ಕಾಂಗ್ರೆಸ್ ಮುಖಂಡನ ಪಾಕ್ ಪರ ಫೇಸ್‌ಬುಕ್‌ ಪೋಸ್ಟ್ ಪ್ರಕರಣಕ್ಕೆ ಟ್ವಿಸ್ಟ್: ಒಬ್ಬನ ಬಂಧನ
ಕಾಂಗ್ರೆಸ್ ಮುಖಂಡನ ಪಾಕ್ ಪರ ಫೇಸ್‌ಬುಕ್‌ ಪೋಸ್ಟ್ ಪ್ರಕರಣಕ್ಕೆ ಟ್ವಿಸ್ಟ್: ಒಬ್ಬನ ಬಂಧನ

ಕಾಂಗ್ರೆಸ್ ಮುಖಂಡನ ಪಾಕ್ ಪರ ಫೇಸ್‌ಬುಕ್‌ ಪೋಸ್ಟ್ ಪ್ರಕರಣಕ್ಕೆ ಟ್ವಿಸ್ಟ್: ಒಬ್ಬನ ಬಂಧನ

ಭಾರೀ ವಿವಾದಕ್ಕೆ ಕಾರಣವಾಗಿದ್ದ ಬೆಳಗಾವಿ ಕಾಂಗ್ರೆಸ್ ಮುಖಂಡರ ಫೇಸ್ ಬುಕ್ ಪೋಸ್ಟ್ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಈ ಸಂಬಂಧ ಪೋಲೀಸರು ನಾಗರಾಜ್ ಮಾಲಿ ಎಂಬಾತನನ್ನು ಬಂಧಿಸಿದ್ದಾರೆ.
ಬೆಳಗಾವಿ: ಭಾರೀ ವಿವಾದಕ್ಕೆ ಕಾರಣವಾಗಿದ್ದ ಬೆಳಗಾವಿ ಕಾಂಗ್ರೆಸ್ ಮುಖಂಡರ ಫೇಸ್ ಬುಕ್ ಪೋಸ್ಟ್ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಈ ಸಂಬಂಧ ಪೋಲೀಸರು ನಾಗರಾಜ್ ಮಾಳಿ ಎಂಬಾತನನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ನ ಮಾಜಿ ಶಾಸಕ ಅಶೋಕ್ ಪಟ್ಟಣದವರ ಆಪ್ತ  ಮೊಹಮ್ಮದ್ ಶಫಿ ಎನ್ನುವವರ ಫೇಸ್ ಬುಕ್ ಕಾತೆಯಲ್ಲಿ"ಜೈ ಪಾಕಿಸ್ತಾನ್, ಜೈ ಅಶೋಕ ಅಣ್ಣ" ಎನ್ನುವ ಪೋಸ್ಟ್ ಹಾಕಲಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಬೆಳಗಾವಿ ರಾಮದುರ್ಗದಲ್ಲಿಮ್ ಕಲ್ಲು ತೂರಾಟಗಳು ನಡೆದಿದ್ದವು.ಸ್ಥಳೀಯ ಶಾಸಕ ಮಹದೇವಪ್ಪ ಪ್ರತಿಭಟನೆ ನಡೆಸಿದ್ದರು. ಸಂಸದ ಸುರೇಶ್ ಅಂಗಡಿ ಶಫಿ ಬಂಧಾಕ್ಕೆ ಆಗ್ರಹಿಸಿದ್ದರು. ಆದರೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದ್ದು ಶಫಿ ಫೇಸ್ ಬುಕ್ ಅಕೌಂಟ್ ಹ್ಯಾಕ್ ಮಾಡಿ ಪಾಕಿಸ್ತಾನ ಪರ ಪೋಸ್ಟ್ ಹಾಕಿದ್ದನೆಂಬ ಕಾರಣಕ್ಕೆ ನಾಗರಾಜ್ ನನ್ನು ರಾಮದುರ್ಗ ಪೋಲೀಸರು ಬಂಧಿಸಿದ್ದಾರೆ.
ವೈಯುಕ್ತಿಕ ದ್ವೇಷದಿಂದ ನಾಗರಾಜ್ ಈ ಕೃತ್ಯ ಎಸಗಿದ್ದನೆಂದು ತನಿಖೆ ವೇಳೆ ಬಯಲಾಗಿದೆ.ರಾಮದುರ್ಗದಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದ ನಾಗರಾಜ್ ಹಾಗೂ ಶಫಿ ಉತ್ತಮ ಸಂಬಂಧ ಹೊಂದಿದ್ದರು. ಶಫಿಯ ಫೇಸ್ ಬುಕ್ ಅಕೌಂಟ್ ಡೀಟೇಲ್ ನಾಗರಾಜ್ ಗೆ ಗೊತ್ತಿತ್ತು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಬಂದು ದ್ವೇಷದ ಕಾರಣ ನಾಗರಾಜ್ ಶಫಿ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಈ ಪೋಸ್ಟ್ ಹಾಕಿದ್ದಾನೆ.
ನಾಗರಾಜ್ ವಿರುದ್ಧ ಐಪಿಸಿ ಸೆಕ್ಷನ್ 124ಎ, 153ಎ, 153ಬಿ, ಐಟಿ ಕಾಯ್ದೆ 66ಸಿ,66ಬಿ, ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com