ನಿವೃತ್ತಿ ಹಣದ ಒಂದು ಭಾಗವನ್ನು ಗಣೇಶ ದೇವಾಲಯಕ್ಕಾಗಿ ವೆಚ್ಚ ಮಾಡಿದ ಮುಸ್ಲಿಂ ವ್ಯಕ್ತಿ!

ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ನಿವೃತ್ತಿಯಿಂದ ಬಂದಂತಹ ಹಣದಲ್ಲಿ ಸ್ವಲ್ಬ ಭಾಗವನ್ನು ವೆಚ್ಚ ಮಾಡಿ ಚಾಮರಾಜನಗರ- ಸತ್ಯಮಂಗಲ ರಸ್ತೆಯಲ್ಲಿ ಗಣೇಶ ದೇವಾಲಯ ನಿರ್ಮಿಸಿದ್ದಾರೆ.
ರೆಹಮಾನ್
ರೆಹಮಾನ್
ಮೈಸೂರು: ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ನಿವೃತ್ತಿಯಿಂದ ಬಂದಂತಹ ಹಣದಲ್ಲಿ ಸ್ವಲ್ಬ ಭಾಗವನ್ನು ವೆಚ್ಚ ಮಾಡಿ  ಚಾಮರಾಜನಗರ- ಸತ್ಯಮಂಗಲ ರಸ್ತೆಯಲ್ಲಿ ಗಣೇಶ ದೇವಾಲಯ ನಿರ್ಮಿಸಿದ್ದಾರೆ.
ರೆಹಮಾನ್  ಈ ರೀತಿಯಲ್ಲಿ  ಗಣೇಶ ದೇವಾಲಯ ನಿರ್ಮಿಸಿದ್ದು, ಮೊದಲ 48 ದಿನಗಳ ಕಾಲ ವಿಶೇಷ ಪೂಜೆಯ ಸಂಪೂರ್ಣ ವೆಚ್ಚವನ್ನು ಕೂಡಾ ಇವರೇ ಒಪ್ಪಿಕೊಂಡಿದ್ದಾರೆ.
ತಮಿಳುನಾಡು- ಕರ್ನಾಟಕ ಗಡಿಯಲ್ಲಿರುವ ಚಿಕ್ಕಹೊಳೆ ಜಲಾಶಯದ ಬಳಿ ನೀರಾವರಿ ಇಲಾಖೆಯಿಂದ ದಶಕದ ಹಿಂದೆಯೇ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಎರಡು ಬಾರಿ ದುಷ್ಕರ್ಮಿಗಳು ಗಣೇಶ ವಿಗ್ರಹವನ್ನು ಕಳ್ಳತನ ಮಾಡಿದ್ದರು.
ಜಲಾಶಯದ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ರೆಹಮಾನ್ ಅವರ ಕನಸಿನಲ್ಲಿ ಬಂದ ಗಣೇಶ, ವಿಗ್ರಹ ಪ್ರತಿಷ್ಠಾಪಿಸುವಂತೆ ಕೇಳಿದ್ದಾನಂತೆ. ಇದರಿಂದಾಗಿ ಜಲಾಶಯದ ಪ್ರವೇಶ ದ್ವಾರದಲ್ಲಿ ದೇವಾಲಯ ನಿರ್ಮಿಸುವಂತೆ ಸಂಬಂಧಿಸಿದ ಅಧಿಕಾರಿಗಳ ಮನವೊಲಿಸಿದ್ದು, ನಂತರ ಸಾರ್ವಜನಿಕರ ನೆರೆವಿನೊಂದಿಗೆ ಮೂರು ತಿಂಗಲಲ್ಲಿ ದೇವಾಲಯ ನಿರ್ಮಿಸಿದ್ದಾಗಿ ಅವರು ಹೇಳಿದ್ದಾರೆ
 ಇತರರ ಬಗ್ಗೆ ನನ್ನಗೆ ಗೊತ್ತಿಲ್ಲ,  ಎಲ್ಲಾ ಧರ್ಮಗಳು ಮಾನವೀಯತೆ, ಪ್ರೀತಿ ಮತ್ತು ಸಹಾನುಭೂತಿಯನ್ನು ಬೋಧಿಸುತ್ತವೆ ಎಂದು ರೆಹಮಾನ್ ಹೇಳುತ್ತಾರೆ.  ಸೋಮವಾರ ಮತ್ತು ಶುಕ್ರವಾರ ಹಾಗೂ ಹಬ್ಬದ ಸಂದರ್ಭಗಳಲ್ಲಿ ದೇವಾಲಯವನ್ನು ತೆರೆಯಲಾಗುತ್ತದೆ.
ಜಲಾಶಯದ ಭದ್ರತೆ ನಿಟ್ಟಿನಲ್ಲಿ ಉಳಿದ ದಿನಗಳಲ್ಲಿ ದೇವಾಲಯವನ್ನು ಮುಚ್ಚಲಾಗುತ್ತದೆ. ಜಲಾಶಯದ ಗೇಜ್ ಮೇಲ್ವಿಚಾರಣೆ ಮಾಡುವ ರೆಹಮಾನ್, ದೇವಾಲಯ ನಿರ್ಮಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com