ಆನೆಗುಂದಿ ವ್ಯಾಸರಾಜರ ವೃಂದಾವನ ಧ್ವಂಸ: ಪೇಜಾವರ ಶ್ರೀ, ಮಂತ್ರಾಲಯ ಶ್ರೀ ಸೇರಿ ಮಠಾಧೀಶರ ಖಂಡನೆ

ಕೊಪ್ಪಳ ಜಿಲ್ಲೆ ಪ್ರಸಿದ್ದ ಐತಿಹಾಸಿಕ ಸ್ಥಳ ಆನೆಗುಂದಿಯಲ್ಲಿರುವ ನವ ವೃಂದಾವನದಲ್ಲಿ ವ್ಯಾಸರಾಜರ ವೃಂದಾವನವನ್ನು ಧ್ವಂಸ ಗೊಳಿಸಿಸಿರುವ ಬಗೆಗೆ ಮಾದ್ವ ಮಠಾಧಿಶರಾದ ಪೇಜಾವರ ಶ್ರೀಗಳು....
ಆನೆಗುಂದಿ ವ್ಯಾಸರಾಜರ ವೃಂದಾವನ ಧ್ವಂಸ: ಪೇಜಾವರ ಶ್ರೀ, ಮಂತ್ರಾಲಯ ಶ್ರೀ ಸೇರಿ ಮಠಾಧೀಶರ ಖಂಡನೆ
ಆನೆಗುಂದಿ ವ್ಯಾಸರಾಜರ ವೃಂದಾವನ ಧ್ವಂಸ: ಪೇಜಾವರ ಶ್ರೀ, ಮಂತ್ರಾಲಯ ಶ್ರೀ ಸೇರಿ ಮಠಾಧೀಶರ ಖಂಡನೆ
ಕೊಪ್ಪಳ: ಕೊಪ್ಪಳ ಜಿಲ್ಲೆ ಪ್ರಸಿದ್ದ ಐತಿಹಾಸಿಕ ಸ್ಥಳ ಆನೆಗುಂದಿಯಲ್ಲಿರುವ  ನವ ವೃಂದಾವನದಲ್ಲಿ ವ್ಯಾಸರಾಜರ ವೃಂದಾವನವನ್ನು ಧ್ವಂಸ ಗೊಳಿಸಿಸಿರುವ ಬಗೆಗೆ ಮಾದ್ವ ಮಠಾಧಿಶರಾದ ಪೇಜಾವರ ಶ್ರೀಗಳು, ಮಂತ್ರಾಯ್ಲಯ ಮಠಾಧೀಶರು ಸೇರಿ ಅನೇಕ ಸ್ವಾಮೀಜಿಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
"ಈ ಘಟನೆ ಆಘಾತಕಾರಿ, ರಾಜ್ಯದ ಹೆಮ್ಮೆಯ ಸಂಕೇತ ವಿಜಯನಗರ ಸಾಮ್ರಾಜ್ಯದ ದೊರೆಯಾಗಿದ್ದ ಶ್ರೀಕೃಷ್ಣದೇವರಾಯನ ರಾಜಗುರುಗಳಾಗಿದ್ದ ವ್ಯಾಸರಾಜರ ವೃಂದಾವನವನ್ನು ರಕ್ಷಣೆ ಂಆಡುವುದು ಸರ್ಕಾರದ ಹೊಣೆಯಾಗಿದೆ. ರಾಘವೇಂದ್ರ ಸ್ವಾಮೀಜಿಗಳ ಪೂರ್ವ ಅವ್ತಾರ ಎಂದು ಭಾವಿಸುವ ವ್ಯಾಸರಾಯರ ವೃಂದಾವನಕ್ಕೆ ಹಾನಿಯಾಗಿರುವ ಘಟನೆಯನ್ನು ಸರ್ಕಾರ ಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು: ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥರು ಸಹ ವ್ಯಾಸರಾಯರ ವೃಂದಾವನ ದ್ವಂಸ ಘಟನೆಯನ್ನು ಖಂಡಿಸಿದ್ದು "ವ್ಯಾಸರಾಯರು ಕನ್ನಡ ದಾಸ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದವರು, ಅವರ ವೃಂದಾವನ ಧ್ವಂಸಗೊಳಿಸಿದವರಿಗೆ ಸೂಕ್ತ ಶಿಕ್ಷೆಯಾಗಲಿ" ಎಂದಿದ್ದಾರೆ.
