ಹಿರಿಯ ವಕೀಲ ಬಿವಿ ಆಚಾರ್ಯ
ಹಿರಿಯ ವಕೀಲ ಬಿವಿ ಆಚಾರ್ಯ

ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಡೆ ಕಾನೂನುಬಾಹಿರ: ಹಿರಿಯ ವಕೀಲ ಬಿವಿ ಆಚಾರ್ಯ

ಮೈತ್ರಿ ಪಕ್ಷಗಳ ಸರ್ಕಾರಕ್ಕೆ ವಿಶ್ವಾಸಮತ ಕುಸಿಯುವಂತೆ ಮಾಡಿ ಮುಂಬೈಗೆ ತೆರಳಿದ್ದ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಡೆ ಕಾನೂನುಬಾಹಿರವಾಗಿದೆ ಎಂದು ಹಿರಿಯ ವಕೀಲ ಬಿವಿ ಆಚಾರ್ಯ ಹೇಳಿದ್ದಾರೆ.
Published on
ಬೆಂಗಳೂರು: ಮೈತ್ರಿ ಪಕ್ಷಗಳ ಸರ್ಕಾರಕ್ಕೆ ವಿಶ್ವಾಸಮತ ಕುಸಿಯುವಂತೆ ಮಾಡಿ ಮುಂಬೈಗೆ ತೆರಳಿದ್ದ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಡೆ ಕಾನೂನುಬಾಹಿರವಾಗಿದೆ ಎಂದು ಹಿರಿಯ ವಕೀಲ ಬಿವಿ ಆಚಾರ್ಯ ಹೇಳಿದ್ದಾರೆ.
"ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್ ಗೆ ನೀಡಿದ್ದೇ ಸರಿಯಲ್ಲ, ಹಿಂದಿನಿಂಡಲೂ ಸ್ಪೀಕರ್ ಗಳು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದದ್ದೇ ಹೆಚ್ಚು. ಅವರು ಆಡಳಿತ ಪಕ್ಷದ ಮುಖವಾಣಿಯಂತೆಯೇ ಕೆಲಸ ಮಾಡುತ್ತಾರೆ.ಇದಕ್ಕಾಗಿ ಸ್ಪೀಕರ್ ಅವರಿಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ನೀಡುವುದು ಸರಿಯಲ್ಲ" ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ ಹೇಳಿದ್ದಾರೆ.
ಇಂದಿನ ರಾಜಕೀಯ ಬಿಕ್ಕಟ್ಟಿಗೆ ಸ್ಪೀಕರ್ ಅವರ ನಡವಳಿಕೆಯೇ ಕಾರಣ ಎಂದಿರುವ ಆಚಾರ್ಯ ಅತೃಪ್ತ ಶಾಸಕರು ನಿಡಿದ ರಾಜೀನಾಮೆ ಕ್ರಮಬದ್ದವಾಗಿಲ್ಲ ಎಂದಿರುವ ಸ್ಪೀಕರ್ ರಾಜೀನಾಮೆ ಪತ್ರದಲ್ಲಿ ಯಾವ ದೋಷವಿದೆ ಎಂದು ಇದುವರೆಗೆ ಬಹಿರಂಗಪಡಿಸಿಲ್ಲ. ಅಲ್ಲದೆ ರಾಜೀನಾಮೆ ವಿಷಯವನ್ನು ವಿಳಂಬ ಮಾಡಲು ಸ್ಪೀಕರ್ ಅವರಿಗೆ ಅವಕಾಶವೇ ಇಲ್ಲ ಹಾಗಾಗಿ ಇಂದಿನ ರಾಜಕೀಯ ಪರಿಸ್ಥಿತಿಗೆ ಅವರ ನಡವಳಿಕೆಯೇ ಮೂಲ ಕಾರಣವಾಗಿದೆ ಎಂದರು.
"ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥಗೊಳಿಸುವಂತೆ ಸ್ಪೀಕರ್ ಅವರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆದರೆ ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಶಾಸಕರ ಅನರ್ಹತೆಗೆ ಮುನ್ನ ನಿರ್ದಿಷ್ಟ ಕ್ರಮ ಅನುಸರಿಸುವುದು ಕಡ್ಡಾಯ. ಆದರೆ ಸ್ಪೀಕರ್ ಅದಾವುದನ್ನೂ ಂಆಡಎ ಗುರುವಾರ ಮೂವರು ಹಾಗೂ ಭಾನುವಾರ ಹದಿನಾಲ್ಕು ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದು ಸರಿಯಲ್ಲ" ಆಚಾರ್ಯ ಹೇಳಿದ್ದಾರೆ.
ಶಾಸಕರು ಖುದ್ದು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದ ಕಾರಣ ಸ್ಪೀಕರ್ ಅದನ್ನು ಅಂಗೀಕರಿಸಬೇಕಾಗಿತ್ತು ಎಂದಿರುವ ಆಚಾರ್ಯ  "ಒಂದು ವೇಳೆ ಶಾಸಕರು ಬೇರೆಯವರ ಒತ್ತಡದಿಂದ ರಾಜೀನಾಮೆ ಸಲ್ಲಿಸಿದ್ದರೆ ಅಥವಾ ರಾಜೀನಾಮೆ ಪತ್ರ ನಕಲಿಯಾಗಿದ್ದರೆ ಮಾತ್ರ ಅವರ ರಾಜೀನಾಮೆಯನ್ನು ತಿರಸ್ಕರಿಸಭುದು, ಆದರೆ ಇಂದಿನ ಪ್ರಕರಣದಲ್ಲಿ ಹಾಗೇನೂ ಆಗಿಲ್ಲ, ಹಾಗಾಗಿ ರಾಜೀನಾಮೆ ಅಂಗೀಕರಿಸದೆ ಅವರನ್ನು ಅನರ್ಹಗೊಳಿಸಿರುವುದು ಸರಿಯಲ್ಲ" ಎಂದು ಅಭಿಪ್ರಾಯಪಟ್ಟರು.
ಪಕ್ಷಾಂತರ ಕಾಯ್ದೆ ಅನ್ವಯಿಸಲ್ಲ!
ಅತೃಪ್ತ ಶಾಶಕರ ವಿರುದ್ಧ ಕಾಂಗ್ರೆಸ್ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ಸಲ್ಲಿಸಿದೆ. ಆದರೆ ಇಲ್ಲಿ ಆ ಕಾಯ್ದೆ ಅನ್ವಯವಾಗುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ.ಪಕ್ಷಾಂತರ ಕಾಯ್ದೆ ಪ್ರಕಾರ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವುದೆಂದರೆ ಶಾಸಕ ಸ್ಥಾನವನ್ನು ಪ್ರತಿಬಂಧಿಸಿದಂತೆ ಎಂದು ಬಿವಿ ಆಚಾರ್ಯ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com