ಲಂಚಕ್ಖಾಗಿ ಬೇಡಿಕೆ: ಉಡುಪಿ ಆರ್‌ಟಿಒ ಅಧಿಕಾರಿ ಸೇರಿ ಇಬ್ಬರ ಬಂಧನ

ಬೆಂಗಳೂರು ಯಲಹಂಕದಲ್ಲಿ ನಡೆಇದ್ದ ಏರೋ ಇಂಡಿಯಾ ಏರ್ ಶೋ ವೇಳೆ ಕಾರುಗಳ ಬೆಂಕಿಗಾಹುತಿಯಾದ ಪ್ರಕರಣದಲ್ಲಿ ಕಾರು ಮಾಲೀಕರ ತೆರಿಗೆ ಮರುಪಾವತಿಗೆ ಸಂಬಂಧಿಸಿ ಲಂಚ ಪಡೆಯುತ್ತಿದ್ದ....
ಲಂಚಕ್ಖಾಗಿ ಬೇಡಿಕೆ: ಉಡುಪಿ ಆರ್‌ಟಿಒ ಅಧಿಕಾರಿ ಸೇರಿ ಇಬ್ಬರ ಬಂಧನ
ಲಂಚಕ್ಖಾಗಿ ಬೇಡಿಕೆ: ಉಡುಪಿ ಆರ್‌ಟಿಒ ಅಧಿಕಾರಿ ಸೇರಿ ಇಬ್ಬರ ಬಂಧನ
ಉಡುಪಿ: ಬೆಂಗಳೂರು ಯಲಹಂಕದಲ್ಲಿ ನಡೆಇದ್ದ ಏರೋ ಇಂಡಿಯಾ ಏರ್ ಶೋ ವೇಳೆ ಕಾರುಗಳ ಬೆಂಕಿಗಾಹುತಿಯಾದ ಪ್ರಕರಣದಲ್ಲಿ ಕಾರು ಮಾಲೀಕರ ತೆರಿಗೆ ಮರುಪಾವತಿಗೆ ಸಂಬಂಧಿಸಿ ಲಂಚ ಪಡೆಯುತ್ತಿದ್ದ ಉಡುಪಿ ಉಪಸಾರಿಗೆ ಆಯುಕ್ತ ಹಾಗೂ ಜಿಲ್ಲಾ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ್  ಸೇರಿ ಇಬ್ಬರು ಅಧಿಕಾರಿಗಳನ್ನು ಉಡುಪಿ ಜಿಲ್ಲಾ ಭ್ರಷ್ಠಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಬಂಧಿತರಲ್ಲಿ ಇನ್ನೋರ್ವನನ್ನು ಆರ್‌ಟಿಒ ಕಛೇರಿಯ ಗುತ್ತಿಗೆ ನೌಕರ ಮುನಾ ಅಲಿಯಾಸ್ ಮುನಾಫ್ ಎಂದು ಗುರುತಿಸಲಾಗಿದೆ.
ಬೆಂಗಳೂರು ಏರ್ ಶೋ ವೇಳೆ ಉಂಟಾಗಿದ್ದ ಬೆಂಕಿ ಅನಾಹುತದ ವೇಳೆ ಉಡುಪಿಯ ವಿಘ್ನೇಶ್ ಎನ್ನುವವರ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.ಹಾಗಾಗಿ ಇದಕ್ಕೆ ಪಾವತಿಯಾಗಬೇಕಾಗಿದ್ದ ತೆರಿಗೆಯಲ್ಲಿ ಸುಮಾರು 65 ಸಾವಿರ ರು. ಮರುಪಾವತಿಯಾಗಬೇಕಾಗಿತ್ತು. ಈ ಸಂಬಂಧ ಕಾರಿನ ತೆರಿಗೆ ವಸೂಲಾತಿಗೆ ವಿಘ್ನೇಶ್ ಆರ್‌ಟಿಒಗೆ ಮನವಿ ಸಲ್ಲಿಸಿದ್ದರು. 
ಮನವಿ ಸ್ವೀಕರಿಸುವ ವೇಳೆ  ಆರ್‌ಟಿಒ ಅಧಿಕಾರಿ ವರ್ಣೇಕರ್ ತಮಗೆ  6,500 ರೂ.  ಕಮಿಷನ್ (ಲಂಚ) ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ವಿಘ್ನೇಶ್ ಈ ಸಂಬಂಧ ಉಡುಪಿ ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಶನಿವಾರ ಬೆಳಿಗ್ಗೆ ವಿಘ್ನೇಶ್ ದೂರು ಸಲ್ಲಿಸಿದ್ದು ಡಿವೈಎಸ್ಪಿ ಮಂಜುನಾಥ ಕೌರಿ ನೇತೃತ್ವದ ತಂಡ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಕಛೇರಿ ಬಾಗಿಲು ಮುಚ್ಚಿ ತನಿಖೆ ಕೈಗೊಳ್ಳಲಾಗಿದ್ದು ಆ ವೇಳೆ ಸಿಕ್ಕಿರುವ ನಗದನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com