ರಾಜ್ಯ ಸರ್ಕಾರದ ನೀರಸ ಪ್ರತಿಕ್ರಿಯೆ: 45 ರೈಲು ಓವರ್‌ಬ್ರಿಡ್ಜ್‌ ಕಾಮಗಾರಿ ವಿಳಂಬ

ಸರ್ಕಾರದ ನೀರಸ ಪ್ರತಿಕ್ರಿಯೆಯ ಕಾರಣ ನೈಋತ್ಯ ರೈಲ್ವೆ ಸಲ್ಲಿಸಿದ್ದ ರಾಜ್ಯಾದ್ಯಂತ 45 ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಿ ವೆಚ್ಚ ಹಂಚಿಕೆ ಆಧಾರದ ಮೇಲೆ ರೈಲ್ವೆ
ಫೈಲ್ ಚಿತ್ರ
ಫೈಲ್ ಚಿತ್ರ
ಬೆಂಗಳೂರು: ಸರ್ಕಾರದ ನೀರಸ ಪ್ರತಿಕ್ರಿಯೆಯ ಕಾರಣ ನೈಋತ್ಯ ರೈಲ್ವೆ ಸಲ್ಲಿಸಿದ್ದ ರಾಜ್ಯಾದ್ಯಂತ  45 ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಿ ವೆಚ್ಚ ಹಂಚಿಕೆ ಆಧಾರದ ಮೇಲೆ ರೈಲ್ವೆ  ಓವರ್‌ಬ್ರಿಡ್ಜ್ ನಿರ್ಮಾಣ ಮಾಡುವ ಪ್ರಸ್ತಾವನೆಯು ಕಾರ್ಯರೂಪಕ್ಕೆ ಬರಲು ವಿಳಂಬವಾಗುತ್ತಿದೆ.
45ರಲ್ಲಿ 13 ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಬಂದರೆ ತಲಾ 16 ಕ್ರಾಸಿಂಗ್ ಗಳು ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿದೆ.ಪಟ್ಟಿಯಲ್ಲಿರುವಂತೆ ಅತ್ಯಧಿಕ ಟ್ರಾಫಿಕ್ ಇರುವ ಲೆವೆಲ್ ಕ್ರಾಸಿಂಗ್ ಬಾಣಸವಾಡಿ-ಹುಬ್ಬಳ್ಳಿ ಮಾರ್ಗದ ನಡುವಿನ ಕಂಕನಗರದಲ್ಲಿ (ವೀರನಪಾಳ್ಯ) ಬರಲಿದೆ. “ಇದುವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯ ಸರ್ಕಾರದಿಂದ ತಾತ್ವಿಕ ಅನುಮೋದನೆ ಇಲ್ಲದೆ, ನಾವು ಮುಂದೆ ಹೋಗಲು ಸಾಧ್ಯವಿಲ್ಲ ”ಎಂದು ನೈಋತ್ಯ ರೈಲ್ವೆ ನಿರ್ಮಾಣ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.
ಆದಾಗ್ಯೂ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು, ಹೇಳಿದಂತೆ :ನಾವು 36 ಲೆವೆಲ್  ಕ್ರಾಸಿಂಗ್‌ಗಳನ್ನು ರೈಲ್ವೆ ಓವರ್ ಬ್ರಿಡ್ಜ್ ನೊಡನೆ ವೆಚ್ಚ ಹಂಚಿಕೆ ಆಧಾರದ ಮೇಲೆ  ಬದಲಿಸಲು ಒಪ್ಪಿದ್ದೇವೆ. ಅವುಗಳಲ್ಲಿ ಕೆಲವು ಅನುಷ್ಟಾನದ ಹಂತದಲ್ಲಿದೆ.ಇತರೆ ಐವತ್ತಕ್ಕೆ ಸರ್ಕಾರದಿಂದ ತಾತ್ವಿಕ ಅನುಮೋದನೆ ನೀಡಲಾಗಿದೆ. ”
ಪ್ರಜಾ ರಾಗ್‌ನ ಸಾರಿಗೆ ತಜ್ಞ ಸಂಜೀವ್ ದ್ಯಾಮಣ್ಣನವರ್ ಹೇಳಿದಂತೆ ಸರ್ಕಾರದ ಈ ನಿರ್ಲಕ್ಷ ರೈಲ್ವೆ ಮತ್ತು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ” 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com