಲ್ಲಿ ನಿನ್ನೆ ನಡೆದ ಪರೇಡ್ ನಲ್ಲಿ ಕಲ್ಬುರ್ಗಿ ಅವರ ಪತ್ನಿ ಉಮಾದೇವಿ ಹಾಗೂ ಮತ್ತೊಬ್ಬ ಪ್ರತ್ಯಕ್ಷದರ್ಶಿ ಈತನನ್ನು ಗುರುತಿಸಿದ್ದಾರೆ.ಮಿಸ್ಕನ್ ನೋಡಿದ ಕೂಡಲೇ ಉಮಾದೇವಿ ಕುಸಿದು ಬಿದಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮೂಲಗಳಿಂದ ತಿಳಿದುಬಂದಿದೆ.
2015 ಆಗಸ್ಟ್ 30 ರಂದು ಬೆಳಗ್ಗೆ ಮಿಸ್ಕಿನ್ ನನ್ನು ಉಮಾದೇವಿ ನೋಡಿದ್ದಾರೆ. ಆತ ಬಾಗಿಲು ಬಡಿದಾಗ ಉಮಾದೇವಿ ಬಾಗಿಲು ತೆರೆದಿದ್ದಾರೆ. ಆಗ ಮಿಸ್ಕಿನ್  ಪ್ರೋಫೆಸರ್ ಕಲ್ಬುರ್ಗಿ ಅವರನ್ನು ಕೇಳಿದ್ದಾನೆ. ನಂತರ ಅವರು ಬಾಗಿಲ ಬಳಿ ಬಂದಾಗ ಮಿಸ್ಕಿನ್   7.65 ಎಂಎಂ ಪಿಸ್ತೂಲ್ ನಿಂದ ಕಲ್ಬುರ್ಗಿ ಹಣೆಗೆ ಗುಂಡು ಹೊಡೆದಿದ್ದಾನೆ. ಆದೇ ಪಿಸ್ತೂಲ್ ನ್ನು ಸೆಪ್ಟೆಂಬರ್ 5, 2017ರಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆಯಲ್ಲೂ ಬಳಸಿದ್ದಾನೆ.
ಕಲ್ಬರ್ಗಿ ಹತ್ಯೆ  ಪ್ರಕರಣದಲ್ಲಿ ಕೆಲ ಪ್ರತ್ಯೇಕ್ಷದರ್ಶಿಗಳ ನೀಡಿದ ಹೇಳಿಕೆ ಆಧಾರದ ಮೇಲೆ ಮೇ 31 ರಂದು ಪ್ರವೀಣ್ ಪ್ರಕಾಶ್ ಚಾತೂರ್  ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶೂಟರ್ ಪರುಶುರಾಮ್  ವಾಗ್ಮರೆ ಹಾಗೂ ಅಮೊಲ್ ಕಾಳೆಯನ್ನು ಎಸ್ ಐಟಿ ಪೊಲೀಸರು ಬಂಧಿಸಿದ್ದರು.ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಎಸ್ ಐಟಿ ಸದ್ಯದಲ್ಲಿಯೇ  ಚಾರ್ಜ್ ಶೀಟ್ ದಾಖಲಿಸುವ ಸಾಧ್ಯತೆ ಇದೆ.
ಕಲ್ಬುರ್ಗಿ ತನಿಖೆ ಜೊತೆಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುವಂತೆ ಎಸ್ ಐಟಿಗೆ ಸುಪ್ರೀಂಕೋರ್ಟ್ ಫೆಬ್ರವರಿ ತಿಂಗಳಲ್ಲಿ ನಿರ್ದೇಶನ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com