ಈ ಶಾಲೆ ಕೆಲ ವರ್ಷಗಳ ಹಿಂದೆ ಮಕ್ಕಳಿಗೆ ವಿದ್ಯಾರ್ಜನೆಯ ಕೇಂದ್ರವಾಗಿತ್ತು. ನಂತರ ಇಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಹೋದದ್ದರಿಂದ ಶಾಲೆ ಮುಚ್ಚಿಹೋಯಿತು. ಕಟ್ಟಡದ ಸುತ್ತ ಗಿಡ, ಮರ, ಪೊದೆಗಳು ಬೆಳೆದು, ಕಟ್ಟಡದೊಳಗೆ ಬಲೆಯಿಂದ ಮುಚ್ಚಿ ಹೋಗಿತ್ತು. ಮಕ್ಕಳು ಮಾತ್ರವಲ್ಲದೆ ಗ್ರಾಮಸ್ಥರು ಕೂಡ ಕಟ್ಟಡದ ಬಳಿ ಸುಳಿಯುತ್ತಿರಲಿಲ್ಲ. ಶಾಲೆಗೆ ಸಂಬಂಧಪಟ್ಟ ದಾಖಲೆಗಳು ಪಕ್ಕದ ಗ್ರಾಮದ ಶಾಲೆಗೆ ವರ್ಗಾವಣೆಯಾಯಿತು. ಈ ತಾಂಡಾದ ಮಕ್ಕಳು ಕೂಡ ಪಕ್ಕದ ಹಳ್ಳಿಯ ಶಾಲೆಗೆ ಹೋಗಬೇಕಾಗಿ ಬಂತು.