ಮಾರ್ಚ್ 10 ರಂದು ರಾಜ್ಯದಲ್ಲಿ ಪಲ್ಸ್ ಪೊಲೀಯೋ

ಪೊಲೀಯೋ ನಿರ್ಮೂಲನೆ ಮಾಡುವ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಪಲ್ಸ್ ಪೊಲೀಯೋ ಮಾರ್ಚ್ 10 ರಂದು ರಾಜ್ಯಾದ್ಯಂತ ನಡೆಯಲಿದ್ದು, ಇದಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪೊಲೀಯೋ  ನಿರ್ಮೂಲನೆ ಮಾಡುವ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಪಲ್ಸ್ ಪೊಲೀಯೋ ಮಾರ್ಚ್ 10 ರಂದು ರಾಜ್ಯಾದ್ಯಂತ ನಡೆಯಲಿದ್ದು, ಇದಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಯಿಂದ ರಾಷ್ಟ್ರೀಯ ಲಸಿಕಾ -ಪಲ್ಸ್ ಪೊಲೀಯೋ ಕಾರ್ಯಕ್ರಮ ಆಯೋಜಿಸಲಾಗಿದೆ.  

ಪೊಲೀಯೋ ಸೋಂಕು ಮಕ್ಕಳಲ್ಲಿ ತೀವ್ರತರವಾದ ಅಸ್ವಸ್ಥತೆ ಮತ್ತು ಪಾರ್ಶ್ವವಾಯು ಉಂಟು ಮಾಡಿ ಸಾವು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಯೋ ಹಮ್ಮಿಕೊಳ್ಳಲಾಗಿದೆ.

ಕಳೆದ 7 ವರ್ಷಗಳಿಂದ ಇಲ್ಲಿಯವರೆವಿಗೆ ಯಾವುದೇ ಪೊಲೀಯೋ ಪ್ರಕರಣಗಳು ವರದಿಯಾಗಿಲ್ಲ. ಭಾರತ ಸಹ ಪೊಲೀಯೋ  ಮುಕ್ತ ರಾಷ್ಟ್ರವಾಗಿದೆ.

 2018 ರಲ್ಲಿ ಅಫ್ಫಾನಿಸ್ತಾನದಲ್ಲಿ 21 ಮತ್ತು ಪಾಕಿಸ್ತಾನದಲ್ಲಿ 8 ಪೊಲೀಯೋ ಪ್ರಕರಣಗಳು ವರದಿಯಾಗಿವೆ. ನೆರೆ ಹೊರೆ ರಾಷ್ಟ್ರಗಳಲ್ಲಿ ಪೊಲೀಯೋ ಇರುವುದರಿಂದ ನಾವು ಇನ್ನೂ ಅಪಾಯದಿಂದ ದೂರವಾಗಿಲ್ಲ.
ಈ ದೇಶಗಳ ಮೂಲಕ ಭಾರತಕ್ಕೆ ಪೊಲೀಯೋ ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಲಸಿಕೆಯನ್ನು ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ. ಈ ಬಾರಿ ಒಂದು ಸುತ್ತು ಮಾತ್ರ ಪೊಲೀಯೋ ಲಸಿಕೆ ಹಾಕಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com