ರಕ್ಷಣಾ ಇಲಾಖೆ ಭೂಮಿಯನ್ನು ಸಿಎಂ ಗೆ ಹಸ್ತಾಂತರಿಸಿದ ನಿರ್ಮಲಾ ಸೀತಾರಾಮನ್

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಸುಮಾರು 12 ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ...
ಕುಮಾರಸ್ವಾಮಿ ಮತ್ತು ನಿರ್ಮಲಾ ಸೀತಾರಾಮನ್ ಅವರಿಂದ ನಮ್ಮ ಮೆಟ್ರೋಗೆ ಶಂಕು ಸ್ಥಾಪನೆ
ಕುಮಾರಸ್ವಾಮಿ ಮತ್ತು ನಿರ್ಮಲಾ ಸೀತಾರಾಮನ್ ಅವರಿಂದ ನಮ್ಮ ಮೆಟ್ರೋಗೆ ಶಂಕು ಸ್ಥಾಪನೆ
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್  ಮಂಗಳವಾರ ಸುಮಾರು 12 ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು, 
ಹಲವು ಅಭಿವೃದ್ಧಿ ಕಾರ್ಯಗಳಿಗಾಗಿ ರಕ್ಷಣಾ ಇಲಾಖೆ ಭೂಮಿಯನ್ನು ನೀಡಬೇಕೆಂದು ಮನವಿ ಮಾಡಲಾಗಿತ್ತು, ಹಲವು ವರ್ಷಗಳಿಂದ ರಕ್ಷಣಾ ಭೂಮಿಯನ್ನು ನೀಡಲು ಇದ್ದ ತೊಡಕುಗಳೆಲ್ಲಾ ನಿವಾರಣೆಯಾಗಿದ್ದು, ಎಲ್ಲಾ ಸಮಸ್ಯೆಗಳು ಬಗೆಹರಿದಿವೆ, ಸರ್ಕಾರ ಈ ಸಂಬಂಧ ಸಮಸ್ಯೆ ಬಗೆಹರಿಸಲು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ, ಹೀಗಾಗಿ ಹಲವು ಅಭಿವೃದ್ಧಿ ಕಾರ್ಯಗಳೂ ಅಪೂರ್ಣವಾಗಿಯೇ ಉಳಿದಿದ್ದವು, ಆದರೆ ಈ ಬಾರಿ ಅದು ಪೂರ್ಣಗೊಂಡಿದೆ ಎಂದು ನಿರ್ಮಲಾ ಸೀತರಾಮನ್ ಹೇಳಿದ್ದಾರೆ.
ಬೆಂಗಳೂರಿನ ಸ್ವರೂಪವನ್ನು ಬದಲಾಯಿಸಲು ಸಮ್ಮಿಶ್ರ ಸರ್ಕಾರ ಬದ್ಧವಾಗಿದೆ, ಸಬ್ ಅರ್ಬನ್ ರೈಲ್ವೆ ಯೋಜನೆಯನ್ನು ಶೀಘ್ರವೇ ಆರಂಭಿಸಲಾಗುವುದು, ಸರ್ಕಾರ ಫೆರಿಪಿರಿಲ್ ರಸ್ತೆ ಹಾಗೂ 102 ಕಿಮೀ ಎಲಿವೇಟೆಡ್ ಕಾರಿಡಾರ್ ಅನ್ನು ಪೂರ್ಣಗೊಳಿಸಲಾಗುವುದು, ರಕ್ಷಣಾ ಇಲಾಖೆ 55 ಸಾವಿರ ಚದರ ಅಡಿ ಮೀಟರ್ ಭೂಮಿಯನ್ನು ಈ ಯೋಜನೆಗಳ ಆರಂಭಕ್ಕಾಗಿ ರಾಜ್ಯ ಸರ್ಕಾರ ನೀಡಿದೆ.
ಮೆಟ್ರೋ 2ನೇ ಹಂತದಲ್ಲಿ 12 ಅಂಡರ್ ಗ್ರೌಂಡ್ ಸ್ಟೇಷನ್ಸ್ ಬರಲಿದ್ದು, ಅದರಲ್ಲಿ ಮೂರು ಸ್ಟೇಷನ್ಸ್ ರಕ್ಷಣಾ ಇಲಾಖೆ ಜಾಗದಲ್ಲಿ, ಬರಲಿವೆ, ಮಂದಿನ ಮೂರು ತಿಂಗಳಲ್ಲಿ ಈ ಕೆಲಸ ಆರಂಭವಾಗಲಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com