ರಂಗನತಿಟ್ಟು ಬಳಿ ಮಿನಿ ಹೈಡಲ್ ಪ್ರಾಜೆಕ್ಟ್? ಸೂಕ್ಷ್ಮ ಪರಿಸರ ವಲಯದಲ್ಲಿ ಇದು ಸಾಧ್ಯವೇ: 'ಹೈ' ಪ್ರಶ್ನೆ

ಶ್ರೀರಂಗ ಪಟ್ಟಣದ ರಂಗನ ತಿಟ್ಟು ಪಕ್ಷಿಧಾಮದ ಬಳಿಯಿರುವ ದೇವರಾಯ ದ್ವೀಪದಲ್ಲಿ ಮಿನಿ ಹೈಡಲ್ ಪವರ್ ಪ್ರಾಜೆಕ್ಟ್ ಆರಂಭಿಸಲಾಗುತ್ತಿದೆಯೇ? ಎಂದು ಕರ್ನಾಟಕ ...
ಹೈಕೋರ್ಟ್
ಹೈಕೋರ್ಟ್
Updated on
ಬೆಂಗಳೂರು: ಶ್ರೀರಂಗ ಪಟ್ಟಣದ ರಂಗನ ತಿಟ್ಟು ಪಕ್ಷಿಧಾಮದ ಬಳಿಯಿರುವ ದೇವರಾಯ ದ್ವೀಪದಲ್ಲಿ ಮಿನಿ ಹೈಡಲ್ ಪವರ್ ಪ್ರಾಜೆಕ್ಟ್ ಆರಂಭಿಸಲಾಗುತ್ತಿದೆಯೇ?  ಎಂದು ಕರ್ನಾಟಕ ಹೈಕೋರ್ಟ್ ಅರಣ್ಯ ಇಲಾಖೆಯನ್ನು ಪ್ರಶ್ನಿಸಿದೆ.
2017ರಲ್ಲಿ ಇದನ್ನು ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ, ಹೀಗಿದ್ದರೂ ಈ ಪ್ರದೇಶದಲ್ಲಿ ವಿದ್ಯುತ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲು ಅನುಮತಿ ನೀಡಲಾಗಿದೆಯೇ ಎಂದು ಅರಣ್ಯ ಇಲಾಖೆಗೆ ಹೈಕೋರ್ಟ್ ಪ್ರಶ್ನಿಸಿದೆ.
ಮೈಸೂರಿನ ಎನ್ ಆರ್ ಮೊಹಲ್ಲಾದ ಗೋಪಾಲ್ ರಾವ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಎಚ್.ಟಿ ನಾಗೇಂದ್ರ ಪ್ರಸಾದ್ ಈ ಪ್ರಶ್ನೆ ಎತ್ತಿದ್ದಾರೆ.
ಮೈಸೂರು ವಲಯ ಸಂರಕ್ಷಣಾಧಿಕಾರಿ ಎನ್ ಒಸಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಇದಾಗಿತ್ತು. ಹೈಡೆಲ್ ಪವರ್ ಪ್ರಾಜೆಕ್ಟ್ ನಿಂದಾಗಿ  ದ್ವೀಪದಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳಿಗೆ ತೊಂದರೆಯಾಗುತ್ತದೆ, ಹೀಗಾಗಿ ಸ್ಥಳೀಯ ಹಕ್ಕಿಗಳು ವಲಸೆ ಹೋಗುತ್ತವೆ ಎಂಬ ಆತಂಕ ವ್ಯಕ್ತ ಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com