ಬಿಎಂಟಿಸಿಯಲ್ಲಿ ಕಳ್ಳಿಯರ ಕೈಚಳಕ! ಎಟಿಎಂ ಪಿನ್ ಮಾಹಿತಿ ಕೊಟ್ಟು 40 ಸಾವಿರ ಕಳೆದುಕೊಂಡ ಮಹಿಳೆ

ಎಟಿಎಂ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಪಿನ್ ಸಮ್ಖ್ಯೆಯನ್ನು ಯಾರೊಡನೆ ಹಂಚಿಕೊಳ್ಳುವುದು ಆಗಲಿ, ಕಾಗದದ ಚೂರಿನ ಮೇಲೆ ಬರೆದಿಟ್ಟುಕೊಳ್ಳುವುದಾಗಲಿ ಅಪಾಯ ಎನ್ನುವುದಕ್ಕೆ ಬೆಂಗಳೂರಿನಲ್ಲಿ ನಡೆದ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಎಟಿಎಂ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಪಿನ್ ಸಮ್ಖ್ಯೆಯನ್ನು ಯಾರೊಡನೆ ಹಂಚಿಕೊಳ್ಳುವುದು ಆಗಲಿ, ಕಾಗದದ ಚೂರಿನ ಮೇಲೆ ಬರೆದಿಟ್ಟುಕೊಳ್ಳುವುದಾಗಲಿ ಅಪಾಯ ಎನ್ನುವುದಕ್ಕೆ ಬೆಂಗಳೂರಿನಲ್ಲಿ ನಡೆದ   ಈ ಘಟನೆ ಒಂದು ಉದಾಹರಣೆಯಾಗಿದೆ. ಮಾಯಾ ಕೆ(54) ಎಂಬಾಕೆ ತಮ್ಮ ಎಟಿಎಂ ಪಿನ್ ನಂಬರ್ ಅನ್ನು ಕಾಗದದ ಚೂರೊಂದರ ಮೇಲೆ ಬರೆದಿಟ್ಟು ಅದನ್ನು ಡೆಬಿಟ್ ಕಾರ್ಡ್ ನೊಂದಿಗೇ ಪರ್ಸ್ ನಲ್ಲಿ ಇಟ್ಟುಕೊಂಡಿದ್ದರು. ಆದರೆ ಮಹಿಳಾ ಕಳ್ಳಿಯರು ಮಾಯಾ ಅವರ ಬಳಿಯಿದ್ದ ಆ ಪರ್ಸ್ ಎಗರಿಸಿದ್ದಲ್ಲದೆ ಅವರ ಡೆಬಿಟ್ ಕಾರ್ಡ್ ಬಳಸಿ ಖಾತೆಯಲ್ಲಿದ್ದ 40,000 ರೂ. ದೋಚಿದ್ದಾರೆ.
ಈಗ ಸಂತ್ರಸ್ಥ ಮಹಿಳೆ ಮಾಯಾ ಈ ಸಂಬಂಧ ಬೆಳ್ಲಂದೂರು ಪೋಲೀಸರಿಗೆ ದೂರಿತ್ತಿದ್ದಾರೆ. ಹಾಗೆಯೇ ಇನ್ನು ಯಾವ ವ್ಯಕ್ತಿಯೂ ಎಟಿಎಂ ಪಿನ್ ಗಳಂತಹಾ ಗೌಪ್ಯ ಸಂಖ್ಯೆಯನ್ನು ಎಲ್ಲಿಯೂ ಬರೆದಿಟ್ಟುಕೊಳ್ಲಬಾರದೆಂದು ಪಾಠ ಕಲಿತಿದ್ದಾರೆ.
ಘಟನೆ ವಿವರ
ಸರ್ಜಾಪುರ ರಸ್ತೆ ನಿವಾಸಿಯಾಗಿರುವ ಮಾಯಾ ಜೂನ್ 10ರಂದು ಕಾರ್ಮೆಲ್ರಮ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಏರಿದ್ದಾರೆ. ಆಗ ವಿದ್ಯಾರ್ಥಿನಿಯರಂತೆ ಉಡುಗೆ ಧರಿಸಿದ್ದ ಇಬ್ಬರು ಮಹಿಳೆಯರು ಸಹ ಬಸ್ ಏರಿದ್ದು ಅದರಲ್ಲೊಬ್ಬಾಕೆ ಇವರ ಪಕ್ಕದ ಸೀಟ್ ನಲ್ಲಿ ಆಸೀನಳಾಗಿದ್ದಳು.ಇನ್ನೊಬ್ಬಳು ಮಹಿಳೆಯರಿಗೆ ಮೀಸಲಿಇರಿಸಿದ ಆಸನದ ಸಮೀಪ ನಿಂತಿದ್ದಳು.. ಮಾಯಾ ಅವರ ತಾಯಿಗೆ ಅನಾರೋಗ್ಯವಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು. ಅದಕ್ಕಾಗಿ ಆಕೆ ಯಾವ ನಿಲ್ದಾಣದಲ್ಲಿಳಿಯಬೇಕೆನ್ನುವುದು ಗೊತ್ತಿರಲಿಲ್ಲ, ಆಗ ಮಾಯಾ ನಿಂತಿದ್ದ  20 ವರ್ಷ ವಯಸ್ಸಿನ  ಮಹಿಳೆಯನ್ನು ನಿಲ್ದಾಣದ ವಿಚಾರವಾಗಿ ಪ್ರಶ್ನಿಸಿದ್ದಾರೆ. ಆಕೆಯೂ ಪ್ರತಿಕ್ರಯಿಸಿದಳಾದರೂ ಮಲಯಾಳಂ ಮತ್ತು ತಮಿಳು ಮಾತ್ರ ತಿಳಿದಿದ್ದ ಮಾಯಾಗೆ ಆಕೆ ಏನೆಂದಳೆಂದು ಗೊತ್ತಾಗಲಿಲ್ಲ.
