ನಿಯಮ ಉಲ್ಲಂಘಿಸಿದರೆ ಜನಸಾಮಾನ್ಯರಿಗೆ ಮಾತ್ರ ದಂಡ, ಆದರೆ ಸಿಎಂ ಚಾಲಕನಿಗೆ ವಿನಾಯಿತಿ ಏಕೆ?

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ನಗರ ಸಂಚಾರಿ ಪೊಲೀಸರು, ಭಾರೀ ಪ್ರಮಾಣದ ದಂಡ ವಿಧಿಸುತ್ತಿದ್ದಾರೆ, ಆದರೆ ಒಬ್ಬ ಮಾತ್ರ ಈ ದಂಡದಿಂದ ವಿನಾಯಿತಿ ..
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ನಗರ ಸಂಚಾರಿ ಪೊಲೀಸರು, ಭಾರೀ ಪ್ರಮಾಣದ ದಂಡ ವಿಧಿಸುತ್ತಿದ್ದಾರೆ, ಆದರೆ ಒಬ್ಬ ಮಾತ್ರ ಈ ದಂಡದಿಂದ ವಿನಾಯಿತಿ ಪಡೆದಿದ್ದಾನೆ, ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಆತ ಸಂಚಾರ ನಿಯಮ ಉಲ್ಲಂಘಿಸಿದ್ದು ಆತನಿಗೆ ಯಾವುದೇ ದಂಡ ಹಾಕಿಲ್ಲ.
ಫೆಬ್ರವರಿ 10 ರಂದು ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸೇರಿದ ರೇಂಜ್ ರೋವರ್ ಐ ಎಂಡ್ ಕಾರನ್ನು  ಚಾಲನೆ ಮಾಡುತ್ತಿದ್ದ ಡ್ರೈವರ್ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ, ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.ಈ ಈ ಸಂಬಂದ ಕಸ್ತೂರಿ  ಮೀಡಿಯಾ ಪ್ರೈವೇಟ್ ಲಿಮಿಟೆಡ್ ಗೆ ನೊಟಿಸ್ ನೀಡಲಾಗಿತ್ತು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,
ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದ್ನನು ವಿಚಾರಿಸುತ್ತೇನೆ, ದಂಡ ಕಟ್ಟಿದ್ದರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಪಡೆಯುತ್ತೇನೆ  ಎಂದು ಪೂರ್ವ ವಿಭಾಗದ ಡಿಸಿಪಿ ಜಗದೀಶ್ ಹೇಳಿದ್ದಾರೆ. ರೇಂಜ್ ರೋವರ್ ಕಾರು ಸಿಎಂ ಕುಮಾರಸ್ವಾಮಿ ಅವರಿಗೆ ಸೇರಿದ್ದು, ಹಾಗಾಗಿ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಒಂದು ವೇಳೆ ಸ್ವತಃ ಅವರೇ ಬಂದು ದಂಡ ಕಟ್ಟದಿದ್ದರೇ ನಾವೇ ಹೋಗಿ ಕಟ್ಟಿಸಿಕೊಳ್ಳುತ್ತೆವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com