ಮಹಿಳಾ ದಿನ: ನೀಲಾ ಎಂಬ ರೈಲ್ವೆ ಗೇಟ್ ವು'ಮ್ಯಾನ್'!

ನಾನು ರೈಲು ಬರುವುದಕ್ಕೆ ಐದು ನಿಮಿಷಕ್ಕೆ ಮುನ್ನ ಗೇಟನ್ನು ಹಾಕುತ್ತೇನೆ. ಕೆಲವೊಮ್ಮೆ ವಾಹನ ಚಾಲಕರು ನನ ಮೇಲೆ ಮನಬಂದಂತೆ ಹರಿಹಾಯುತ್ತಾರೆ. ಆದರೆ ನಾನು ಅವರಿಗೆ ನಿಮ್ಮ ಜೀವ ಎಷ್ಟು....
ನೀಲಾ
ನೀಲಾ
Updated on
ಆನೆಕಲ್: "ನಾನು ರೈಲು ಬರುವುದಕ್ಕೆ ಐದು ನಿಮಿಷಕ್ಕೆ ಮುನ್ನ ಗೇಟನ್ನು ಹಾಕುತ್ತೇನೆ. ಕೆಲವೊಮ್ಮೆ ವಾಹನ ಚಾಲಕರು ನನ ಮೇಲೆ ಮನಬಂದಂತೆ ಹರಿಹಾಯುತ್ತಾರೆ. ಆದರೆ ನಾನು ಅವರಿಗೆ ನಿಮ್ಮ ಜೀವ ಎಷ್ಟು ಮುಖ್ಯ ಎನ್ನುವುದನ್ನು ನಿಧಾನವಾಗಿ ಮನವರಿಕೆ ಮಾಡುತ್ತೇನೆ"  56 ವರ್ಷದ ನೀಲಾ ಹೇಳಿದ್ದಾರೆ. ಇವರು ನೈಋತ್ಯ ರೈಲ್ವೆ ಮಂಡಳಿಯಲ್ಲಿ ಗೇಟ್ ವುಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಆನೆಕಲ್ ಸಮೀಪದ ಮರಸೂರ್ ನಲ್ಲಿ ಈಕೆ ಗೇಟ್ ವುಮನ್ ಆಗಿದ್ದು ಈಕೆ ಮೂಲತಃ ತಮಿಳುನಾಡಿನ ಧರ್ಮಪುರಿಗೆ ಸೇರಿದವರು. ನೀಲಾ ಹಾಗೂ ಆಕೆಯ ಪತಿ ತಿರುನಾವುಕರಸು ಅವರು  45 ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದಾರೆ. ನೀಲಾ ಸುಮಾರು 14 ವರ್ಷಗಳ ಹಿಂದೆ ಗೇಟ್ ವುಮನ್ ಆಗಿ ಸೇವೆಗೆ ಸೇರಿಕೊಂಡಿದ್ದು ಕಳೆದ ಏಳು ವರ್ಷಗಳಿಂಡ ಮರಸೂರ್ ನಲ್ಲಿ ಆಕೆ ಕಾರ್ಯನಿರ್ವಹಿಸುತ್ತಿದ್ದಾರೆ.
"ನಾವು ಶಿಫ್ಟ್ ಮೇಲೆ ಕೆಲಸ ಮಾಡುತ್ತಿದ್ದೇವೆ,. ಬೆಳಿಗ್ಗೆ ಏಳರಿಂದ ರಾತ್ರಿ ಏಳರತನಕ ಒಂದು ಪಾಳಿ, ಅಲ್ಲವೇ ರಾತ್ರಿ ಏಳರಿಂದ ಬೆಳಿಗ್ಗೆ ಏಳರ ತನಕದ ಪಾಳಿ. ಈ ಎರಡೂ ಪಾಳಿಗಳಲ್ಲಿ ಪ್ರತಿದಿನ ಕನಿಷ್ಟ 15 ರಿಂದ 20 ರೈಲುಗಳು ಈ ಗೇಟ್ ಮೂಲಕ ಸಂಚರಿಸುತ್ತವೆ" ನೀಲಾ ಹೇಳಿದ್ದಾರೆ. ನೀಲಾ ರಾತ್ರಿ ಪಾಳಿಯಲ್ಲಿ ಸಹ ಎಚ್ಚರವಾಗಿದ್ದು ಕೆಲಸ ನಿರ್ವಹಿಸಬಲ್ಲರು. "ಗೇಟ್ ಮುಚ್ಚದೆ ಐದೇ ನಿಮಿಷ ನಿದ್ರಿಸಿದರೆ ಸಹ ಅಪಘಾತವಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹಾಗಾಗಿ ನಾನೇನಾದರೂ ಓದುತ್ತಾ, ಇಲ್ಲವೆ ಇನ್ನೇನಾದರೂ ಮಾಡುತ್ತಾ ರಾತ್ರಿ ವೇಳೆ ಸದಾ ಎಚ್ಚರದಲ್ಲಿರುತ್ತೇನೆ."
ಕುತೂಹಲಕಾರಿ ಸಂಗತಿ ಎಂದರೆ ನೀಲಾ ಎಂದೂ ಶಾಲೆಗೆ ತೆರಳಿದವರಲ್ಲ. ಅವರು ಬೈಯಪ್ಪನಹಳ್ಳಿಯಲ್ಲಿದ್ದ ಸಮಯದಲ್ಲಿ ಎನ್ ಜಿಒ ಸದಸ್ಯರೊಬ್ಬರು ಆಕೆಗೆ ಓದುವುದು, ಬರೆಯುವುದನ್ನು ಹೇಳಿಕೊಟ್ಟಿದ್ದರು."ಇದು ನನಗೆ ಪಿಎನ್ ಆರ್ ಸಂಖ್ಯೆಗಳನ್ನು ಬರೆಯಲು ಸಹಾಯಕವಾಗಿದೆ, ಇದುವರೆಗೆ ಗೆ ನನ್ನ ವಿರುದ್ಧ ಯಾವುದೇ ದೂರುಗಳಿಲ್ಲ ಮತ್ತು ಅದು ಸ್ವತಃ ನನಗೆ ಅಭಿಮಾನದ ಸಂಗತಿಯಾಗಿದೆ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com