ಮಲ್ಲೇಶ್ವರ ಕೇಂದ್ರೀಯ ವಿದ್ಯಾಲಯದಲ್ಲಿ ಸೆಕೆಂಡ್ ಶಿಫ್ಟ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

2019ರ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಮಲ್ಲೇಶ್ವರದಲ್ಲಿ ಎರಡನೇ ಶಿಫ್ಟ್ ನ್ನು...
ಕೇಂದ್ರೀಯ ವಿದ್ಯಾಲಯ ಮಲ್ಲೇಶ್ವರ
ಕೇಂದ್ರೀಯ ವಿದ್ಯಾಲಯ ಮಲ್ಲೇಶ್ವರ
ಬೆಂಗಳೂರು: 2019ರ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಮಲ್ಲೇಶ್ವರದಲ್ಲಿ ಎರಡನೇ ಶಿಫ್ಟ್ ನ್ನು ತೆಗೆದುಹಾಕಬೇಕೆಂದು ಕೋರಿ ರಾಜ್ಯ ಮಕ್ಕಳ ಹಕ್ಕು ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ನ್ಯಾಯಪೀಠ, ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ನಿವಾಸಿ ಕೆ ಎಲ್ ಪ್ರವೀಣ್ ಬಾಬು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಕಳೆದ ಕೆಲ ವರ್ಷಗಳಿಂದ ಮಲ್ಲೇಶ್ವರ ಕೇಂದ್ರೀಯ ವಿದ್ಯಾಲಯದಲ್ಲಿ ವಿವಿಧ ತರಗತಿಗಳಿಗೆ ಪ್ರವೇಶ ಬಯಸಿ ಕೋರಿ ಬರುವ ಅರ್ಜಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕಳೆದ ವರ್ಷದಿಂದ ವಿದ್ಯಾಲಯದಲ್ಲಿ ಅಧಿಕಾರಿಗಳು ಮೊದಲ ಶಿಫ್ಟ್ ಜೊತೆಗೆ ಎರಡನೇ ಶಿಫ್ಟ್  ಆರಂಭಿಸಿದ್ದರು.
ಈ ಮಧ್ಯೆ, ಕಳೆದ ವರ್ಷ ಮೇ 25ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿ ಶಾಲೆಯಲ್ಲಿ ಆರಂಭಿಸಿರುವ ಎರಡನೇ ಶಿಫ್ಟ್ ಅವಧಿ ಸರಿಯಾಗಿಲ್ಲ. ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಆಯೋಗ ಕಳೆದ ವರ್ಷ ಆಗಸ್ಟ್ 13ರಂದು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಿಗೆ ಸಮ್ಮನ್ಸ್ ಜಾರಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com