ತೀರ್ಥಹಳ್ಳಿ ಅರಣ್ಯ ಪ್ರದೇಶಕ್ಕೆ ಹೋಲಿಸಿದರೆ ಅರಲಗೋಡು ಅರಣ್ಯ ಪ್ರದೇಶದಲ್ಲಿ ಮಂಗನ ಜ್ವರ ಕಾಯಿಲೆ ತೀವ್ರವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ. ಅರಣ್ಯದ ಪರ್ವತ ಪ್ರದೇಶ ಸುತ್ತಮುತ್ತ ವಾಸಿಸುತ್ತಿರುವ ಜನರ ಮೇಲೆ ಇದು ತೀವ್ರ ಪರಿಣಾಮ ಬೀರುತ್ತಿದೆ. ಗಾಳಿಯಿಂದ ಸೋಂಕು ಜನವಸತಿ ಪ್ರದೇಶಗಳಿಗೆ ಅರಣ್ಯಗಳಿಂದ ಬೀಸಿ ಜನರು ಸೋಂಕಿಗೆ ತುತ್ತಾಗುತ್ತಾರೆ ಎಂದು ಹೇಳಿದರು.