ವಿಜಯಪುರ: ಬಸವತತ್ವ ಸಂಪ್ರದಾಯದ ಪ್ರಕಾರ 'ವಿಶೇಷ ರೀತಿಯಲ್ಲಿ' ನವಜೋಡಿಗಳ ವಿವಾಹ

ಕಾಲ ಬದಲಾಗಿದೆ, ಹಾಗೆಯೇ ಸಂಸಾರ, ಪತಿ-ಪತ್ನಿಯರ ಬಾಂಧವ್ಯದ ಅರ್ಥ ಸಹ ಬದಲಾಗುತ್ತಿದೆ. ಪಿತೃ ಪ್ರಧಾನವಾಗಿರುವ ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟು ಹೊಸ ಹಾದಿಯಲ್ಲಿ...
ವಿಜಯಪುರ: ಬಸವತತ್ವ ಸಂಪ್ರದಾಯದ ಪ್ರಕಾರ 'ವಿಶೇಷ ರೀತಿಯಲ್ಲಿ' ನವಜೋಡಿಗಳ ವಿವಾಹ
ವಿಜಯಪುರ: ಬಸವತತ್ವ ಸಂಪ್ರದಾಯದ ಪ್ರಕಾರ 'ವಿಶೇಷ ರೀತಿಯಲ್ಲಿ' ನವಜೋಡಿಗಳ ವಿವಾಹ
ವಿಜಯಪುರ: ಕಾಲ ಬದಲಾಗಿದೆ, ಹಾಗೆಯೇ ಸಂಸಾರ, ಪತಿ-ಪತ್ನಿಯರ ಬಾಂಧವ್ಯದ ಅರ್ಥ ಸಹ ಬದಲಾಗುತ್ತಿದೆ. ಪಿತೃ ಪ್ರಧಾನವಾಗಿರುವ ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟು ಹೊಸ ಹಾದಿಯಲ್ಲಿ ಸಾಗಿ ಗಂಡು-ಹೆಣ್ಣಿನ ಸಮಾನತೆಯನ್ನು ಸಾರುವ ಪ್ರಯತ್ನಗಳು ನಿರಂತರವಾಗಿದೆ. ಈ ನಡುವೆ ವಿಜಯಪುರದ ಎರಡು ಜೋಡಿ  ಒಂದು ಹೆಜ್ಜೆ ಮುಂದೆ ಹೋಗಿ ಹಿಂದೂ ಸಂಪ್ರದಾಯಿಕ ವಿವಾಹದಲ್ಲಿ ಮಾಂಗಲ್ಯ ಧಾರಣೆ ಮಾಡಿಸಿಕೊಳ್ಳಬೇಕಾಗಿರುವ ವಧುಗಳೇ ತಮ್ಮ ಪತಿಯಾಗುವವರಿಗೆ ಮಾಂಗಲ್ಯ(ರುದ್ರಾಕ್ಷಿ) ಕಟ್ಟಿದ್ದಾರೆ!
ಇದೊಂದು ವಿಚಿತ್ರ ಮದುವೆ ಎಂದು ಕರೆಯಬಹುದಾದ ಈ ವಿವಾಹದಲ್ಲಿ ವಧುಗಳು ಹಾಗೂ ವರರು ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದಾರೆ. ಹಾಗೆಯೇ ವಿವಾಹಕ್ಕಾಗಿ ಇವರುಗಳು ' ಶುಭ ಮಹೂರ್ತ'-ಶುಭ ಸಮಯವನ್ನು ನೋಡದೆ ಮದುವೆಯಾಗಿದ್ದಾರೆ.
ಯುವಕರಾದ ಅಮಿತ್ ಹಾಗೂ ಪ್ರಭುರಾಜ್ ಅವರುಗಳು ಪ್ರಿಯಾ ಹಾಗೂ ಅಂಕಿತಾ ಎಂಬ ಯುವತಿಯರನ್ನು ವಿವಾಹವಾಗಿದ್ದು ಇವರು ಹನ್ನೆರಡನೇ ಶತಮಾನದ ಶರಣ ಬಸವಣ್ಣನವರ ಆದರ್ಶದಂತೆ ವಿವಾಹ ಬಂಧನಕ್ಕೆ ಒಳಗಾಇದ್ದಾರೆ. ಸ್ತ್ರೀ ಸಮಾನತೆ ಕುರಿತು ನಾಲ್ವರೂ ಒಳ್ಳೆ ಅಭಿಪ್ರಾಯ ತಾಳಿದ್ದು ತಮ್ಮ ವಿವಾಹದ ಮೂಲಕ ಸಮಾಜಕ್ಕೆ ಹೊಸ ಸಂದೇಶ ರವಾನಿಸಬೇಕೆಂದು ಅವರು ಬಯಸಿದ್ದರು.
ಇನ್ನು ಇದು ವಿಜಯಪುರದಲ್ಲಿ ನಡೆದಿದ್ದು ವಿಜಯಪುರ ಬಸವಣ್ಣನಜನ್ಮಸ್ಥಾನವಿರುವ ಜಿಲ್ಲೆಯೂ ಸಹ ಹೌದೆನ್ನುವುದು ಗಮನಾರ್ಹ. ವಿವಾಹದ ವೇಳೆ ವಧುಗಳ ಪೋಷಕರು ಸಹ ಭಾಗವಹಿಸಿದ್ದು ಅವರು ಸಹ ಬಸವಣ್ಣನ ಕಟ್ಟಾ ಅನುಯಾಯಿಗಳಾಗಿದ್ದರು. ಹಾಗೆಯೇ ತಮ್ಮ ಮಕ್ಕಳ ನಿರ್ಧಾರಕ್ಕೆ ಬೆಂಬಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com