ವಿಶ್ವ ರಕ್ತದಾನಿಗಳ ದಿನ: ರಕ್ತದಾನವೇ ಮಹಾದಾನ ಎಂಬುದನ್ನು ಸಾಧಿಸಿ ತೋರಿಸಿದ ರಂಗನಾಥನ್

ಇಂದು ವಿಶ್ವ ರಕ್ತದಾನಿಗಳ ದಿನ . ಮಾನವನ ರಕ್ತ ಅಮೃತಕ್ಕೆ ಸಮಾನವಾದದ್ದಾಗಿದ್ದು ರಕ್ತದಾನ ಮಹಾದಾನಗಳಲ್ಲಿ ಒಂದೆನಿಸಿದೆ. ಇಂತಹಾ ವೇಳೆ ಬೆಂಗಳೂರಿನ ಮಾನವ ಹಕ್ಕುಗಳ ಕಾರ್ಯಕರ್ತರೊಬ್ಬರ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಇಂದು ವಿಶ್ವ ರಕ್ತದಾನಿಗಳ ದಿನ .ಮಾನವನ ರಕ್ತ ಅಮೃತಕ್ಕೆ ಸಮಾನವಾದದ್ದಾಗಿದ್ದು ರಕ್ತದಾನ ಮಹಾದಾನಗಳಲ್ಲಿ ಒಂದೆನಿಸಿದೆ. ಇಂತಹಾ ವೇಳೆ ಬೆಂಗಳೂರಿನ ಮಾನವ ಹಕ್ಕುಗಳ ಕಾರ್ಯಕರ್ತರೊಬ್ಬರ ವಿಶೇಷ ಪರಿಚಯವನ್ನಿಲ್ಲಿ ನಾವು ನಿಮಗೆ ಮಾಡಿಕೊಡಲಿದ್ದೇವೆ.
ಮಾನವ ಹಕ್ಕುಗಳ ಕಾರ್ಯಕರ್ತ ಮನೋಹರ್ ರಂಗನಾಥನ್ ತಾವು ಮೊದಲಿಗೆ ಯೋನಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಗೆ ರಕ್ತದಾನ ಮಾಡಿದ್ದರು. ಅಂದಿನಿಂದ, ಅವರು ಇಲ್ಲಿಯವರೆಗೂ 80 ಬಾರಿ ರಕ್ತದಾನ ಮಾಡಿದ್ದಾರೆ. 1992 ರಲ್ಲಿ ಅವರು ಕ್ಯಾನ್ಸರ್ ಪೀಡಿತ ಮಹಿಳೆಗೆ ರಕ್ತ ನೀಡಿದ್ದರು.ಕಿದ್ವಾಯಿ ಆಸ್ಪತ್ರೆಯಲ್ಲಿ ಆ ಮಹಿಳೆ ದಾಖಲಾಗಿದ್ದಾಗ ಆಕೆಗೆ ಬಿ ಪಾಸಿಟಿವ್ ಗುಂಪಿನ ರಕ್ತದ ಅಗತ್ಯವಿತ್ತು.
"ಆ ಮಹಿಳೆಯ ಪುತ್ರನ ರಕ್ತ ಅವರಿಗೆ ಹೊಂದುತ್ತಿತ್ತು. ಆದರೆ ದೊಡ್ಡವನು ಮದ್ಯಪಾನಿಯಾಗಿದ್ದರೆ ಚಿಕ್ಕವನು ಬಹಳ ದುರ್ಬಲನಾಗಿದ್ದ. ಹಾಗಾಗಿ ನಾನು ಸ್ವಯಂಪ್ರೇರಿತನಾಗಿ ರಕ್ತದಾನ ಮಾಡಿದೆ. ಅದು ನಾನು ಮೊದಲ ಬಾರಿಗೆ ಮಾಡಿದ್ದ ರಕ್ತದಾನವಾಗಿದ್ದು ಆಕೆಯ ಪುತ್ರ ನನಗೆ ಧನ್ಯವಾದ ಹೇಳಿದ್ದ, ಆ ಮಹಿಳೆಯು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರೈಸಿದ್ದರು."ಮನೋಹರ್ ಹೇಳಿದ್ದಾರೆ.
