ಬೆಂಗಳೂರು ನಗರದಲ್ಲಿ ಸರ್ಕಾರದ ನಗರ ವಸತಿ ಯೋಜನೆಯ ಸುಮಾರು 10 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಿಸಿ ಅವರು ಮಾತನಾಡಿದರು. ನಗರ ಗೃಹ ಯೋಜನೆಯಡಿ ಬಡವರಿಗೆ ಸೂರು ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಒಟ್ಟು 1,600 ಎಕರೆ ಜಮೀನನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಗೆ ವರ್ಗಾಯಿಸಲಾಗಿದೆ. ಸರ್ಕಾರ ಭೂಮಿ ಮತ್ತು ಸುಮಾರು 3 ಲಕ್ಷ ಮನೆಗಳನ್ನು ನಿರ್ಮಿಸುವುದಲ್ಲದೆ 4 ಲಕ್ಷದವರೆಗೆ ಸಾಲ ನೀಡಲು ಖಾತ್ರಿದಾರನಾಗಿ ಸಹಿ ಹಾಕಲಿದೆ ಎಂದರು.