ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತದ ಪ್ರತಿನಿಧಿ ಇಲ್ಲದಿರುವುದು ದುರದೃಷ್ಟಕರ: ಕೃಷ್ಣ ಭೈರೇಗೌಡ

15 ನೇ ಹಣಕಾಸು ಆಯೋಗ ಕರ್ನಾಟಕದ ಭೇಟಿ ಮುಕ್ತಾಯವಾಗಿದೆ. ಆಯೋಗದ ಭೇಟಿಯ ಒಂದು ದಿನದ ತರುವಾಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ.....
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ
Updated on
ಬೆಂಗಳೂರು: 15 ನೇ ಹಣಕಾಸು ಆಯೋಗ ಕರ್ನಾಟಕದ ಭೇಟಿ ಮುಕ್ತಾಯವಾಗಿದೆ. ಆಯೋಗದ ಭೇಟಿಯ ಒಂದು ದಿನದ ತರುವಾಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ ಆಯೋಗದಲ್ಲಿ ದಕ್ಷಿಣ ರಾಜ್ಯಗಳ ಯಾವೊಬ್ಬ ಸದಸ್ಯರೂ ಇಲ್ಲ ಎಂಬುದನ್ನು ಎತ್ತಿ ತೋರಿಸಿದ್ದಾರೆ.ಮತ್ತು ಇದು  ‘ದುರದೃಷ್ಟಕರ’ ಎಂದ ಸಚಿವರು  2015-2020ರ ಅವಧಿಯಲ್ಲಿ ಕೇಂದ್ರ ಹಣಕಾಸು ಹಂಚಿಕೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. 
ಟ್ವೀಟ್‌ಗಳ ಸರಣಿ ಮೂಲಕ ಕೇಂದ್ರ ಸರ್ಕಾರದ ಬಗೆಗೆ ಟೀಕಿಸಿದ ಕೃಷ್ಣ ಬೈರೇಗೌಡ ಈಗಲಾದರೂ ಇದು ಸರಿಹೋಗಲಿದೆ ಎಂದು ಭಾವಿಸುವುದಾಗಿ ಹೇಳಿದ್ದಾರೆ.
"ಐದು ಸದಸ್ಯರ 15 ನೇ ಹಣಕಾಸು ಆಯೋಗದಲ್ಲಿದಕ್ಷಿಣ ಭಾರತದಿಂದ ಒಬ್ಬ ಸಮರ್ಥ ವ್ಯಕ್ತಿಯೂ ಇಲ್ಲದಿರುವುದು ದುರದೃಷ್ಟಕರ" ಸಚಿವರು ಹೇಳಿದ್ದಾರೆ.
ಎನ್ ಕೆ ಸಿಂಗ್ ಅವರ ಅಧ್ಯಕ್ಷತೆಯಲ್ಲಿರುವ ಈ ಆಯೋಗವು ಭಾರತ ಸರ್ಕಾರದ ಮಾಜಿ ಹಣಕಾಸು ಕಾರ್ಯದರ್ಶಿ ಅಜಯ್ ನಾರಾಯಣ್ ಝಾ  ಮಾಜಿ ಮುಖ್ಯ ಆರ್ಥಿಕ ಸಲಹೆಗಾರ,ಡಾ.ಅಶೋಕ್ ಲಾಹಿರಿ, ಎನ್‌ಐಟಿಐ ಆಯೋಗ್ ಸದಸ್ಯ ಡಾ.ರಮೇಶ್ ಚಂದ್ಡಾ.ಅನೂಪ್ ಸಿಂಗ್. ಆಯೋಗದ ಇತರೆ ಸದಸ್ಯರಾಗಿದ್ದಾರೆ.
2015-2020ರ ಅವಧಿಯಲ್ಲಿ ಕರ್ನಾಟಕಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಕೇವಲ 1,527 ಕೋಟಿ ರೂ ಕೊಟ್ಟಿದೆ. ಮಹಾರಾಷ್ಟ್ರಕ್ಕೆ 8,195 ಕೋಟಿ ರೂ. ಸಿಕ್ಕಿದೆ. "ಕೇಂದ್ರ ಸರ್ಕಾರದ ಈ ಕ್ರಮವನ್ನು ಪ್ರಸಕ್ತ ಆಯೋಗದ ಸದಸ್ಯರು ನಿವಾರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಸಚಿವರು ಹೇಳಿದ್ದಾರೆ.
ಆಯೋಗವು ಎರಡು ದಿನಗಳಲ್ಲಿ ಸರಣಿ ಸಭೆಗಳನ್ನು ನಡೆಸಿದ್ದು ರಾಜ್ಯವು ಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ ಹಣಕಾಸು ಆಯೋಗದಿಂದ ನೇರ ಹಣ ಹಂಚಿಕೆ ಬಗೆಗೆ ಕೇಳಿದೆ."ಎಲ್ಲಾ ರಾಷ್ಟ್ರೀಯ ತೆರಿಗೆ ಆದಾಯದ 1% ಬೆಂಗಳೂರಿನಂತಹ ಮೆಟ್ರೋ ನಗರಗಳಿಗೆ ಹಂಚಿಕೆ ಮಾಡಬೇಕೆಂದು ರಾಜ್ಯವು ಒತ್ತಾಯಿಸಿದೆ" ಎಂದು ಅವರು ಹೇಳಿದರು, ಮುಂದಿನ ನಾಲ್ಕು ವರ್ಷಗಳಲ್ಲಿ ನಗರಕ್ಕೆ 1 ಲಕ್ಷ ಕೋಟಿಗಿಂತ ಹೆಚ್ಚು ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com