ಮುಂದೆ ಬೆಳ್ಲದೂರು ಟೋಟಲ್ ಮಾಲ್ ಬಸ್ ನಿಲ್ದಾಣದಲ್ಲಿ ಆ ಇಬ್ಬರೂ ಮಹಿಳೆಯರು ಇಳಿದು ಹೋಗಿದ್ದಾರೆ. ಮಾಯಾ ಇಬ್ಬಲೂರು ಜಂಕ್ಷನ್ ವರೀ ಪೊರಯಾಣ ಮುಂದುವರಿಸಿದ್ದಾರೆ. ಆಗ ತನ್ನ ತಾಯಿಗೆ ಕರೆ ಮಾಡಲೆಂದು ಮೊಬೈಲ್ ಹುಡುಕಿದಾಗ ತನ್ನ ವ್ಯಾನಿಟಿಯಲ್ಲಿದ್ದ ಪರ್ಸ್ ಕಳೆದುಹೋಗಿರುವುದು ತಿಳಿದಿದೆ. ಆ ಪರ್ಸ್ ನಲ್ಲಿ ಮಾಯಾ ತನ್ನ ಬಿಟ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಕೆಲವು ಸ್ಲಿಪ್‌ಗಳನ್ನು ಇರಿಸಿಕೊಂಡಿದ್ದು ಅದರಲ್ಲೊಂದರಲ್ಲಿ ಎಟಿಎಂ ಕಾರ್ಡ್ ಪಿನ್ ಸಂಖ್ಯೆಯನ್ನೂ ಬರೆದಿದ್ದರು. 
ಬೆಳಿಗ್ಗೆ 10.30 ರಿಂದ ಬೆಳಿಗ್ಗೆ 10.35 ರ ನಡುವೆ, ಆಕೆಗೆ ತನ್ನ ಬ್ಯಾಂಕಿನಿಂದ ನಾಲ್ಕು ಸಂದೇಶಗಳು ಬಂದವು, ತಲಾ 10,000 ರೂ ನಂತೆ ನಾಲ್ಕು ಬಾರಿ ಒಟ್ಟಾರೆ 40,000 ರು. ಅನ್ನು ಅವರ ಖಾತೆಯಿಂದ ವಿತ್ ಡ್ರಾ ಮಾಡಲಾಗಿತ್ತು.
ತನ್ನ ಖಾತೆಯನ್ನು ಹೇಗೆ ನಿರ್ಬಂಧಿಸಬೇಕು ಎಂದು ತಿಳಿದಿಲ್ಲದ ಮಾಯಾ, ತನ್ನ ಉದ್ಯೋಗದಾತರಿಗೆ ಕರೆ ಮಾಡಿ ವಿವರಗಳನ್ನು ನೀಡಿದರು. ಅವರು ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ. “ಪಿಕ್‌ಪಾಕೆಟ್‌ ಮಾಡಿದ ಮಹಿಳೆಯರು ಟೋಟಲ್ ಮಾಲ್ ಬಳಿಯ ಇಂಡಸ್ಇಂಡ್ ಬ್ಯಾಂಕಿನ ಎಟಿಎಂ ಕಿಯೋಸ್ಕ್‌ಗೆ ಹೋಗಿ ಹಣವನ್ನು ಡ್ರಾ ಮಾಡಿದ್ದಾರೆ. ನಾವು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ಎಟಿಎಂನ ಸಿಸಿಟಿವಿ ದೃಶ್ಯಾವಳಿಗಳನ್ನು ನಮಗೆ ನೀಡುವಂತೆ ಬ್ಯಾಂಕ್ ಅಧಿಕಾರಿಗಳನ್ನು ಕೇಳಿದ್ದೇವೆ. ”ಪೋಲೀಸರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com