ಮೈಸೂರು: ಮೈಸೂರು ರೈಲು ನಿಲ್ದಾಣದಲ್ಲಿ ಯಾರ್ಡ್ ಮರುವಿನ್ಯಾಸ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಜೂನ್ 23 ರವರೆಗೆ ಸುಮಾರು 30 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಪ್ಲಾಟ್ ಫಾರಂ ಸಂಖ್ಯೆ 5 ಮತ್ತು 6 ರಿಂದ ಚಾಮರಾಜನಗರ ಕಡೆಗೆ ಸಂಪರ್ಕ ಕಲ್ಪಿಸುವುದನ್ನು ಯಾರ್ಡ್ ಮರುವಿನ್ಯಾಸ ಕಾಮಗಾರಿ ಒಳಗೊಂಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸದ್ಯ ಪ್ಲಾಟ್‍ಫಾರಂ 5 ಮತ್ತು 6ಕ್ಕೆ ಬರುವ ರೈಲುಗಳು ಚಾಮರಾಜನಗರ ಕಡೆ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಪ್ಲಾಟ್‍ಫಾರಂ 1 ರಿಂದ 4 ರವರೆಗಿನ ರೈಲುಗಳನ್ನು ಮಾತ್ರ ಚಾಮರಾಜನಗರ ಕಡೆ ವಿಸ್ತರಿಸಬಹುದಾಗಿತ್ತು. ಚಾಮರಾಜನಗರ ಮಾರ್ಗಕ್ಕೆ ಪ್ಲಾಟ್‍ಫಾರಂ 5 ಮತ್ತು 6 ಅನ್ನು ಸಂಪರ್ಕಿಸುವುದರಿಂದ ಅಶೋಕಪುರಂವರೆಗೆ ಹೆಚ್ಚಿನ ರೈಲುಗಳನ್ನು ವಿಸ್ತರಿಸಲು ಅನುಕೂಲವಾಗಲಿದೆ.
ಹಾಗೆಯೇ, ಬೆಂಗಳೂರಿನಲ್ಲಿ ಯಾರ್ಡ್ ಮರುವಿನ್ಯಾಸ ಕಾಮಗಾರಿಯೂ ನಡೆಯುತ್ತಿದೆ. ವಿವಿಧ ಮಾರ್ಗಗಳಲ್ಲಿ ಏಕಕಾಲದಲ್ಲಿ ಆಗಮಮಿಸುವ ಮತ್ತು ನಿರ್ಗಮಿಸುವ ರೈಲುಗಳಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೆ, ಮೈಸೂರಿನಲ್ಲಿ ಹೊರವಲಯ ಸಿಗ್ನಲ್‍ನಲ್ಲಿ ಆಗಮನದ ರೈಲುಗಳು ಕಾಯುವುದು ಸ್ವಲ್ಪ ಕಡಿಮೆಯಾಗಲಿದೆ.
ಜೂನ್ 16 ಮತ್ತು ಜೂನ್ 23 ರ ನಡುವೆ ಹಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.