ಉಗ್ರ ಮಸೂದ್ ನ್ನು ಯಾರು ಬಿಟ್ಟಿದ್ದು ಎಂಬುದನ್ನೂ ಹೇಳಿ: ಮೋದಿಗೆ ರಾಹುಲ್ ಸವಾಲು

ಪುಲ್ವಾಮ ದಾಳಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ್ನು ಬಿಜೆಪಿ ಸರ್ಕಾರವೇ ಭಾರತದ ಜೈಲಿನಿಂದ ಬಿಡುಗಡೆ ಮಾಡಿತ್ತು ಎಂಬುದನ್ನು ಹೇಳಿ ಎಂದು ರಾಹುಲ್ ಗಾಂಧಿ
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಹಾವೇರಿ: ಪುಲ್ವಾಮ ದಾಳಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ್ನು ಬಿಜೆಪಿ ಸರ್ಕಾರವೇ ಭಾರತದ ಜೈಲಿನಿಂದ ಬಿಡುಗಡೆ ಮಾಡಿತ್ತು ಎಂಬುದನ್ನು ಹೇಳಿ ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ್ದಾರೆ. 
ಮಾ.09 ರಂದು ಹಾವೇರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಜಮ್ಮು – ಕಾಶ್ಮೀರದ ಪುಲ್ವಾಮದಲ್ಲಿ 40ಕ್ಕೂ ಹೆಚ್ಚು ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾದ ಘಟನೆಗೆ ಬಿಜೆಪಿಯೇ ನೇರ ಹೊಣೆಯಾಗಿದೆ. ಈ ದಾಳಿ ನಡೆಸಿದ್ದು ಜೈಷ್ ಎ ಮೊಹಮ್ಮದ್ ಸಂಘಟನೆ. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಅಪಹರಣಕಾರರ ಒತ್ತಡಕ್ಕೆ ಮಣಿದು ಅದರ ಮುಖ್ಯಸ್ಥ ಮಸೂದ್ ಅಜರ್ ಅವರನ್ನು ಭಾರತದ ಜೈಲಿನಿಂದ ಆಪ್ಘಾನಿಸ್ಥಾನದ ಕಂದಹಾರ್ ಗೆ ಕರೆದುಕೊಂಡು ಹೋಗಿದ್ದು ಹಿಂದಿನ   ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಅದರ ಬಗ್ಗೆಯೂ ಹೇಳಲಿ ಎಂದು ಸವಾಲು ಹಾಕಿದ್ದಾರೆ. 
ಸಚಿವರಾಗಿದ್ದ ಜಸ್ವಂತ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಸಹ ಭಯೋತ್ಪಾದಕರನ್ನು ಬಿಡುಗಡೆ ಮಾಡಲು ಕಂದಹಾರ್ ಗೆ ತೆಳಿದ್ದರು. ಪುಲ್ವಾಮ ಘಟನೆ ಬಗ್ಗೆ ಪ್ರಸ್ತಾಪಿಸುವ ಮೋದಿ ಅವರು, ಮಸೂದ್ ಅಜರ್ ಅವರನ್ನು ಬಿಡುಗಡೆ ಮಾಡಿದ್ದು ಯಾಕೆ ಎನ್ನುವುದನ್ನು ಸಹ ತಮ್ಮ ಭಾಷಣದಲ್ಲಿ ಹೇಳಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದರು. 
ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದಲ್ಲಿ ಉದ್ಯೋಗ ಸೃಷ್ಟಿ  ದಾಖಲೆ ಪ್ರಮಾಣದಲ್ಲಿ ಕುಸಿದಿದ್ದು, ಬರುವ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಬಡವರಿಗೆ ಕನಿಷ್ಠ ಆದಾಯ ಖಾತರಿಪಡಿಸುವ  ಕಾನೂನು ಜಾರಿಗೆ ತರಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಕನಿಷ್ಠ ಆದಾಯ ನೀಡುವ ಮಸೂದೆ ಮಂಡಿಸಲಾಗುವುದು. ಇದರಿಂದ ಉದ್ಯೋಗ ದೊರೆಯದ ಯುವ ಸಮೂಹಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಪ್ರತಿಯೊಬ್ಬರ ಖಾತೆಗೂ ನೇರವಾಗಿ ಹಣ ಜಮಾ ಮಾಡಲಾಗುವುದು ಎಂದು ಹೇಳಿದರು. 
ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಸರ್ಕಾರ ಕನಿಷ್ಠ ಆದಾಯ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಹೆಚ್ಚು ಯುವ ಜನಾಂಗಕ್ಕೆ ಅನುಕೂಲವಾಗುತ್ತಿದೆ. ಈ ಕಾರ್ಯಕ್ರಮದಿಂದ ಹೆದರಿಕೊಂಡಿರುವ ಪ್ರಧಾನಿ ಮೋದಿ, ಒಬ್ಬ ರೈತರಿಗೆ ದಿನಕ್ಕೆ ಮೂರುವರೆ ರೂಪಾಯಿಯನ್ನು ಖಾತೆಗೆ ಜಮಾ ಮಾಡುವ " ರೈತ ಸಮ್ಮಾನ್ " ಯೋಜನೆ ಘೋಷಿಸಿದ್ದಾರೆ. ಸಣ್ಣ ಪ್ರಮಾಣದ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು. 
ಕಳೆದ ಐದು ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ರೈತರು, ಬಡವರ ಪರ ಆಡಳಿತ ನಡೆಸಿಲ್ಲ. ಕೆಲವು ಕಾರ್ಪೋರೇಟ್ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸಿತು. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಸ್ಥರು, ಸಣ್ಣ ಕೈಗಾರಿಕೆಗಳಿಗಾಗಿ ಈ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಆಪಾದಿಸಿದರು. 
ಫ್ರಾನ್ಸ್ ಜತೆ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಲ್ಲಿ ಪ್ರಧಾನಿ ಮೋದಿ ಅವರು 30 ಸಾವಿರ ರೂ ಕಳ್ಳತನ ಮಾಡಿ ಅದನ್ನು ಅನಿಲ್ ಅಂಬಾನಿ ಜೇಬಿಗೆ ಹಾಕಿದ್ದಾರೆ. ದೇಶದ ಪ್ರತಿಷ್ಠಿತ ಎಚ್ಎಎಲ್ ಸಂಸ್ಥೆಯ ಬದಲಿಗೆ ಅನಿಲ್ ಅಂಬಾನಿ ಕಂಪೆನಿಯನ್ನು ಸಹಭಾಗಿದಾರ ಕಂಪೆನಿಯಾಗಿ ಆಯ್ಕೆ ಮಾಡಿಕೊಳ್ಳುವಂತೆ ಮೋದಿ ಅವರು ಫ್ರಾನ್ಸ್ ಅಧ್ಯಕ್ಷರಿಗೆ ಸೂಚಿಸಿದ್ದರು. ದೇಶದ ತುಂಬೆಲ್ಲಾ ಅನಿಲ್ ಅಂಬಾನಿ, ಅದಾನಿ ಅವರದ್ದೇ ಹಾವಳಿಯಾಗಿದೆ.‌ ಪ್ರಧಾನಿ ಮೋದಿ ದೇಶದ ಚೌಕಿದಾರ ಅಲ್ಲ. ಅವರು ಅನಿಲ್ ಅಂಬಾನಿ ಅದಾನಿಯವರ ಚೌಕಿದಾರ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com