ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕ ಶೇ.10 ರಷ್ಟು ಹೆಚ್ಚಳ

2019-20 ನೇ ಸಾಲಿನ ಖಾಸಗಿ ಇಂಜಿನಿಯಿಂಗ್ ಕಾಲೇಜುಗಳ ಪ್ರವೇಶ ಶುಲ್ಕ ವನ್ನು ಶೇ.10 ರಷ್ಟು ಏರಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಶನಿವಾರ ಹೇಳಿದ್ದಾರೆ.
ಸಚಿವ ಜಿಟಿ ದೇವೇಗೌಡ
ಸಚಿವ ಜಿಟಿ ದೇವೇಗೌಡ
ಬೆಂಗಳೂರು: 2019-20 ನೇ ಸಾಲಿನ ಖಾಸಗಿ ಇಂಜಿನಿಯಿಂಗ್ ಕಾಲೇಜುಗಳ ಪ್ರವೇಶ ಶುಲ್ಕ ವನ್ನು ಶೇ.10 ರಷ್ಟು ಏರಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಶನಿವಾರ ಹೇಳಿದ್ದಾರೆ.
ಶುಲ್ಕ ಹೆಚ್ಚಳ ಸಂಬಂಧ ನಗರದ ಕುಮಾರಕೃಪ ಅತಿಥಿಗೃಹದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರು, ಕಾಮೆಡ್‍ಕೆ ಸೇರಿದಂತೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಅವರು, ಈ ಬಾರಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ.15 ರಷ್ಟು ಪ್ರವೇಶ ಶುಲ್ಕ ಏರಿಕೆಗೆ ಒತ್ತಾಯಿಸಿದ್ದವು. ಆದರೆ ಅಷ್ಟೊಂದು ಶುಲ್ಕ ಏರಿಕೆಯಿಂದ ವಿದ್ಯಾರ್ಥಿಗಳಿಗೆ ಪೋಷಕರಿಗೆ ಕಷ್ಟವಾಗಲಿದೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿ ಇಂಜಿನಿಯರಿಂಗ್ ಪ್ರವೇಶ ಶುಲ್ಕವನ್ನು ಶೇ.15 ರ ಬದಲಿಗೆ ಶೇ.10 ರಷ್ಟು ಏರಿಸಲು ತೀರ್ಮಾನಿಸಲಾಗಿದೆ ಎಂದರು.
2019-20 ನೇ ಸಾಲಿನ  ಮೊದಲ ಹಂತದಲ್ಲಿ 58,800 ರೂ. ಎರಡನೇ ಹಂತದಲ್ಲಿ 65,340 ರೂ.ಶುಲ್ಕ ನಿಗದಿಪಡಿಸಲಾಗಿದೆ. ಹಾಗೂ ಕಾಮೆಡ್‍ಕೆ ವ್ಯಾಪ್ತಿಗೊಳಪಡುವ ಕಾಲೇಜುಗಳಿಗೆ ಮೊದಲ ಹಂತದಲ್ಲಿ 1,43,748ರೂ. ಎರಡನೇ ಹಂತದಲ್ಲಿ  2,1,960 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಕಳೆದ ವರ್ಷ ನ್ಯಾಯಮೂರ್ತಿ ಶೈಲೇಶ್ಚಂದ್ರ ಕುಮಾರ್ ಶಿಫಾರಸಿನನ್ವಯ ಶೇ.8 ರಷ್ಟು ಶುಲ್ಕ ಹೆಚ್ಚಿಸಿದ್ದರು. ಈ ಬಾರಿ ಕಾಲೇಜುಗಳು ಯಾವುದೇ ಒತ್ತಡ ಹೇರದೇ , ಸಮಿತಿ ರಚನೆ ಮಾಡದೇ ಇದ್ದರೂ ಶುಲ್ಕವನ್ನು ಶೇ.10 ರಷ್ಟು ಮತ್ತೆ ಹೆಚ್ಚಳ ಮಾಡಲಾಗಿದೆ.  ಈ ಬಾರಿ ಇಂಜಿನಿಯರಿಂಗ್ ಎಲ್ಲಾ ಕೋರ್ಸ್ ಗಳ ಶುಲ್ಕ ಹೆಚ್ಚಳವಾಗಿದ್ದು, ಎರಡು ವರ್ಷದಲ್ಲಿ ಶೇ.18 ರಷ್ಟು ಶುಲ್ಕ ಹೆಚ್ಚಳವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com