ಅಲ್ಲಿಂದೀಚೆಗೆ ಅವರೆಂದೂ ಹಿಂದಿರುಗಿ ನೋಡಲೇ ಇಲ್ಲ, ಈಗ ಅವರಿಗೆ 47 ವರ್ಷವಾಗಿದ್ದು  ಲಯನ್ಸ್ ಬ್ಲಡ್ ಬ್ಯಾಂಕ್ ಅಧಿಕಾರಿಯ ಪ್ರಕಾರ, ರಂಗನಾಥನ್  ಆ ಬ್ಲಡ್ ಬ್ಯಾಂಕ್ ಗೆ ಸುಮಾರು  60 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ಅಲ್ಲದೆ ಯಾರೊಬ್ಬರಿಗೆ ಬಿ ಪಾಸಿಟಿವ್ ಗುಂಪಿನ ರಕ್ತ ಅಗತ್ಯವಿದೆ ಎಂದು ತಿಳಿದಾಗಲೆಲ್ಲಾ ರಂಗನಾಥನ್ ತಾವು ರಕ್ತ ನೀಡಲು ಮುಂದಾಗಿದ್ದಾರೆ.
"ನಾನು ಒಬ್ಬ ವ್ಯಕ್ತಿಗೆ ರಕ್ತದ ಅಗತ್ಯವಿದೆ ಎಂದು ವಾಟ್ಸ್ ಅಪ್ ಮೂಲಕ ಸಂದೇಶ ಪಡೆದಾಗಲೆಲ್ಲಾ ರಕ್ತದಾನಕ್ಕೆ ಮುಂದಾಗುತ್ತೇನೆ. ಕೆಲವೊಬ್ಬರು ಹೇಳುವಂತೆ ಇಂತಹಾ ಸಂದೇಶಗಳು ನಕಲಿ ಇರಬಹುದು, ಆದರೆ ಕೆಲವೊಮ್ಮೆ ಇದು ಸತ್ಯವೂ ಆಗಿರಬಹುದಲ್ಲ?" ರಂಗನಾಥನ್ ತನ್ನ ಕುಟುಂಬದ ಹಾಗೂ ಸ್ನೇಹಿತರಿಗೆ ತನ್ನ ಫೋನ್ ಸಂಖ್ಯೆ ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಇದರಿಂದ ರಕ್ತದ ಅಗತ್ಯವಿದ್ದವರು ಅವರನ್ನು ಸಂಪರ್ಕಿಸಬಹುದು.
ರಕ್ತದಾನ ಮಾಡುವ ಉದ್ದೇಶದಿಂದಾಗಿ ಅವರು ಆರೋಗ್ಯಕರ ಹಾಗೂ ಶಿಸ್ತುಬದ್ದವಾದ ಆಹಾರ ಸೇವನಾ ಕ್ರಮ ಅನುಸರಿಸುತ್ತಾರೆ."ನನ್ನ ಕಡೆಯುಸಿರು ಇರುವವರೆಗೆ ನಾನು ರಕ್ತದಾನ ಮಾಡಬಲ್ಲೆ ಎಂದು ನಂಬಿಕೆ ನನಗಿದೆ"
"ರಕ್ತವನ್ನು ದಾನ ಮಾಡುವ ಅವರ ಉತ್ಸಾಹ ಅತ್ಯಂತ ತೀವ್ರವಾಗಿದೆ.ಇತ್ತೀಚೆಗೆ, ಯಾರೋ ಒಬ್ಬರು ರಕ್ತದ ಅಗತ್ಯಕ್ಕಾಗಿ ಕರೆ ಮಾಡಿದ್ದರು. ಅವರಿಗೆ ಓ ಪಾಸಿಟಿವ್ ಗುಂಪಿನ ರಕ್ತದ ಅಗತ್ಯವಿತ್ತು. ಅದಾಗಿ ರಂಗನಾಥನ್ ತಮ್ಮ ನೆರೆಮನೆಯವರಿಗೆ ಕೇಳಿ ರಕ್ತದಾನಕ್ಕಾಗಿ ಅವರ ಮನವೊಲಿಸಿದ್ದಾರೆ."

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com