ಮತಕೇಂದ್ರ, ಅಭ್ಯರ್ಥಿಗಳ ಮಾಹಿತಿ ಈಗ ಬೆರಳ ತುದಿಯಲ್ಲಿ! ಚುನಾವಣಾ ಆಯೋಗ ಹೊಸ ಆಪ್ ಬಿಡುಗಡೆ

ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು "ಚುನಾವಣಾ" ಎಂಬ ಹೆಸರಿನ ಜಿಯೋಗ್ರಾಫಿಕಲ್ ಇನ್ಫಾರ್ಮೇಶನ್ ಸಿಸ್ಟಮ್ ಒಳಗೊಂಡಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದೆ.ಇ
ಸಂಗ್ರಹ ಚಿತ್ರೆ
ಸಂಗ್ರಹ ಚಿತ್ರೆ
Updated on
ಬೆಂಗಳೂರು: ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು "ಚುನಾವಣಾ" ಎಂಬ ಹೆಸರಿನ ಜಿಯೋಗ್ರಾಫಿಕಲ್  ಇನ್ಫಾರ್ಮೇಶನ್ ಸಿಸ್ಟಮ್ ಒಳಗೊಂಡಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದೆ.ಇದರ ಮೂಲಕ ಮತದಾರರು  ತಮ್ಮ ಸಮೀಪದ ಮತದಾನ ಕೇಂದ್ರಗಳನ್ನು ಕಂಡುಕೊಳ್ಳಲಿದ್ದಾರೆ.ಕಳೆದ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ಬಳಸಿದ್ದ ಈ ಅಪ್ಲಿಕೇಷನ್ ಅನ್ನು ಈ ಬಾರಿ ಸಾರ್ವಜನಿಕರಿಗೆ ಸಂಪೂರ್ಣ ಸಹಕಾರ ಒದಗಿಸುವಂತೆ ಅಭಿವೃದ್ದಿಪಡಿಸಿ ಬಿಡುಗಡೆಗೊಳಿಸಲಾಗಿದೆ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಮಂಗಳವಾರ ಹೊಸ ವೈಶಿಷ್ಟ್ಯಗಳಿಂದ ಕೂಡಿದ ಈ ಆಪ್ ನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಮತದಾರರು ಮತದಾನ ಕೇಂದ್ರಕ್ಕೆ ತೆರಳಲು ಈ ಆಪ್ಮಾರ್ಗದರ್ಶನ ನೀಡಲಿದೆ.ಅದೇ ಅಲ್ಲದೆ ಇಪಿಐಸಿ ಸಂಖ್ಯೆಯನ್ನು ನಮೂದಿಸುವ ಮೂಲಕ ಮತದಾರರು ತುರ್ತು ಪರಿಸ್ಥಿತಿಗಳಲ್ಲಿ ಸಮೀಪದ ಆಸ್ಪತ್ರೆ ಹಾಗೂ ಪೋಲೀಸ್ ಠಾಣೆಗಳಿಗೆ ಸಹ ಸಂಪರ್ಕಿಸಬಹುದು. ಅಲ್ಲದೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಅವರ ಭಾವಚಿತ್ರವನ್ನೊಳಗೊಂಡ ವಿವರ ಸಹ ಈ ಆಪ್ ನಲ್ಲಿ ಲಭ್ಯವಿದೆ ಎಂದು ಕುಮಾರ್ ಹೇಳಿದ್ದಾರೆ.
ಈ ಅಪ್ಲಿಕೇಶನ್ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಮತದಾನ ಕೇಂದ್ರಕ್ಕೆ ತೆರಳಲು ಅಗತ್ಯ ಸಹಾಯ ಒದಗಿಸಲು ನೆರವಾಗಲಿದೆ. ವಿಶೇಷ ಚೇತನರು ಈ ಆಪ್ ಬಳಸಿ ಗಾಲಿಕುರ್ಚಿ ಸಹಾಯ ಪಡೆದು ಮತಕೇಂದ್ರಕ್ಕೆ ತೆರಳಬಹುದು."ವಿಶೇಷಚೇತನರು ಮೊದಲು ತಮಗಾಗಿ ಬೇಕಾದ ಸೌಲಭ್ಯಕ್ಕೆ ನೊಂದಾವಣೆ ಮಾಡಿಸಿಕೊಳ್ಳಬೇಕು. ಇದರಿಂದ ನಾವು ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಹಾಯವಾಗಲಿದೆ.2018 ರಲ್ಲಿ ನಾವು 14,000 ಗಾಲಿಕುರ್ಚಿಗಳನ್ನು ಒದಗಿಸಿದ್ದೆವು. ಇದರಲ್ಲಿ  13,000 ಗಾಲಿಕುರ್ಚಿಗಳನ್ನು ಇತರೆ ಇಲಾಖೆಗಳಿಂದ ಎರವಲು ಪಡೆಇದ್ದೆವು. ಓರ್ವ ಮೊಬೈಲ್ ಬಳಕೆದಾರರು ಗರಿಷ್ಠ ಐದು ಇಪಿಐಸಿ ಸಂಖ್ಯೆಗಳಿಗೆ ಗಾಲಿಕುರ್ಚಿಗಳನ್ನು ಪಡೆಯಲು ಅವಕಾಶವಿದೆ ಎಂದು ಕುಮಾರ್ ವಿವರಿಸಿದ್ದಾರೆ.
ಮತದಾನದ ದಿನ  ಕ್ಯೂ ಸ್ಥಿತಿಯನ್ನು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ಬಳಸಬಹುದು. ಎಣಿಕೆಯ ದಿನದಂದು, ಅಪ್ಲಿಕೇಶನ್ ಪ್ರತಿ ಎರಡು ಗಂಟೆಗಳಿಗೊಮ್ಮೆ ನವೀಕರಿಸಲ್ಪಡಲಿದೆ.ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ  (ಆಂಡ್ರಾಯ್ಡ್ ಬಳಕೆದಾರರು) ಮತ್ತು ಆಪ್ ಸ್ಟೋರ್ (ಆಪಲ್ ಬಳಕೆದಾರರು) ಡೌನ್ ಲೋಡ್ ಮಾಡಿಕೊಳ್ಳಬಹುದು.  ಇದು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com