ಇದು ಮಾದ್ವ ಸಮಾಜಕ್ಕೆ ಕರಾಳ ದಿನ
ಇಂದು ಮಾದ್ವ ಸಮಾಜಕ್ಕೆ ಕರಾಳ ದಿನ ರಾತ್ರಿ ಬೆಳಗಾಗುವುದರಲ್ಲಿ ವ್ಯಾಸರಾಜರ ವೃಂದಾವನವನ್ನು ಅಗೆದು ಹಾಕಿರುವುದು ಖಂಡನಾರ್ಹ ಸಂಗತಿ, ಮೂಲ ವೃಂದಾವನವನ್ನು ನಾಶಗೊಳಿಸಿದ ದುಷ್ಕರ್ಮಿಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಪತ್ತೆಮಾಡಿ ಶಿಕ್ಷಿಸಬೇಕು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಮಂತ್ರಾಯ್ಲಯದಿಂದ ಆನೆಗುಂದಿಗೆ ತೆರಳುವ ಮಾರ್ಗದ ನಡುವೆ ರಾಯಚೂರಿನಲ್ಲಿ ಸುದ್ದಿಗಾರರೊಡನೆ ಂಆತನಾಡಿದ ಶ್ರೀಗಳು "ಹಿಂದೂ ಸಂಸ್ಕೃತಿ ಶ್ರದ್ದಾಕೇಂದ್ರದ ಮೇಲಿನ ಅಪಮಾನ ಖಂಡನಾರ್ಹ. ಹಿಂದೂ ಸಮಾಜ, ಮಾದ್ವ ಸಮಾಜದ ಪಾಲಿಗೆ ಇಂದು ಕರಾಳ ದಿನವಾಗಿದೆ.ಸುದ್ದಿ ತಿಳಿದಾಕ್ಷಣ ಮನಸ್ಸು ವ್ಯಾಕುಲವಾಗಿದ್ದು ಆನೆಗುಂದಿಗೆ ತೆರಳುತ್ತಿದ್ದೇನೆ" ಅವರು ಹೇಳಿದ್ದಾರೆ.
"ಪ್ರತಿಯೊಬ್ಬರೂ ಇದನ್ನು ಖಂಡಿಸಿ ಪ್ರತಿಭಟಿಸಬೇಕಿದೆ. ಮೂಲ ವೃಂದಾವನ ಪುನರ್ ಸ್ಥಾಪನೆಗೆ ಅಗತ್ಯವಾಗಿರುವ ಧಾರ್ಮಿಕ ವಿಧಿ ವಿಧಾನದ ಅಗತ್ಯ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಧಾರ್ಮಿಕ ಶ್ರದ್ದಾಕೇಂದ್ರಗಳಲ್ಲಿ ಸಿಸಿಟಿವಿ ಸೇರಿದಂತೆ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಅಗತ್ಯ" ಅವರು ಹೇಳಿದ್ದಾರೆ.
ಇನ್ನು ಘಟನೆಯಿಂದ ತೀವ್ರ ಮನನೊಂದಿರುವ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಇಂದು ಸಂಜೆಯೊಳಗೆ ಹೊಸಪೇಟೆ ಭೇಟಿ ನೀಡಲಿದ್ದಾರೆ ಸಧ್ಯ ಮುಂಬೈ ಪ್ರವಾಸದಲ್ಲಿರುವ ಶ್ರೀಗಳು ತಮ್ಮ ನಿಗದಿತ ಕಾರ್ಯಕ್ರಮಗಳನ್ನು ರದ್ದು ಮಾಡಿ ಆನೆಗುಂದಿಯತ್ತ ತೆರಳುವವರಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com