ನಂಜನಗೂಡು ಪಂಚ ಮಹಾರಥೋತ್ಸವಕ್ಕೆ ಆರಂಭದಲ್ಲೇ ವಿಘ್ನ: ತುಂಡಾದ ರಥದ ಹಗ್ಗ;3 ಗಂಟೆ ವಿಳಂಬ

ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುವ ವಾರ್ಷಿಕ ಪಂಚ ಮಹಾರಥೋತ್ಸವಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ, ಉತ್ಸವ ಮೂರ್ತಿ ಸ್ಥಾಪಿತ ..
ನಂಜನಗೂಡು ಶ್ರೀಕಂಠೇಶ್ವರ ಜಾತ್ರೆ
ನಂಜನಗೂಡು ಶ್ರೀಕಂಠೇಶ್ವರ ಜಾತ್ರೆ
ಮೈಸೂರು: ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುವ ವಾರ್ಷಿಕ ಪಂಚ ಮಹಾರಥೋತ್ಸವಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ, ಉತ್ಸವ ಮೂರ್ತಿ ಸ್ಥಾಪಿತ ರಥವನ್ನು ಎಳೆಯುವ  ಹಗ್ಗ ತಂಡಾಗಿದೆ. 
ಬೆಳಗ್ಗೆ 6.40 ರ ಮೀನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಬೇಕಿತ್ತು, ದೇವಾಲಯದ ಎಡಭಾಗದಲ್ಲಿ ರಥದ ಚಕ್ರಗಳನ್ನು ಇರಿಸಲಾಗಿತ್ತು, ಬೆಳಗ್ಗೆ 6.40ರ ಶುಭ ಲಗ್ನದಲ್ಲಿ ರಥವನ್ನು ಎಳೆಯಲು ಮುಂದಾದಾಗ ಚಕ್ರ ಸ್ವಲ್ಪವೂ ಉರುಳಲಿಲ್ಲ, ಹೀಗಾಗಿ ಮುಹೂರ್ಥವನ್ನು 7 ಗಂಟೆಗೆ ಮುಂದೂಡಲಾಯಿತು, ಅಂತಿಮವಾಗಿ ಬೆಳಗ್ಗೆ 9.27ಕ್ಕೆ ರಥೋತ್ಸವ ಜರುಗಿತು.
ರಥದ ಹಗ್ಗವನ್ನು ಮೂರು ಬಾರಿ ಬದಲಾಯಿಸಲಾಯಿತು. ಕಡಿಮೆ ಗುಣಮಟ್ಟದ ಹಗ್ಗದಿಂದಾಗಿ ಪದೇ ಪದೇ ತುಂಡಾಗುತ್ತಿತ್ತು, 4ನೇ ಭಾರಿಗೆ ತಂದ ಭಾರೀ ದೊಡ್ಡ ಹಗ್ಗದಿಂದಾಗಿ ರಥ ಮುಂದೆ ಜರುಗಿತು, ಮತ್ತೊಂದು ಅವಕಾಶ ತೆಗೆದುಕೊಳ್ಳಲು ಬಯಸದ ದೇವಾಲಯದ ಆಡಳಿತ ಮಂಡಳಿ ಎರಡು ಅರ್ಥ್ ಮೂವರ್ ಗಳಿಂದ ರಥನ್ನು ತಳ್ಳಿಸಲಾಯಿತು..
ರಥೋತ್ಸವ ನೋಡಲು ಸಾವಿರಾರು ಮಂದಿ ಭಕ್ತರಿಗೆ ನಿರಾಸೆಯಾಯಿತು.ವಿಳಂಬಕ್ಕಾಗಿ ಅಧಿಕಾರಿಗಳನ್ನು ದೂರದೇ ಸುಮ್ಮನೆ ತೆರಳಿದರು, ಕೆಲವರು ಮಾತ್ರ ತಮ್ಮ ಹಣೆಬರಹ ಧೂಷಿಸಿ ತೆರಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com